ಕಡಪದಲ್ಲಿರುವ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಮಾಡಿದ ನ್ಯಾಚುರಲ್ ಸ್ಟಾರ್ ನಾನಿ, ವೈರಲ್ ಆದ ಪೊಟೋಸ್…….!

ಸಿನಿರಂಗದಲ್ಲಿ ಯಾವುದೇ ಬ್ಯಾಕ್ ಗ್ರೌಂಡ್ ಇಲ್ಲದೇ ಸ್ಟಾರ್‍ ಆದವರಲ್ಲಿ ಕಡಿಮೆ ಮಂದಿ ಇರುತ್ತಾರೆ. ಸತತ ಶ್ರಮದಿಂದ ಅವರು ಸ್ಟಾರ್‍ ನಟರಾಗುತ್ತಾರೆ. ಈ ಸಾಲಿಗೆ ಟಾಲಿವುಡ್ ಸ್ಟಾರ್‍ ನ್ಯಾಚುರಲ್ ಸ್ಟಾರ್‍ ನಾನಿ ಸಹ ಒಬ್ಬರಾಗಿದ್ದಾರೆ. ನಾನಿ ಕೆರಿಯರ್‍ ಆರಂಭದಲ್ಲಿ ತುಂಬಾ ಸಂಕಷ್ಟಗಳನ್ನು ಎದುರಿಸಿದ್ದಾರಂತೆ. ಈ ಬಗ್ಗೆ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಸದ್ಯ ನಾನಿ ಅಭಿನಯದ ಹಾಯ್ ನಾನ್ನ ಎಂಬ ಸಿನೆಮಾ ಡಿ.7 ರಂದು ಬಿಡುಗಡೆಯಾಗಲಿದ್ದು, ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಈ ಸಿನೆಮಾ ತೆರೆಕಾಣಲಿದೆ. ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳೂ ಸಹ ಭರದಿಂದ ಸಾಗುತ್ತಿವೆ.

ಟಾಲಿವುಡ್ ಸ್ಟಾರ್‍ ನಟ ನ್ಯಾಚುರಲ್ ಸ್ಟಾರ್‍ ನಾನಿ ಹಾಗೂ ಮೃಣಾಲ್ ಠಾಕೂರ್‍ ಕಾಂಬಿನೇಷನ್ ನಲ್ಲಿ ಹಾಯ್ ನಾನ್ನ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಈ ಸಿನೆಮಾವನ್ನು ಡೆಬ್ಯೂ ನಿರ್ದೇಶನ ಶೌರವ್ ನಿರ್ದೇಶನ ಮಾಡಲಿದ್ದಾರೆ. ಈ ಸಿನೆಮಾ ಬಿಡುಗಡೆಗೆ ಸಮಯದ ಹತ್ತಿರ ಬರುತ್ತಿದ್ದು, ಈ ಸಿನೆಮಾದ ಪ್ರೀ ರಿಲೀಸ್ ಈವೆಂಟ್ ಸಹ ಅದ್ದೂರಿಯಾಗಿಯೇ ನಡೆದಿದೆ. ಜೊತೆಗೆ ಸಿನೆಮಾ ಪ್ರಮೋಷನ್ ಕೆಲಸಗಳೂ ಸಹ ಭರದಿಂದ ಸಾಗುತ್ತಿವೆ. ಈ ಸಿನೆಮಾದ ಪ್ರಮೋಷನ್ ನಿಮಿತ್ತ ಚಿತ್ರತಂಡ ಕಡಪಾ ಗೆ ಹೋಗಿದ್ದಾರೆ. ಈ ಸಂದರ್ಭವಾಗಿ ಅಲ್ಲಿನ ದರ್ಗಾದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಾನಿ ಅವರಿಗೆ ದರ್ಗಾದ ಆಡಳಿತ ಮಂಡಳಿ ಸಂಪ್ರದಾಯ ಬದ್ದವಾಗಿ ಸ್ವಾಗತ ಕೋರಿದ್ದಾರೆ. ಇನ್ನೂ ದರ್ಗಾಗೆ ಭೇಟಿ ನೀಡಿದ ನಾನಿ ಅಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಮುಡಿಪು ಸಲ್ಲಿಸಿದ್ದಾರೆ.

ಇನ್ನೂ ನ್ಯಾಚುರಲ್ ಸ್ಟಾರ್‍ ನಾನಿ ದರ್ಗಾಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ದರ್ಗಾದ ಸುತ್ತಮುತ್ತಲಿನ ಪ್ರದೇಶ ಅಭಿಮಾನಿಗಳಿಂದ ತುಂಬಿ ತುಳುಕುತ್ತಿತ್ತು. ಆತನನ್ನು ನೋಡಲು ಅಭಿಮಾನಿಗಳು ಮುಗಿಬಿದಿದ್ದರು. ಈ ವೇಳೆ ಮಾತನಾಡಿರುವಂತಹ ನಾನಿ ನನಗೆ ಕಡಪ ದರ್ಗಾದಲ್ಲಿ ಮುಡಿಪು ಇತ್ತು. ಅದನ್ನು ನೆರವೇರಿಸಿಕೊಳ್ಳಲು ಇಲ್ಲಿಗೆ ಬಂದಿದ್ದೇನೆ. ದರ್ಗಾಗೆ ಸಂದರ್ಶಿಸಿಕೊಳ್ಳಲು ಬಂದಿದ್ದು, ಇದು ತುಂಬಾ ಸಂತೋಷವಾಗಿದೆ. ಈ ಹಿಂದೆ ನಾನಿ ಅಭಿನಯದ ಕೃಷ್ಣಗಾಡಿ ವೀರಪ್ರೇಮಗಾಥ ಸಿನೆಮಾ ಸಮಯದಲ್ಲೂ ಸಹ ನಾನಿ ಇದೇ ದರ್ಗಾಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು.

ಇನ್ನೂ ತಿರುಮಲದಲ್ಲಿನ ತಿಮ್ಮಪ್ಪನ ದರ್ಶನ ಸಹ ನಾನಿ ಮಾಡಿದ್ದಾರೆ. ಅಲಿಪಿರಿ ಕಾಲ್ನಡಿಗೆಯ ಮೂಲಕ ತಿರುಮಲಕ್ಕೆ ಸೇರಿಕೊಂಡ ನಾನಿ ನೈವೇದ್ಯೆ ವಿಆರಮ ಸಮಯದಲ್ಲಿ ವೆಂಕಟೇಶ್ವರನ ದರ್ಶನ ಪಡೆದುಕೊಂಡಿದ್ದಾರೆ. ಬಳಿಕ ದೇವಾಲಯದ ಅರ್ಚಕರ ಬಳಿ ಆರ್ಶಿವಾದ ಪಡೆದುಕೊಂಡಿದ್ದಾರೆ. ಈ ವೇಳೆ ನಾನಿ ಜೊತೆಗೆ ಸೆಲ್ಫಿಗಾಗಿ ಅಭಿಮಾನಿಗಳು ಮುಗಿಬಿದಿದ್ದರು.