ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಆಸ್ಪತ್ರೆಗೆ ದಾಖಲು, ಕಾಲು ಜಾರಿ ಬಿದ್ದು ಬೆನ್ನು ಮೂಳೆಗೆ ಪೆಟ್ಟು

Follow Us :

ಪದ್ಮಶ್ರೀ ಪುರಸ್ಕೃತ ವೃಕ್ಷಮಾತೆ ಎಂದು ಪ್ರಸಿದ್ದವಾಗಿರುವಂತಹ ಸಾಲು ಮರದ ತಿಮ್ಮಕ್ಕ ಅವರು ಕಾಲು ಜಾರಿ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಭಾನುವಾರ ಸಂಜೆ ಬೆಂಗಳೂರಿನ ಮಂಜುನಾಥ ನಗರದಲ್ಲಿರುವ ಅವರ ಮನೆಯಲ್ಲಿ ಕಾಲು ಜಾರಿ ಬಿದಿದ್ದು, ಅವರನ್ನು ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೂ ತಿಮ್ಮಕ್ಕ ರವರಿಗೆ ಚಿಕಿತ್ಸೆ ನೀಡುತ್ತಿದ್ದು, ಬೆನ್ನಿನ ಭಾಗಕ್ಕೆ ಕೊಂಚ ಪೆಟ್‌ಆಗಿದ್ದು, ಬೇರೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಲಾಗಿದೆ.

ಪರಿಸರ ಪ್ರೇಮಿ, ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಪರಿಸರ ಪ್ರೇಮ ಅನೇಕರಿಗೆ ಮಾದರಿಯಾಗಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಜನಿಸಿದ ತಿಮ್ಮಕ್ಕ ಪರಿಸರ ಮೇಲಿನ ಕಾಳಜಿಯಿಂದಲೇ ರಾಜ್ಯ ಸೇರಿದಂತೆ ದೇಶದಾದ್ಯಂತ ಜನಪ್ರಿಯತೆ ಪಡೆದುಕೊಂಡಿದ್ದಾರೆ. ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡುವುದರ ಜೊತೆಗೆ ಅವುಗಳ ಪೋಷಣೆ ಸಹ ಮಾಡಿ ಮಕ್ಕಳಂತೆ ಬೆಳೆಸಿದ್ದಾರೆ. ಸಾವಿರಾರು ಮರಗಳಿಗೆ ಜೀವ ನೀಡಿ ಸಾಲು ಮರದ ತಿಮ್ಮಕ್ಕ ಎಂಬ ಖ್ಯಾತಿ ಸಹ ಪಡೆದುಕೊಂಡರು. ಅವರ ಆರೋಗ್ಯದಲ್ಲಿ ಏರುಪೇರಾಗಿ ಮನೆಯಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ಕೂಡಲೇ ಅವರನ್ನು ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಇನ್ನೂ ಇತ್ತೀಚಿಗೆ ಸಾಲು ಮರದ ತಿಮ್ಮಕ್ಕ ರವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ. ಉಸಿರಾಟದ ಸಮಸ್ಯೆ ಹಾಗೂ ಮಂಡಿ ನೋವು ಸಹ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.

ಸಾಲು ಮರದ ತಿಮ್ಮಕ್ಕರವರು ಬಡತನದಲ್ಲಿ ಹುಟ್ಟಿದ್ದರೂ ಸಹ ಪರಿಸರದ ಮೇಲೆ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ಸುಮಾರು 65 ವರ್ಷಗಳಿಂದ ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದಾರೆ. ಕೆಲವೊಂದು ದಾಖಲೆಗಳ ಪ್ರಕಾರ ಸುಮಾರು ಎಂಟು ಸಾವಿರ ಮರಗಳನ್ನು ನೆಟ್ಟು ಪರಿಸರ ಪ್ರೇಮ ಮೆರೆದಿದ್ದಾರೆ. ಇನ್ನೂ ಅವರು ನೆಟ್ಟ ಮರಗಳು ಇಂದು ಅನೇಕ ಜೀವರಾಶಿಗಳಿಗೆ, ಪ್ರಾಣಿ ಪ್ರಕ್ಷಿಗಳಿಗೆ ಆಸರೆಯಾಗಿದೆ. ಅವರ ಪರಿಸರ ಪ್ರೀತಿಯನ್ನು ಗುರ್ತಿಸಿದ ಕೇಂದ್ರ ಸರ್ಕಾರ ಆಕೆಗೆ ಪದ್ಮಶ್ರೀ ಪ್ರಶಸ್ತಿಯನ್ನು ಕಳೆದ 2019 ರಲ್ಲಿ ನೀಡಿ ಗೌರವಿಸಿದೆ. ಇನ್ನೂ ಸಾಲು ಮರದ ತಿಮ್ಮಕ್ಕರವರು ಬೇಗ ಗುಣಮುಖರಾಗಲಿ ಎಂದು ಅನೇಕರು ಪ್ರಾರ್ಥಿಸುತ್ತಿದ್ದಾರೆ.