ನನ್ನು ಮಧ್ಯೆದಲ್ಲೆ ಬಿಟ್ಟು ಬಿಟ್ಟೆ, ನನ್ನ ಜೀವನ ಅತ್ಯಂತ ಧಾರುಣವಾಗಿದೆ ಎಂದು ಅಳುತ್ತಾ ಎಮೋಷನಲ್ ಆದ ದೀಪ್ತಿ ಸುನೈನಾ….!

Follow Us :

ತೆಲುಗು ಬಿಗ್ ಬಾಸ್ ನಲ್ಲಿ ಭಾಗಿಯಾದ ಅನೇಕರು ಸೀಸನ್ ನಲ್ಲಿ ಜಯ ಗಳಿಸಿದೇ ಇದ್ದರೂ ಸಹ ಫೇಮಸ್ ಆಗುತ್ತಿರುತ್ತಾರೆ. ಈ ಹಾದಿಯಲ್ಲೇ ಬಿಗ್ ಬಾಸ್ ಸೀಸನ್ ಮೂಲಕ ಫೇಂ ಪಡೆದುಕೊಂಡವರಲ್ಲಿ ದೀಪ್ತಿ ಸುನೈನಾ ಸಹ ಒಬ್ಬರಾಗಿದ್ದಾರೆ. ಬಿಗ್ ಬಾಸ್ ನಲ್ಲಿ ಭಾಗವಹಿಸಿದ್ದ ದೀಪ್ತಿ ಹಾಗೂ ಷಣ್ಮುಖ್ ಜಸ್ವಂತ್ ಪ್ರೀತಿಸುತ್ತಿದ್ದರು. ಆದರೆ ಕಳೆದ 2021 ರಲ್ಲಿ ಅವರಿಬ್ಬರೂ ಬ್ರೇಕಪ್ ಮಾಡಿಕೊಂಡರು. ಇದೀಗ ದೀಪ್ತಿ ಎಮೋಷನಲ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದು. ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಕಳೆದ 2021 ರಲ್ಲಿ ದೀಪ್ತಿ ಸುನೈನಾ ಹಾಗೂ ಷಣ್ಮುಖ್ ಸೋಷಿಯಲ್ ಮಿಡಿಯಾದ ವೇದಿಕೆಯಾಗಿ ಬ್ರೇಕಪ್ ಮಾಡಿಕೊಂಡರು. ಬ್ರೇಕಪ್ ಆದ ಬಗ್ಗೆ ಕಾರಣಗಳನ್ನು ತಿಳಿಸದೇ ಇದ್ದರೂ ಸಹ ಷಣ್ಮುಖ್ ಗೆ ಬ್ರೇಕಪ್ ಹೇಳಿದ್ದಾಗಿ ಅಭಿಮಾನಿಗಳೊಂದಿಗೆ ಹಂಚಿಕೊಂಡರು. ಬಿಗ್ ಬಾಸ್ ಬ್ಯೂಟಿ ದೀಪ್ತಿ ಸುನೈನಾ ಕಣ್ಣೀರಿಡುತ್ತಾ ಎಮೋಷನಲ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಆಕೆ ನೀವು ನನ್ನ ಬಹಷ್ಕಿರಿಸಿದ್ದೀರೀ, ನನ್ನ ಜೀವನ ನರಕವಾಗಿದೆ ಎಂದು ವಿಡಿಯೋದಲ್ಲಿ ಎಮೋಷನಲ್ ಆಗಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಬಿಗ್ ಬಾಸ್ ಸೀಸನ್ 5 ರಲ್ಲಿ ಷಣ್ಮುಖ್ ಹಾಗೂ ಸಿರಿ ಹನ್ಮಂತ್ ಭಾಗವಹಿಸಿದ್ದರು. ಅವರಿಬ್ಬರೂ ತುಂಬಾ ಕ್ಲೋಜ್ ಆಗಿದ್ದರು. ನಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂದು ಹೇಳಿದ್ದರು ಆದರೆ ಲವರ್ಸ್ ಗಿಂತಲೂ ಹೆಚ್ಚಾಗಿ ರೊಮ್ಯಾನ್ಸ್ ಮಾಡಿದರು. ಈ ಕಾರಣದಿಂದಲೇ ದೀಪ್ತಿ ಹಾಗೂ ಷಣ್ಮುಖ್ ಇಬ್ಬರೂ ಬೇರೆಯಾದರು ಎಂದು ಹೇಳಲಾಗುತ್ತಿದೆ. ಇನ್ನೂ ಷಣ್ಮುಖ್ ಹಾಗೂ ಸಿರಿ ತುಂಬಾ ಕ್ಲೋಜ್ ಆಗಿರುವುದನ್ನು ದೀಪ್ತಿ ಗಮನಿಸುತ್ತಿದ್ದರಂತೆ ಇದರಿಂದ ದೀಪ್ತಿ ಮನಸು ಗಾಯಗೊಂಡಿದೆ. ತಾನು ತುಂಬಾ ಪ್ರೀತಿಸುವ ವ್ಯಕ್ತಿ ಬೇರೆಯೊಬ್ಬರಿಗೆ ಹತ್ತಿರವಾಗುತ್ತಿದ್ದಕ್ಕೆ ದೀಪ್ತಿ ಹರ್ಟ್ ಆಗಿದ್ದಾರೆ ಎಂಬ ಕಥನಗಳು ಕೇಳಿಬಂದವು. ಇನ್ನೂ ಬಿಗ್ ಬಾಸ್ ಶೋ ಮುಗಿದ ಬಳಿ ದೀಪ್ತಿ ಬ್ರೇಕಪ್ ಹೇಳಿದ್ದು ಮತಷ್ಟು ಅನುಮಾನಗಳಿಗೆ ಕಾರಣವಾಯಿತು ಎನ್ನಲಾಗುತ್ತಿದೆ.

ಇನ್ನೂ ಷಣ್ಮುಖ್ ಗೆ ಒಳ್ಳೆಯ ಅವಕಾಶಗಳು ಬರುತ್ತಿವೆ. ಡಿಜಿಟಲ್ ಸೀರಿಸ್ ಗಳಲ್ಲಿ, ಮ್ಯೂಜಿಕ್ ಆಲ್ಬಂ ಗಳಲ್ಲಿ ನಟಿಸುತ್ತಿದ್ದಾರೆ. ಷಣ್ಮುಖ್ ಅಯ್ಯಯ್ಯೊ ಎಂಬ ಪ್ರಾಜೆಕ್ಟ್ ನಲ್ಲಿ ನಟಿಸುತ್ತಿದ್ದಾರೆ. ಇದೀಗ ದೀಪ್ತಿ ಸುನೈನಾ ಹಂಚಿಕೊಂಡ ಎಮೋಷನಲ್ ವಿಡಿಯೋ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.