ಆ ಸಿಂಗರ್ ಜೊತೆಗೆ ದೇವಿಶ್ರೀ ಪ್ರಸಾದ್ ಮದುವೆಯಂತೆ, ವೈರಲ್ ಆದ ಪೊಟೋಸ್…..!

Follow Us :

ಟಾಲಿವುಡ್ ನ ರಾಕ್ ಸ್ಟಾರ್‍ ದೇವಿ ಶ್ರೀಪ್ರಸಾದ್ ಟಾಪ್ ಮ್ಯೂಸಿಕ್ ಡೈರೆಕ್ಟರ್‍ ಗಳಲ್ಲಿ ಒಬ್ಬರಾಗಿದ್ದಾರೆ. ಅನೇಕ ಸಿನೆಮಾಗಳಿಗೆ ಮ್ಯೂಸಿಕ್ ಕಂಪೋಸ್ ಮಾಡುವ ಮೂಲಕ ಭಾರಿ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ಸ್ಟಾರ್‍ ನಟರ ಸಿನೆಮಾಗಳಿಗೆ ದೇವಿಶ್ರೀ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಒಬ್ಬ ಸ್ಟಾರ್‍ ನಟನಗಿರುವಂತೆ ದೇವಿಶ್ರೀ ಪ್ರಸಾದ್ ಗೂ ಅಪಾರ ಅಭಿಮಾನಿ ಬಳಗವಿದೆ. ಸುಮಾರು ದಿನಗಳಿಂದ ದೇವಿ ಶ್ರೀ ಪ್ರಸಾದ್ ಮದುವೆ ಸುದ್ದಿಗಳು ಕೇಳಿಬರುತ್ತಲೇ ಇದೆ. ಇದೀಗ ಅವರು ಆ ಸಿಂಗರ್‍ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಸೌಯ್ ಸಿನಿರಂಗದ ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಅನೇಕ ಸ್ಟಾರ್‍ ನಟರ ಸಿನೆಮಾಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಪ್ರೊಫೆಷನಲ್ ಜೀವನ ಚೆನ್ನಾಗಿಯೇ ಇದ್ದರೂ ಸಹ ವೈಯುಕ್ತಿಕ ಜೀವನ ಮಾತ್ರ ಅಂದುಕೊಂಡಷ್ಟು ಚೆನ್ನಾಗಿಲ್ಲ ಎಂದು ಹೇಳಬಹುದಾಗಿದೆ. ಇನ್ನೂ ದೇವಿ ಶ್ರೀ ಗೆ ನಲವತ್ತರ ವಯಸ್ಸಾದರೂ ಸಹ ಇನ್ನೂ ಮದುವೆಯಾಗಿಲ್ಲ. ಈ ಹಿಂದೆ ದೇವಿಶ್ರೀ ನಟಿ ಚಾರ್ಮಿಯೊಂದಿಗೆ ಪ್ರೇಮಪಯಣ ನಡೆಸಿದ್ದು, ಆಕೆ ಆತನಿಗೆ ಮೋಸ ಮಾಡಿದ ಕಾರಣದಿಂದ ಆತ ಮದುವೆಯಿಂದ ದೂರವೇ ಉಳಿದಿದ್ದಾನೆ ಎಂಬ ಸುದ್ದಿಗಳು ಜೋರಾಗಿಯೇ ಕೇಳಿಬಂದಿತ್ತು. ಜೊತೆಗೆ ಮದುವೆಯ ಮೇಲೆ ನಂಬಿಕೆಯಿಲ್ಲದೇ ಆತ ಮದುವೆಯಾಗುತ್ತಿಲ್ಲ ಎಂದು ಸಹ ಹೇಳಲಾಗಿತ್ತು. ಆದರೆ ಅನೇಕ ಬಾರಿ ಅವರ ಮದುವೆ ಸುದ್ದಿ ಸಹ ಕೇಳಿಬಂತು.

ಇದೀಗ ದೇವಿಶ್ರೀ ಮದುವೆಯ ಸುದ್ದಿ ಮತ್ತೊಮ್ಮೆ ಸದ್ದು ಮಾಡುತ್ತಿದೆ. ದೇವಿಶ್ರೀ ಆ ಸಿಂಗರ್‍ ರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಬಿರುಗಾಳಿಯಂತೆ ಹರಿದಾಡುತ್ತಿದೆ. ಆ ಸಿಂಗರ್‍ ಬೇರೆ ಯಾರೂ ಅಲ್ಲ ಇತ್ತೀಚಿಗಷ್ಟೆ ಭಾರಿ ಕ್ರೇಜ್ ಪಡೆದುಕೊಂಡ ಸಿಂಗರ್‍ ಮಂಗಳಿ  ತಂಗಿ ಇಂದ್ರಾವತಿ ಜೊತೆಗೆ ದೇವಿಶ್ರೀ ಸಪ್ತಪದಿ ತುಳಿಯಲಿದ್ದಾರಂತೆ. ಈ ರೂಮರ್‍ ಹರಿದಾಡಲು ಸಹ ಬಲವಾದ ಕಾರಣವೊಂದಿದೆ. ಇಂದ್ರಾದೇವಿ ಜೊತೆಗೆ ತೆಗೆದುಕೊಂಡ ಕೆಲವೊಂದು ಸೆಲ್ಫಿಗಳು ವೈರಲ್ ಆಗುತ್ತಿದ್ದು, ಈ ಕಾರಣದಿಂದಲೇ ಅವರಿಬ್ಬರೂ ಮದುವೆಯಾಗಲಿದ್ದಾರೆಂಬ ರೂಮರ್‍ ಹರಿದಾಡಲು ಶುರುವಾಗಿದೆ.

ಇನ್ನೂ ಈ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಚರ್ಚೆಗಳೂ ಸಹ ಶುರುವಾಗಿದೆ. ನಿಮ್ಮಿಬ್ಬರ ಜೋಡಿ ಚೆನ್ನಾಗಿದೆ. ನಿಮ್ಮ ಮದುವೆ ಯಾವಾಗ ಎಂಬೆಲ್ಲಾ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಇನ್ನೂ ಈ ಸುದ್ದಿಯ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಯಿಲ್ಲವಾದರೂ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಮದುವೆಯ ರೂಮರ್‍ ಸಿಕ್ಕಾಪಟ್ಟೆ ವೈರಲ್ ಮಾಡುತ್ತಿದ್ದಾರೆ.