ಬಹುನಿರೀಕ್ಷಿತ ರಾಮಾಯಣ ಸಿನೆಮಾದ ಶೂಟಿಂಗ್ ಪೊಟೋಸ್ ಲೀಕ್, ಶೂಟಿಂಗ್ ಸ್ಟಾಟ್ ನಲ್ಲಿ ಮೊಬೈಲ್ ಬ್ಯಾನ್ ಮಾಡಿ ಎಂದ ನೆಟ್ಟಿಗರು…!

Follow Us :

ಬಾಲಿವುಡ್ ಸಿನಿರಂಗದಲ್ಲಿ ಬಹುನಿರೀಕ್ಷಿತ ರಾಮಾಯಣ ಸಿನೆಮಾದ ಶೂಟಿಂಗ್ ಸದ್ದಿಲ್ಲದೇ ಶುರುವಾಗಿದೆ. ಖ್ಯಾತ ನಿರ್ದೇಶಕ ನಿತೀಶ್ ತಿವಾರಿ ರಾಮಾಯಣದ ಕಥೆಯನ್ನು ಆಧರಿಸಿ ಸಿನೆಮಾ ಮಾಡುತ್ತಿರುವ ವಿಚಾರ ತಿಳಿದೇ ಇದೆ. ಈ ಸಿನೆಮಾ ಘೊಷಣೆಯಾದಾಗಿನಿಂದ ತುಂಬಾನೆ ನಿರೀಕ್ಷೆ ಹುಟ್ಟಿಸಿದೆ. ಈ ಸಿನೆಮಾದಲ್ಲಿ ರಾಮನ ಪಾತ್ರದಲ್ಲಿ ನಟ ರಣಬೀರ್‍ ಕಪೂರ್‍, ರಾವಣನ ಪಾತ್ರ ಯಶ್, ಸೀತೆಯ ಪಾತ್ರದಲ್ಲಿ ಸಾಯಿಪಲ್ಲವಿ ಅಥವಾ ಜಾನ್ವಿ ಕಪೂರ್‍ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಇದೀಗ ರಾಮಾಯಣ ಸಿನೆಮಾದ ಶೂಟಿಂಗ್ ಗೆ ಸಂಬಂಧಿಸಿದ ಕೆಲವೊಂದು ಪೊಟೋಗಳು ಲೀಕ್ ಆಗಿದ್ದು, ವೈರಲ್ ಆಗುತ್ತಿವೆ.

ಬಾಲಿವುಡ್ ಸ್ಟಾರ್‍ ನಟ ರಣಬೀರ್‍ ಕಪೂರ್‍ ಅನಿಮಲ್ ಸಿನೆಮಾದ ಬಳಿಕ ಇದೀಗ ರಾಮಾಯಣ ಸಿನೆಮಾದಲ್ಲಿ ನಟಿಸಲಿದ್ದಾರೆ. ಈ ಸಿನೆಮಾ ಘೋಷಣೆಯಾದಾಗಿನಿಂದ ತುಂಬಾನೆ ಸುದ್ದಿಯಾಗುತ್ತಿದೆ. ಈ ಸಿನೆಮಾದಲ್ಲಿ ನಟಿಸಲಿರುವ ಕಲಾವಿದರ ಬಗ್ಗೆ ಅನೇಕ ಸುದ್ದಿಗಳು ಕೇಳಿಬರುತ್ತಿವೆ. ಇನ್ನು ಸದ್ದಿಲ್ಲದೇ ಈ ಸಿನೆಮಾದ ಶೂಟಿಂಗ್ ಸಹ ಶುರುವಾಗಿದ್ದು, ಕಲಾವಿದರು ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಇದೀಗ ಸಿನೆಮಾ ಶೂಟಿಂಗ್ ಸ್ಥಳದ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ. ಈ ಪೊಟೋಗಳು ಲೀಕ್ ಆಗಿದ್ದಕ್ಕೆ ಅನೇಕರು ಬೇಸರದ ಜೊತೆಗೆ ಆಕ್ರೋಷ ಸಹ ಹೊರಹಾಕಿದ್ದಾರೆ. ಅನೇಕರು ತಮ್ಮದೇ ಆದ ರೀತಿಯಲ್ಲಿ ಅಭಿಪ್ರಾಯಗಳನ್ನು ಸಹ ಹೊರಹಾಕುತ್ತಿದ್ದಾರೆ.

