ಅದೃಷ್ಟ ಕೊಟ್ಟ ದೇವರಿಗೆ ಧನ್ಯವಾದಗಳು ಎಂದು ಪ್ರೀತಿಯ ಅಣ್ಣನಿಗೆ ಜನ್ಮದಿನದ ಶುಭಾಷಯಗಳನ್ನು ಕೋರಿದ ಪವನ್ ಕಲ್ಯಾಣ್…!

Follow Us :

ತೆಲುಗು ಸಿನಿರಂಗ ಮಾತ್ರವಲ್ಲದೇ ದೇಶ ವ್ಯಾಪ್ತಿಯಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವಂತಹ ಮೆಗಾಸ್ಟಾರ್‍ ಚಿರಂಜೀವಿಯವರ ಹುಟ್ಟುಹಬ್ಬ ಇಂದು. ಅವರು ಇಂದಿಗೆ 67ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅವರ ಹುಟ್ಟುಹಬ್ಬದಂದು ಆತನ ಅಭಿಮಾನಿಗಳೂ ಸೇರಿದಂತೆ ರಾಜಕೀಯ ಗಣ್ಯರು, ಸ್ಟಾರ್‍ ಸೆಲೆಬ್ರೆಟಿಗಳೂ ಸೇರಿದಂತೆ ಅನೇಕರು ಶುಭ ಕೋರುತ್ತಿದ್ದಾರೆ. ಇನ್ನೂ ತಮ್ಮ ಪ್ರೀತಿಯ ಅಣ್ಣನಿಗೆ ಪವನ್ ಕಲ್ಯಾಣ್ ಸ್ಪೇಷಲ್ ಆಗಿ ವಿಶ್ ಮಾಡುತ್ತಾ, ಎಮೋಷನಲ್ ನೋಟ್ ಒಂದನ್ನು ಹಂಚಿಕೊಂಡಿದ್ದಾರೆ.

ಸಿನಿರಂಗದಲ್ಲಿ ಅನೇಕ ವರ್ಷಗಳಿಂದ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಸಿನಿರಸಿಕರನ್ನು ರಂಜಿಸುತ್ತಿರುವ ಮೆಗಾಸ್ಟಾರ್‍ ಚಿರಂಜೀವಿಯವರು 1955 Aug 22 ರಂದು ವೆಸ್ಟ್ ಗೋದಾವರಿ ಜಿಲ್ಲೆಯ ಮೊಗಲ್ತೂರು ನಲ್ಲಿ ಜನಿಸಿದರು. ಸ್ವಯಂ ಕೃಷಿಯಿಂದ ದೊಡ್ಡ ಸ್ಟಾರ್‍ ಆಗಿ ಅನೇಕ ಕಲಾವಿದರಿಗೆ ಮಾದರಿಯಾಗಿದ್ದಾರೆ.  ನಾಲ್ಕು ದಶಕಗಳಿಂದ 150 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ. 60 ರ ವಯಸ್ಸಿನ ಗಡಿ ದಾಟಿದರೂ ಯಂಗ್ ನಟರೂ ಸಹ ಅಸೂಯೆ ಪಡುವಂತೆ ನಟಿಸುತ್ತಾರೆ. ಇನ್ನೂ ಇಂದು ಮೇಗಾಸ್ಟಾರ್‍ ಚಿರಂಜೀವಿಯವರ ಹುಟ್ಟುಹಬ್ಬವಾಗಿದ್ದು, ಕೇವಲ ಸಿನಿಮಾ ಸೆಲೆಬ್ರೆಟಿಗಳು ಮಾತ್ರವಲ್ಲದೇ ರಾಜಕೀಯ ಗಣ್ಯರು ಶುಭಾಷಯಗಳನ್ನು ಹರಿಬಿಡುತ್ತಿದ್ದಾರೆ. ಅದರಲ್ಲೂ ಮೆಗಾ ಫ್ಯಾನ್ಸ್ ಮಾತ್ರ ಅನೇಕ ಕಡೆ ರಕ್ತದಾನ ಶಿಬಿರಗಳು, ಅನ್ನದಾನ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಹಬ್ಬದಂತೆ ಚಿರು ಬರ್ತ್‌ಡೇ ಆಚರಿಸುತ್ತಿದ್ದಾರೆ.

