Film News

ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ ರಾಜಮೌಳಿ-ಮಹೇಶ್ ಬಾಬು ಪೊಟೋ….!

ಸ್ಟಾರ್‍ ಡೈರೆಕ್ಟರ್‍ ರಾಜಮೌಳಿ RRR ಸಿನೆಮಾದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದುಕೊಂಡಿದ್ದಾರೆ. ಅದರಲ್ಲೂ ಆಸ್ಕಾರ್‍ ಅವಾರ್ಡ್ ಪಡೆದುಕೊಂಡ ಬಳಿಕ ಅವರ ಹೆಸರು ಮತಷ್ಟು ಖ್ಯಾತಿ ಪಡೆದುಕೊಂಡಿದೆ. RRR ಸಿನೆಮಾದ ಬಳಿಕ ರಾಜಮೌಳಿ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ರವರ ಸಿನೆಮಾ ನಿರ್ದೇಶನ ಮಾಡಲಿದ್ದಾರೆ. ಈ ಸಿನೆಮಾ ಮೇಲೆ ಈಗಾಗಲೇ ಭಾರಿ ಹೈಪ್ ಕ್ರಿಯೇಟ್ ಆಗಿದೆ. ಮೂಲಗಳ ಪ್ರಕಾರ ಈ ಭಾರಿ ಬಜೆಟ್ ನಲ್ಲಿ ಈ ಸಿನೆಮಾ ಸೆಟ್ಟೇರಲಿದೆ ಎಂದು ಹೇಳಲಾಗುತ್ತಿದೆ.

ನಿರ್ದೇಶಕ ರಾಜಮೌಳಿ ನಿರ್ದೇಶನದ RRR ಸಿನೆಮಾದ ನಾಟು ನಾಟು ಹಾಡಿಗೆ ಆಸ್ಕಾರ್‍ ಅವಾರ್ಡ್ ಲಭಿಸಿದ್ದು, ಅವರ ಜವಾಬ್ದಾರಿ ಮತಷ್ಟು ಏರಿದೆ. ಇದೀಗ ರಾಜಮೌಳಿಯವರ ಮುಂದಿನ ಸಿನೆಮಾದ ಬಗ್ಗೆ ಭಾರಿ ನಿರೀಕ್ಷೆ ಮೂಡುವಂತೆ ಮಾಡಿದೆ. ಮಹೇಶ್ ಬಾಬು ರವರ MAHESH29 ಸಿನೆಮಾ ನಿರ್ದೇಶನ ಮಾಡುತ್ತಿದ್ದಾರೆ ರಾಜಮೌಳಿ.  ಇನ್ನೂ ಸಿನೆಮಾ ಘೋಷಣೆಯಾಗಿದ ಬಳಿಕ ಈ ಸಿನೆಮಾದ ಬಗ್ಗೆ ಅನೇಕ ವಿಚಾರಗಳು ಹರಿದಾಡುತ್ತಿದ್ದು, ಸಿನೆಮಾ ಮೇಲಿನ ಹೈಪ್ ಮತಷ್ಟು ಏರಿದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಈ ಸಿನೆಮಾದ ಬಜೆಟ್ 800-1000 ಕೋಟಿ ಇರಬಹುದು ಎನ್ನಲಾಗುತ್ತಿದೆ. ಈ ಸಿನೆಮಾದಲ್ಲಿ ಮಹೇಶ್ ಬಾಬು ರವರ ಜೊತೆಗೆ ಹಾಲಿವುಡ್ ಹಿರೋಯಿನ್ ರವರನ್ನು ಸಹ ಕರೆತರುವುದಾಗಿ ಹೇಳಲಾಗುತ್ತಿದೆ.

ಇನ್ನೂ ಈ ಸಿನೆಮಾದಲ್ಲಿ ಹಾಲಿವುಡ್ ತಂತ್ರಜ್ಞರು ಕೆಲಸ ಮಾಡಲಿದ್ದಾರಂತೆ. ಆಕ್ಷನ್ ಅಂಡ್ ಅಡ್ವೇಂಚರ್‍ ಕಥೆಯುಳ್ಳ ಈ ಸಿನೆಮಾ ಅಮೇಜಾನ್ ಫಾರೆಸ್ಟ್ ಪ್ರಾಂತ್ಯದಲ್ಲಿ ಶೂಟ್ ಮಾಡಲಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. ಈ ಸಿನೆಮಾ ಪ್ರಪಂಚನ್ನು ಪ್ರಯಟನೆ ಮಾಡುವಂತಹ ಸಾಹಸ ಮಾಡುವ ವ್ಯಕ್ತಿಯ ಕಥೆಯಾಗಿರಲಿದೆ ಎಂದು ಹೇಳಲಾಗುತ್ತಿದೆ. ಈ ಸಿನೆಮಾಗೆ RRR ರೈಟರ್‍ ವಿಜಯೇಂದ್ರ ಪ್ರಸಾದ್ ಕಥೆಯನ್ನು ಬರೆದಿದ್ದಾರೆ ಎನ್ನಲಾಗಿದೆ. ಇದೀಗ ಸೋಷಿಯಲ್ ಮಿಡಿಯಾವನ್ನು ಶೇಕ್ ಮಾಡುವಂತಹ ಪೊಟೋ ಒಂದು ವೈರಲ್ ಆಗಿದೆ. ರಾಜಮೌಳಿ ಹಾಗೂ ಮಹೇಶ್ ಬಾಬು ಮಾತನಾಡಿಕೊಳ್ಳುತ್ತಿರುವ ಪೊಟೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ. ಅವರ ಪೊಟೋ ಕಾಣಿಸಿಕೊಂಡ ಕಡಿಮೆ ಸಮಯದಲ್ಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇನ್ನೂ ರಾಜಮೌಳಿ ಹಾಗೂ ಮಹೇಶ್ ಯಾವಾಗ ಭೇಟಿಯಾದರು. ಯಾವ ಸಂದರ್ಭದಲ್ಲಿ ಎಂಬ ಚರ್ಚೆಗಳು ಶುರುವಾಗಿದೆ.

ಇನ್ನೂ ಮೂಲಗಳ ಪ್ರಕಾರ ಈ ವರ್ಷವೇ ರಾಜಮೌಳಿ ಮಹೇಶ್ ಬಾಬು ಕಾಂಬಿನೇಷನ್ ನ ಸಿನೆಮಾ ಸೆಟ್ಟೇರಲಿದೆಯಂತೆ. ಪ್ರೀ ಪ್ರೊಡಕ್ಷನ್ ಕೆಲಸಗಳೂ ಸಹ ಶುರುವಾಗಿದೆಯಂತೆ. ಸದ್ಯ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಷನ್ ನಲ್ಲಿ SSMB28 ಸಿನೆಮಾ ಶೂಟಿಂಗ್ ಭರದಿಂದ ಸಾಗುತ್ತಿದೆ.

Most Popular

To Top