Film News

ಚಿರಂಜೀವಿಯವರ ಜೊತೆಗೆ ರೊಮ್ಯಾನ್ಸ್ ಎಂಜಾಯ್ ಮಾಡೋಕೆ ಆಗಿಲ್ಲ ಎಂದ ಸೀನಿಯರ್ ನಟಿ ಭಾನುಪ್ರಿಯಾ, ವೈರಲ್ ಆದ ಶಾಕಿಂಗ್ ಕಾಮೆಂಟ್ಸ್…..!

ಸ್ವಯಂ ಕೃಷಿಯಿಂದ ದೊಡ್ಡ ಸ್ಟಾರ್‍ ಆಗಿರುವ ಮೆಗಾಸ್ಟಾರ್‍ ಚಿರಂಜೀವಿ ತೆಲುಗು ರಾಷ್ಟ್ರಗಳಲ್ಲಿ ಮಾತ್ರವದಲ್ಲದೇ ಇಡೀ ವಿಶ್ವದಾದ್ಯಂತ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದಾರೆ. ಈಗಲೂ ಸಹ ಸಿನೆಮಾಗಳಲ್ಲಿ ನಟಿಸುತ್ತಾ ಅಭಿಮಾನಿಗಳನ್ನು ರಂಜಿಸುವ ಕೆಲಸ ಮಾಡುತ್ತಿದ್ದಾರೆ. ಇದೀಗ ಚಿರಂಜೀವಿಯವರ ಜೊತೆಗೆ ದಶಕಗಳ ಹಿಂದೆ ತೆರೆಹಂಚಿಕೊಂಡಂತಹ ನಟಿ ಭಾನುಪ್ರಿಯಾ ಚಿರಂಜೀವಿ ರವರ ಜೊತೆ ಡ್ಯಾನ್ಸ್ ಮಾಡುವಾಗ ರೊಮ್ಯಾನ್ಸ್ ಎಂಜಾಯ್ ಮಾಡೋಕೆ ಆಗಿಲ್ಲ ಎಂದು ಕಾಮೆಂಟ್ ಮಾಡಿದ್ದು, ಆಕೆಯ ಕಾಮೆಂಟ್ ಗಲು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ.

ಸೀನಿಯರ್‍ ನಟಿ ಭಾನುಪ್ರಿಯಾ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದು, ಆಕೆಯ ಹೇಳಿಕೆಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಇಲ್ಲಿಯವರೆಗೂ ಹೊರಬಾರದಂತಹ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಾನು ಈ ಹಿಂದೆ ನಟಿಸಿದಂತಹ ಹಿರೋಗಳು, ಸಿನೆಮಾಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಆಕೆ ನೀಡಿದ ಹೇಳಿಕೆಗಳು ಮತಷ್ಟು ಹೈಪ್ ಕ್ರಿಯೇಟ್ ಮಾಡಿದೆ ಎನ್ನಲಾಗಿದೆ. ಚಿರಂಜೀವಿಯವರ ಜೊತೆಗೆ ಆಕೆ ಹತ್ತಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದರು. ಬಹುತೇಕ ಈ ಎಲ್ಲಾ ಸಿನೆಮಾಗಳು ಬ್ಲಾಕ್ ಬ್ಲಸ್ಟರ್‍ ಹಿಟ್ ಆಗಿದೆ. ಅವರೊಂದಿಗೆ ನಟಿಸಿದ ರಾಧ, ರಾಧಿಕ, ಭಾನುಪ್ರಿಯಾ ರವರು ಅನೇಕ ಸಿನೆಮಾಗಳಲ್ಲಿ ನಟಿಸಿದ್ದರು. ಚಿರು ಜೊತೆಗೆ ಡ್ಯಾನ್ಸ್ ಮಾಡೋವಾಗ ರಾಧಿಕಾ ಹಾಗೂ ರಾಧ ಆ ಮೂಮೆಂಟ್ಸ್ ಅನ್ನು ತುಂಬಾ ಚೆನ್ನಾಗಿ ಎಂಜಾಯ್ ಮಾಡುತ್ತಿದ್ದಂರತೆ. ಆದರೆ ಭಾನುಪ್ರಿಯಾ ಈ ರೀತಿ ಎಂಜಾಯ್ ಮಾಡೋಕೆ ಆಗುತ್ತಿಲ್ಲರಲಿಲ್ಲವಂತೆ.

ಚಿರಂಜೀವಿಯರವರ ಜತೆಗೆ ಡ್ಯಾನ್ಸ್ ಮಾಡೋವಾಗ ತುಂಬಾ ಚೆನ್ನಾಗಿ ಮಾಡಬೇಕೆಂದು ಕಾಂಪಿಟೇಷನ್ ಮೈಂಡ್ ನೊಂದಿಗೆ ಡ್ಯಾನ್ಸ್ ಮಾಡುತ್ತಿದ್ದರಂತೆ. ಚಿರು ಡ್ಯಾನ್ಸ್ ಮೂಮೆಂಟ್ಸ್ ಗಳನ್ನು ಗಮನಿಸುತ್ತಿದ್ದರಂತೆ. ಆದರೆ ಈ ಕಾರಣದಿಂದ ಆಕೆ ಆ ಹಾಡುಗಳಲ್ಲಿ ನಟಿಸುವಾಗ ರೋಮ್ಯಾನ್ಸ್ ಎಂಜಾಯ್ ಮಾಡೋಕೆ ಆಗುತ್ತಿರಲಿಲ್ಲವಂತೆ. ತನ್ನ ದೃಷ್ಟಿ ಸಂಪೂರ್ಣವಾಗಿ ಡ್ಯಾನ್ಸ್ ಚೆನ್ನಾಗಿ ಮಾಡಬೇಕೆಂದು ಯೋಚಿಸುತ್ತಿದ್ದರಂತೆ. ಈ ಕಾರಣದಿಂದಲೇ ಹಾಡಿನಲ್ಲಿ ರೊಮ್ಯಾನ್ಸ್ ಮೇಲೆ ಪೋಕಸ್ ಇಡೋಕೆ ಆಗಲಿಲ್ಲ ಆ ನೋವು ತುಂಬಾನೆ ಇದೆ. ಈ ವಿಚಾರವನ್ನು ಚಿರಂಜೀವಿಯವರಿಗೂ ಸಹ ಹೇಳಿದ್ದೆ. ಚಿರಂಜೀವಿಯವರು ಗ್ರೇಟ್ ಡ್ಯಾನ್ಸರ್‍. ಆತನನ್ನು ಬೀಟ್ ಮಾಡೋದು ತುಂಬಾನೆ ಕಷ್ಟ. ಆದರೆ ಆತನೊಂದಿಗೆ ಪೈಪೋಟಿಗೆ ನಿಲ್ಲಬೇಕೆಂದು ಇತ್ತು. ಅವರೊಂದಿಗೆ ಡ್ಯಾನ್ಸ್ ಮಾಡುತ್ತಿದ್ದಾಗ ತುಂಬಾ ಎನರ್ಜಿಟಿಕ್ ಆಗಿರುತ್ತದೆ. ಅವರೊಂದಿಗೆ ನಟಿಸುವುದು ವಂಡರ್‍ ಪುಲ್ ಮೂಮೆಂಟ್ಸ್ ಎಂದು ಹೇಳಿದ್ದು, ಆಕೆಯ ಹಳೇಯ ಸಂದರ್ಶನದಲ್ಲಿ ನೀಡಿದ ಈ ಕಾಮೆಂಟ್ ಗಳು ಸೊಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ.

Most Popular

To Top