ಇನ್ನೂ ಪ್ರತೀ ವರ್ಷದಂತೆ ಈ ಬಾರಿಯೂ ಸಹ ಮೆಗಾಸ್ಟಾರ್‍ ಚಿರಂಜೀವಿಯವರ ಸಹೋದರ ಪವನ್ ಕಲ್ಯಾಣ್ ಎಮೋಷನಲ್ ಆಗಿ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರಿದ್ದಾರೆ. ಪ್ರೀತಿಯ ಅಣ್ಣನನಿಗೆ ಜನ್ಮ ದಿನದ ಶುಭಾಷಯಗಳು, ಅಣ್ಣ ಚಿರಂಜೀವಿಯವರಿಗೆ ಪ್ರೀತಿ ಪೂರ್ವಕ ಶುಭಾಷಯಗಳು, ನಿಮ್ಮ ಸಹೋದರನಾಗಿ ಹುಟ್ಟಿ ನಿಮ್ಮನ್ನು ಅಣ್ಣ ಎಂದು ಕರೆಯುವ ಅದೃಷ್ಟ ಕೊಟ್ಟಿದ್ದಕ್ಕಾಗಿ ಆ ದೇವರಿಗೆ ಮೊದಲು ಕೃತಜ್ಞತೆ ತಿಳಿಸುತ್ತಿದ್ದೇನೆ. ಸಣ್ಣ ಕಾಲುವೆಯಂತೆ ಹರಿಯುತ್ತಾ, ಮಹಾನದಿಯಾಗಿ ಬದಲಾಗಿರುವ ನಿಮ್ಮ ಪ್ರಯಾಣ ನನಗೆ ಗೋಚರಿಸುತ್ತಿದೆ. ನೀವು ಬೆಳೆದು ನಾವು ಬೆಳೆಯಲು ಮಾರ್ಗ ತೋರಿಸಿದ್ದಲ್ಲದೇ ಲಕ್ಷಾಂತರ ಮಂದಿಗೆ ಸ್ಪೂರ್ತಿಯಾಗಿದ್ದೀರಿ. ನಿಮ್ಮ ಸಂಕಲ್ಪ, ಚಲ, ಶ್ರಮ, ಪ್ರಾಮಾಣಿಕತೆ, ಸೇವಾ ಮನೋಭಾವ ನನ್ನಂತಹ ಅನೇಕರಿಗೆ ಆದರ್ಶಪ್ರಾಯವಾಗಿದೆ. ಕೋಟ್ಯಾಂತರ ಜನತೆಯ ಅಭಿಮಾನವನ್ನು ಪಡೆದುಕೊಂಡರೂ ಹನಿಯಷ್ಟಾದರೂ ಗರ್ವ ನಿಮ್ಮಲಿದೆ. ಅಭಿನಯದ ಮೂಲಕ ಪಡೆದುಕೊಳ್ಳುತ್ತಿರುವ ಜಯಗಳು ಅಜರಾಮರವಾಗಿದೆ.

ಆನಂದಕರ, ಆರೋಗ್ಯಕರವಾದ ಸಂಪೂರ್ಣ ಆಯಸ್ಸು, ಮತಷ್ಟು ಜಯಗಳನ್ನು ನೀವು ನೋಡಬೇಕೆಂದು ಮನಪೂರ್ವಕವಾಗಿ ಕೋರುತ್ತಿದ್ದೇನೆ. Happy Birthday Annayya ಎಂದು ಎಮೋಷನಲ್ ನೋಟ್ ಮೂಲಕ ಶುಭಾಷಯ ಕೋರಿದ್ದಾರೆ. ಇನ್ನೂ ಪವನ್ ಕಲ್ಯಾಣ್ ರವರ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.