ಆ ನಟಿ ನನ್ನನ್ನು ಪದೇ ಪದೇ ರೇಪ್ ಮಾಡಿದ್ಲು ಎಂದ ರಾಖಿ, ನಟಿ ತನುಶ್ರೀ ದತ್ತಾ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ರಾಖಿ ಸಾವಂತ್…..!

Follow Us :

ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುವ ನಟಿಯರಲ್ಲಿ ಬಾಲಿವುಡ್ ಹಾಟ್ ಬಾಂಬ್ ರಾಖಿ ಸಾವಂತ್ ಒಬ್ಬರಾಗಿದ್ದಾರೆ. ಆಕೆ ಸಿನೆಮಾಗಳಿಗಿಂತ ಹೆಚ್ಚು ವೈಯುಕ್ತಿಕ ವಿಚಾರಗಳಿಂದ ಸುದ್ದಿಯಾದರು. ಅದರಲ್ಲೂ ಮೈಸೂರು ಮೂಲದ ಉದ್ಯಮಿ ಆದಿಲ್ ಖಾನ್ ದುರಾನಿ ಎಂಬಾತನ್ನು ಪ್ರೀತಿಸಿ ಎರಡನೇ ಮದುವೆಯಾದರು. ಬಳಿಕ ಆತನೊಂದಿಗೆ ಸಹ ಬೇರೆಯಾದರು. ಅವರ ಲವ್ ಸ್ಟೋರಿ, ಮದುವೆ, ಬ್ರೇಕಪ್ ಯಾವುದೇ ಸಿನೆಮಾ ಸ್ಟೋರಿಗಿಂತಲೂ ಕಡಿಮೆಯಿಲ್ಲ ಎಂದು ಹೇಳಬಹುದು. ಇದೀಗ ಮತ್ತೊಂದು ವಿಡಿಯೋ ಮೂಲಕ ಸುದ್ದಿಯಾಗಿದ್ದಾರೆ. ಈ ವಿಡಿಯೋದಲ್ಲಿ ಆಕೆ ನಟಿ ತನುಶ್ರೀ ದತ್ತಾ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ವಿವಾದಗಳಿಗೆ ಕೇರಾಫ್ ಎಂದೇ ಕರೆಯಲಾಗುವ ರಾಖಿ ಸಾವಂತ್ ಸದಾ ಏನೋ ಒಂದು ವಿಚಾರಕ್ಕೆ ಸುದ್ದಿಯಲ್ಲೇ ಇರುತ್ತಾರೆ. ಯಾವುದೇ ವಿಚಾರವಾದರೂ ಸಹ ಹಿಂದೆ ಮುಂದೆ ನೋಡದೇ ಮಿಡಿಯಾ ಮುಂದೆ ಮಾತನಾಡುತ್ತಾರೆ. ಅದರಲ್ಲೂ ಆಕೆ ತನ್ನ ವೈಯುಕ್ತಿಕ ವಿಚಾರಗಳಿಂದ ಸಿಕ್ಕಾಪಟ್ಟೆ ಸುದ್ದಿಯಾದರು. ರಾಖಿ ತನ್ನ ಮೊದಲ ಪತಿ ರಿತೇಶ್ ನಿಂದ ವಿಚ್ಚೇದನ ಪಡೆದುಕೊಂಡರು. ಬಳಿಕ ಕರ್ನಾಟಕದ ಆದಿಲ್ ದುರಾನಿ ಎಂಬ ಯುವಕನೊಂದಿಗೆ ಪ್ರೇಮಾಯಣ ಸಾಗಿಸಿದರು. ಯಾರಿಗೂ ತಿಳಿಯದೇ ವಿವಾಹವಾದರು. ಜೊತೆಗೆ ಆಕೆ ಇಸ್ಲಾಂ ಧರ್ಮಕ್ಕೆ ಮತಾಂತರ ಸಹ ಆಗಿದ್ದರಂತೆ. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಆಕೆ ಆದಿಲ್ ನಿಂದ ಸಹ ದೂರವಾದರು. ಇದೀಗ ಆದಿಲ್ ಹಾಗೂ ರಾಖಿ ಸಾವಂತ್ ಒಬ್ಬರ ಮೇಲೋಬ್ಬರು ಆರೋಪಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದೀಗ ರಾಖಿ ಸಾವಂತ್ ಹಳೇಯ ವಿಡಿಯೋ ಒಂದು ವೈರಲ್ ಆಗುತ್ತಿದೆ.

