ಬಡ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಪಾಠ ಕಲಿಸಿದ ನಿತ್ಯಾಮಿನನ್, ಬಡ ಮಕ್ಕಳಿಗಾಗಿ ಶಿಕ್ಷಕಿಯಾದ ನಟಿ ವಿಡಿಯೋ ವೈರಲ್…!

Follow Us :

ಸೌತ್ ಸಿನಿರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಕ್ರೇಜ್ ದಕ್ಕಿಸಿಕೊಂಡ ಈಕೆ ಅನೇಕ ಹಿಟ್ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿದ್ದಾರೆ. ಸಿನಿರಂಗದಲ್ಲಿ ತನ್ನದೇ ಆದ ಕ್ರೇಜ್ ಸಂಪಾದಿಸಿಕೊಂಡ ಈಕೆ ನಟಿಸುವಂತಹ ಸಿನೆಮಾಗಳೂ ಸಹ ತುಂಬಾನೆ ವಿಭಿನ್ನವಾಗಿರುತ್ತವೆ ಎಂದು ಹೇಳಬಹುದಾಗಿದೆ. ಇದೀಗ ನಿತ್ಯಾಮೆನನ್ ಬಡ ಮಕ್ಕಳಿಗಾಗಿ ಶಿಕ್ಷಕಿಯಾಗಿದ್ದು, ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಸೌತ್ ಸಿನಿರಂಗದಲ್ಲಿ ನಟಿಯಾಗಿ ತನ್ನದೇ ಆದ ಪ್ರತ್ಯೇಕತೆಯ ಮೂಲಕ ಕ್ರೇಜ್ ಸಂಪಾದಿಸಿಕೊಂಡ ಟ್ಯಾಲೆಂಟೆಡ್ ನಟಿ ನಿತ್ಯಾ ಮಿನನ್ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.  ಇನ್ನೂ ಇತ್ತೀಚಿಗೆ ಆಕೆ ಡಬ್ಬಿಂಗ್ ಸಿನೆಮಾಗಳ ಮೂಲಕ ತೆಲುಗು ಪ್ರೇಕ್ಷಕರನ್ನು ಸಹ ರಂಜಿಸುತ್ತಿದ್ದಾರೆ. ಇನ್ನೂ ನಿತ್ಯಾ ಮೆನನ್ ಯಾವುದೇ ಭಾಷೆಯ ಸಿನೆಮಾದಲ್ಲಿ ನಟಿಸಿದರೂ ಸಹ ಆಕೆಯೇ ಸ್ವತಃ ತನ್ನ ಪಾತ್ರಕ್ಕೆ ಡಬ್ಬಿಂಗ್ ಹೇಳುತ್ತಾರೆ. ಇನ್ನೂ ಸಿನಿರಂಗದ ಅನೇಕರು ಹೊಸ ವರ್ಷವನ್ನು ವಿಭಿನ್ನವಾಗಿ, ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಇನ್ನೂ ಈ ವೇಳೆ ಕೆಲವರು ಖಾಸಗಿ ಕಾರ್ಯಕ್ರಮಗಳಲ್ಲೂ ಸಹ ಭಾಗಿಯಾಗಿ ಹಣ ಸಹ ಸಂಪಾದನೆ ಮಾಡುತ್ತಾರೆ. ಹೊಸ ವರ್ಷವನ್ನು ಅದ್ದೂರಿಯಾಗಿ ಆಚರಿಸಿಕೊಂಡ ಸೆಲೆಬ್ರೆಟಿಗಳನ್ನು ನಾವು ನೋಡಿದ್ದೇವೆ. ಆದರೆ ನಟಿ ನಿತ್ಯಾ ಮೆನನ್ ಎಲ್ಲದಕ್ಕಿಂತ ಮಿಗಿಲಾಗಿ ದೊಡ್ಡ ಕೆಲಸವನ್ನು ಮಾಡಿದ್ದಾರೆ.

ನಟಿ ನಿತ್ಯಾ ಮೆನನ್ ಹೊಸವರ್ಷವನ್ನು ವಿಭಿನ್ನವಾಗಿ ಆಚರಿಸಿದ್ದಾರೆ. ಹೊಸ ವರ್ಷದಂದು ನಿತ್ಯಾ ಮೆನನ್ ಒಂದು ಶಾಲೆಗೆ ಹೋಗಿದ್ದಾರೆ. ಅಲ್ಲಿ ಶಿಕ್ಷಕಿಯಾಗಿ ಮಕ್ಕಳಿಗೆ ಇಂಗ್ಲೀಷ್ ಪಾಠವನ್ನು ಹೇಳಿದ್ದಾರೆ. ಇಂಗ್ಲೀಷ್ ಪುಸ್ತಕದಲ್ಲಿ ಕಥೆಯನ್ನು ಓದುತ್ತಾ ಮಕ್ಕಳಿಗೆ ವಿವರಣೆ ನೀಡುತ್ತಾ ಶಿಕ್ಷಕಿಯಾಗಿದ್ದಾರೆ. ಇನ್ನೂ ಇದಕ್ಕೆ ಸಂಬಂಧಿಸಿದಂತೆ ವಿಡಿಯೋ ಒಂದನ್ನು ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆಕೆ ತನ್ನ ಇನ್ಸ್ಟಾಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು ವಿಡಿಯೋ ವೈರಲ್ ಆಗುತ್ತಿದೆ. ತಾನು ಹೊಸ ವರ್ಷದ ಆಚರಣೆಯನ್ನು ಮಕ್ಕಳೊಂದಿಗೆ ಆಚರಿಸಿಕೊಂಡಿದ್ದಾಗಿ ಪೋಸ್ಟ್ ಮಾಡಿದ್ದು, ಆಕೆಯ ಸಾಮಾಜಿಕ ಕಳಕಳಿಗೆ ಎಲ್ಲ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಆಗಾಗ ನಟಿ ನಿತ್ಯಾ ಮೆನನ್ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಿರುತ್ತಾರೆ.

ಇನ್ನೂ ಇತ್ತೀಚಿಗಷ್ಟೆ ಯೂಟ್ಯೂಬರ್‍ ಒಬ್ಬ ನಿತ್ಯಾ ಮೆನನ್ ರವರಿಗೆ ಪೋನ್ ಮೂಲಕ ಟಾರ್ಚರ್‍ ನೀಡಿದ್ದ ವಿಚಾರಕ್ಕೂ ಸಹ ನಿತ್ಯಾ ಮೆನನ್ ಖಾರವಾಗಿಯೇ ಉತ್ತರ ನೀಡಿದ್ದರು. ಈ ವಿಚಾರ ಆಗ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿತ್ತು. ಆಕೆ ಕಳೆದ ವರ್ಷ ತಿರು ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಒಳ್ಳೆಯ ಪ್ರತಿಕ್ರಿಯೆ ತಂದುಕೊಟ್ಟಿದೆ.