Film News

ನನ್ನ ಸಕ್ಸಸ್ ಗೆ ಮುಖ್ಯ ಕಾರಣ ರಶ್ಮಿ, ನನ್ನ ಜೀವನದಲ್ಲಿ ಎಲ್ಲರಿಗಿಂತಲೂ ಆಕೆ ಹೆಚ್ಚು ಎಂದು ಸುಡಿಗಾಲಿ ಸುಧೀರ್…..!

ತೆಲುಗಿನ ಖ್ಯಾತ ತೆಲುಗು ಕಾಮಿಡಿ ಶೋ ಜಬರ್ದಸ್ತ್ ಮೂಲಕ ಅನೇಕ ಕಲಾವಿದರು ಇಂದು ಸಿನೆಮಾಗಳಲ್ಲಿ ನಟಿಸುತ್ತಾ ಖ್ಯಾತಿ ಪಡೆದುಕೊಂಡಿದ್ದಾರೆ. ಈ ಶೋನಲ್ಲಿ ರಂಜಿಸಿದ ಅನೇಕ ಕಲಾವಿದರು ಇಂದು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಅವರಲ್ಲಿ ಸುಡಿಗಾಲಿ ಸುಧೀರ್‍ ಸಹ ಒಬ್ಬರಾಗಿದ್ದಾರೆ. ಈಗಾಗಲೇ ಕೆಲವೊಂದು ಸಿನೆಮಾಗಳ ಮೂಲಕ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ. ಜೊತೆಗೆ ಸುಧೀರ್‍ ಹಾಗೂ ರಶ್ಮಿ ನಡುವಣ ಕೆಮಿಸ್ಟ್ರಿ ಎಲ್ಲರನ್ನೂ ರಂಜಿಸುತ್ತಿರುತ್ತದೆ. ಇದೀಗ ಸುಧೀರ್‍ ನನ್ನ ಸಕ್ಸಸ್ ಗೆ ರಶ್ಮಿ ಮುಖ್ಯ ಕಾರಣ ಎಂದು ಹೇಳಿದ್ದು, ಆತನ ಕಾಮೆಂಟ್ಸ್ ವೈರಲ್ ಆಗಿದೆ.

ನಟ ಸುಧೀರ್‍ ಇತ್ತೀಚಿಗಷ್ಟೆ ಜಬರ್ದಸ್ತ್ ಶೋ ನಿಂದ ಹೊರಹೋಗಿದ್ದು, ಬೇರೆ ಶೋಗಳ ಮೂಲಕ ಪುಲ್ ಆಕ್ಟೀವ್ ಆಗುತ್ತಾರೆ ಎಂದುಕೊಳ್ಳಲಾಗಿತ್ತು. ಆದರೆ ಆತ ಮಾತ್ರ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಸಿನೆಮಾಗಳಲ್ಲಿ ಆಫರ್‍ ಗಳು ಬರುತ್ತಿರುವ ಕಾರಣದಿಂದ ಆತ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರು ಎಂದುಕೊಂಡಿದ್ದರು. ಆದರೆ ಆತನಿಗೆ ಸಿನೆಮಾಗಳಲ್ಲಿ ಆಫರ್‍ ಗಳು ಬರುತ್ತಿದ್ದ ಕಾರಣದಿಂದ ಸುಧೀರ್‍ ಕಿರುತೆರೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಸ್ಪೇಷಲ್ ಈವೆಂಟ್ಸ್ ಗಳಲ್ಲಿ ಆಗಾಗ ಬಂದು ಸದ್ದು ಮಾಡುತ್ತಿರುತ್ತಾರೆ. ಇನ್ನೂ ರಶ್ಮಿ ಹಾಗೂ ಸುಧೀರ್‍ ನಡುವೆ ಪ್ರೇಮಾಯಣ ಸಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಲೇ ಇರುತ್ತದೆ. ಆಫ್ ಸ್ಕ್ರೀನ್ ನಲ್ಲಿ ಅವರ ನಡುವೆ ಕೆಮೆಸ್ಟ್ರಿ ಇದೆಯೋ ಇಲ್ಲವೋ, ಆದರೆ ಆನ್ ಸ್ಕ್ರೀನ್ ನಲ್ಲಿ ಮಾತ್ರ ಇಬ್ಬರೂ ಪ್ರೇಮ ಪಕ್ಷಿಗಳಂತೆ ನಟಿಸುತ್ತಿರುತ್ತಾರೆ.

ಇದೀಗ ಖ್ಯಾತ ಚಾನಲ್ ಒಂದರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸುಧೀರ್‍ ಹಾಗೂ ರಶ್ಮಿ ಸಹ ಭಾಗವಹಿಸಿದ್ದರು. ಈ ವೇಳೆ ಇಬ್ಬರೂ ನಿಜಮೇ ಚೆಬುತುನ್ನಾ ಜಾನೆ ಜಾನಾ ಎಂಬ ಹಾಡಿಗೆ ಭರ್ಜರಿಯಾಗಿ ನೃತ್ಯ ಮಾಡಿದ್ದರು. ಜೊತೆಗೆ ಸ್ಕ್ರೀನ್ ಮೇಲೆ ರಶ್ಮಿ ಹಾಗೂ ಸುಧೀರ್‍ ರವರ ಹಳೇಯ ವಿಡಿಯೋ ಸಹ ಪ್ರದರ್ಶನ ಮಾಡಿದರು. ಈ ವೇಳೆ ಸುಧೀರ್‍ ಹಾಗೂ ರಶ್ಮಿ ಇಬ್ಬರೂ ಎಮೋಷನಲ್ ಆದರು. ಇದು ರಶ್ಮಿ ಜೊತೆಗೆ ನನ್ನ ಬ್ಯೂಟಿಪುಲ್ ಜರ್ನಿ ಸುಧೀರ್‍ ಹೇಳಿದ್ದಾರೆ. ಈ ವೇಳೆ ಗೆಟಪ್ ಸೀನು ಅಂದರೇ, ಬ್ಯೂಟಿಪುಲ್ ಜರ್ನಿ ಅಥವಾ ಲವ್ ಜರ್ನಿ ಎಂದು ಪ್ರಶ್ನೆ ಮಾಡಿದ್ದಾರೆ.

ಈ ವೇಳೆ ಸುಧೀರ್‍ ರಶ್ಮಿ ತುಂಬಾ ಮೃದುವಾದ ಮನಸ್ಥಿತಿ ಹೊಂದಿದ್ದಾಳೆ. ನನ್ನವರೆಗೂ ಎಲ್ಲರಿಗಿಂತಲೂ ರಶ್ಮಿ ಹೆಚ್ಚು. ನಿಜ ಹೇಳಬೇಕಾದರೇ ನನ್ನ ಜರ್ನಿಯಲ್ಲಿ, ನನ್ನ ಸಕ್ಸಸ್ ನಲ್ಲಿ ರಶ್ಮಿ ಪ್ರಮುಖ ಪಾತ್ರ ವಹಿಸುತ್ತಾಳೆ ಎಂದು ಕಾಮೆಂಟ್ಸ್ ಮಾಡಿದ್ದಾರೆ. ಸದ್ಯ ಸುಧೀರ್‍ ನೀಡಿದ ಈ ಕಾಮೆಂಟ್ ಗಳು ಹಾಟ್ ಟಾಪಿಕ್ ಆಗಿದೆ.

Most Popular

To Top