ನಟಿ ತನುಶ್ರೀ ದತ್ತಾ ರವರ ಮೇಲೆ ರಾಖಿ ಶಾಕಿಂಗ್ ಹೇಳಿಕೆ ನೀಡಿದ ಹಳೇಯ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್  ಆಗುತ್ತಿದೆ. ಈ ವಿಡಿಯೋದಲ್ಲಿ ನಟಿ ತನುಶ್ರೀ ತನ್ನ ಮೇಲೆ ಪದೇ ಪದೇ ಅತ್ಯಾಚಾರ ಮಾಡಿದ್ದಾಗಿ ಹೇಳಿದ್ದಾರೆ. ತನುಶ್ರೀ ದತ್ತಾ ವಿರುದ್ದ ಸಲಿಂಗಕಾಮದ ಆರೋಪವನ್ನು ಮಾಡಿದ್ದಾರೆ. ತನುಶ್ರೀ ಸಲಿಂಗಕಾಮಿ, ನಾನು ಆಕೆಯ ಸ್ನೇಹಿತೆಯಾಗಿದ್ದೆ. ಆಕೆ ನನ್ನ ಮೇಲೆ ಪದೇ ಪದೇ ಅತ್ಯಾಚಾರ ನಡೆಸಿದ್ದಾರೆ ಎಂದು ರಾಖಿ ವಿಡಿಯೋದಲ್ಲಿ ಹೇಳಿದ್ದಾರೆ. ಇದು ಸುಮಾರು ವರ್ಷಗಳ ಹಿಂದಿನ ಮಾತು. ನಾನು ತನುಶ್ರೀ ಮನೆಗೆ ಹೋಗಿದ್ದಾಗ ಆಕೆ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಅದಕ್ಕೆ ಸಂಬಂಧಿಸಿದ ಸಾಕ್ಷಿಗಳು ಸಹ ನನ್ನ ಬಳಿಯಿದೆ. ಮಿಟೂ ಅಭಿಯಾನ ದೇಶದಲ್ಲಿ ಸದ್ದು ಮಾಡುತ್ತಿದ್ದ ಸಮಯದಲ್ಲಿ ರಾಖಿ ಈ ವಿಡಿಯೋ ಮೂಲಕ ಹೇಳಿಕೆ ನೀಡಿದ್ದರು. ಇದೀಗ ಮತ್ತೆ ಈ ವಿಡಿಯೋ ವೈರಲ್ ಆಗುತ್ತಿದೆ.

ಇನ್ನೂ ಈ ಸಂಬಂಧ ರಾಖಿ ಸಾವಂತ್ ವಿರುದ್ದ ತನುಶ್ರೀ ದತ್ತಾ ನ್ಯಾಯಲಯದ ಮೊರೆ ಹೋಗಿದ್ದರು. ಈ ಪ್ರಕರಣದಡಿ ರಾಖಿ ಸಾವಂತ್ ತನುಶ್ರೀ ದತ್ತಾ ಬಳಿ ಕ್ಷಮಾಪಣೆ ಸಹ ಕೋರಿದ್ದರು ಎಂದು ಹೇಳಲಾಗಿತ್ತು. ಇನ್ನೂ ರಾಖಿ ಸಾವಂತ್ ಕೆಲವು ದಿನಗಳ ಹಿಂದೆಯಷ್ಟೆ ಮೆಕ್ಕಾಗೆ ಹೋಗಿ ಬಂದಿದ್ದು, ತನ್ನನ್ನು ರಾಖಿ ಎಂದು ಕರೆಯಬೇಡಿ, ಫಾತಿಮಾ ಎಂದು ಕರೆಯಿರಿ ಎಂದು ಹೇಳಿದ್ದ ವಿಡಿಯೋ ಸಹ ವೈರಲ್ ಆಗಿತ್ತು.