ಸದ್ಯ ಲೀಕ್ ಆಗಿರುವ ಪೊಟೋಗಳು ವೈರಲ್ ಆಗುತ್ತಿವೆ. ರಾಮಾಯಣ ಸಿನೆಮಾ ಶೂಟಿಂಗ್ ನಿಮಿತ್ತ ದೊಡ್ಡ ಸೆಟ್ ಒಂದನ್ನು ನಿರ್ಮಾಣ ಮಾಡಲಾಗಿದೆ. ನಟಿ ಲಾರಾ ದತ್ತ ಹಾಗೂ ನಟ ಅರುಣ್ ಗೊವಿಲ್ ರವರು ಈ ಶೂಟಿಂಗ್ ನಲ್ಲಿ ಭಾಗಿಯಾಗಿದ್ದು, ಅವರ ಪೊಟೋಗಳು ಲೀಕ್ ಆಗಿದೆ. ಮುಂಬೈನ ಫಿಲಂ ಸಿಟಿಯಲ್ಲಿ ಭಾರಿ ಸೆಟ್ ನಿರ್ಮಾಣ ಮಾಡಲಾಗಿದೆ. ರಾಮಾಯಣ ಸಿನೆಮಾಗಾಗಿ ಗುರುಕುಲದ ಸೆಟ್ ಹಾಕಲಾಗಿದ್ದು, ಗ್ರೀನ್ ಸ್ಕ್ರೀನ್ ಗಳಲ್ಲಿ ಶೂಟಿಂಗ್ ನಡೆಯುತ್ತಿದೆ. ಗುರುಕುಲದ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗುತ್ತಿತ್ತು. ಗುರುಕುಲದ ದೃಶ್ಯಗಳನ್ನು ಶೂಟ್ ಮಾಡುವ ಮೂಲಕ ರಾಮಾಯಣ ಸಿನೆಮಾದ ಶೂಟಿಂಗ್ ಆರಂಭವಾಗಿದೆ. ಬಾಲ ರಾಮ, ಲಕ್ಷಣ ಮತ್ತು ಭರತನ ಪಾತ್ರಧಾರಿಗಳು ಕಾಣಿಸಿಕೊಂಡಿದ್ದಾರೆ. ಇದೀಗ ಈ ಪೊಟೋಗಳು ಇಂಟರ್‍ ನೆಟ್ ನಲ್ಲಿ ಭಾರಿ ವೈರಲ್ ಆಗುತ್ತಿವೆ.

ಇನ್ನೂ ಈ ಪೊಟೋಗಳು ವೈರಲ್ ಆಗುತ್ತಿದ್ದಂತೆ ಅನೇಕರು ಆಕ್ರೋಷ ಹೊರಹಾಕುತ್ತಿದ್ದಾರೆ. ಮೊದಲು ಶೂಟಿಂಗ್ ಸ್ಪಾಟ್ ನಲ್ಲಿ ಮೊಬೈಲ್ ಗಳನ್ನು ಬ್ಯಾನ್ ಮಾಡಿ ಎಂದು ಸಲಹೆ ಸಹ ನೀಡುತ್ತಿದ್ದಾರೆ. ಇದೀಗ ರಾಮಾಯಣ ಚಿತ್ರತಂಡ ಯಾವ ರೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನೂ ಮೂಲಗಳ ಪ್ರಕಾರ ರಾಮಾಯಣ ಸಿನೆಮಾವನ್ನು ಮೂರು ಭಾಗಗಳಲ್ಲಿ ತೆರೆಗೆ ತರಲಿದ್ದಾರೆ ಎಂದು ಹೇಳಲಾಗುತ್ತಿದೆ.