ಒಡಿಶಾದಲ್ಲಿ ನಡೆದ ನೀಚ ಕೃತ್ಯ, ಸ್ನೇಹಿತರೊಂದಿಗೆ ತಂಗಿಯನ್ನೇ ರೇಪ್ ಮಾಡಿ ಕೊಲೆ ಮಾಡಿ ಪಾಪಿ ಅಣ್ಣಾ….!

ಸಮಾಜದಲ್ಲಿ ಎಷ್ಟೇ ಕಠಿಣ ಕಾನೂನುಗಳಿದ್ದರೂ ಸಹ ಅಲ್ಲಲ್ಲಿ ಲೈಂಗಿಕ ದೌರ್ಜನ್ಯಗಳು, ಅತ್ಯಾಚಾರದಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ರಕ್ತ ಸಂಬಂಧಗಳನ್ನೂ ನೋಡದ ಕೆಲ ಕಾಮುಕರೂ ಸಹ ನೀಚ ಕೃತ್ಯಗಳನ್ನು ಎಸಗುತ್ತಿರುತ್ತಾರೆ. ಈ ಹಾದಿಯಲ್ಲೇ ಒಡಿಶಾದ…

ಸಮಾಜದಲ್ಲಿ ಎಷ್ಟೇ ಕಠಿಣ ಕಾನೂನುಗಳಿದ್ದರೂ ಸಹ ಅಲ್ಲಲ್ಲಿ ಲೈಂಗಿಕ ದೌರ್ಜನ್ಯಗಳು, ಅತ್ಯಾಚಾರದಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ರಕ್ತ ಸಂಬಂಧಗಳನ್ನೂ ನೋಡದ ಕೆಲ ಕಾಮುಕರೂ ಸಹ ನೀಚ ಕೃತ್ಯಗಳನ್ನು ಎಸಗುತ್ತಿರುತ್ತಾರೆ. ಈ ಹಾದಿಯಲ್ಲೇ ಒಡಿಶಾದ ಕಂದಮಾಲ್ ಜಿಲ್ಲೆಯಲ್ಲಿ ಪಾಪಿಯೊಬ್ಬ ತನ್ನ ನಾಲ್ವರು ಸ್ನೇಹಿತರೊಂದಿಗೆ ಸೇರಿ ತನ್ನ ಸಹೋದರಿಯನ್ನೇ ರೇಪ್ ಮಾಡಿ ಕೊಲೆ ಮಾಡಿರುವ ನೀಚ ಕೃತ್ಯ ನಡೆದಿದೆ ಎಂದು ತಿಳಿದುಬಂದಿದೆ.

ನ.3 ರಂದು ಚಕಪಾಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಸ್ನೇಹಿತರೊಂದಿಗೆ ತಂಗಿಯ ಮೇಲೆ ಗ್ಯಾಂಗ್ ರೇಪ್ ಮಾಡಿದ ವ್ಯಕ್ತಿ ಆಕೆಯನ್ನು ಕೊಲೆ ಸಹ ಮಾಡಿದ್ದಾನೆ. ಕೊಲೆ ಮಾಡಿದ್ದು, ಯಾರು ಎಂಬ ರಹಸ್ಯ ಈಗ ಬಯಲಾಗಿದೆ. ರಹಸ್ಯವಾಗಿದ್ದ ಈ ಪ್ರಕರಣವನ್ನು ಬೇಧಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿ ಸಹೋದರ ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನಂತೆ. ಅದನ್ನು ಆರೋಪಿ ಸಹೋದರಿ ನಿಲ್ಲಿಸುವಂತೆ ಕೇಳಿಕೊಂಡಿದ್ದಳಂತೆ. ಇಲ್ಲವಾದರೇ ಈ ಬಗ್ಗೆ ಎಲ್ಲರಿಗೂ ತಿಳಿಸುವುದಾಗಿ ಬೆದರಿಕೆ ಹಾಕಿದ್ದಳಂತೆ. ಈ ಹಿನ್ನೆಲೆಯಲ್ಲಿ ಆಕೆಗೆ ಏನಾದರೂ ಒಂದು ಗತಿ ಕಾಣಿಸಬೇಕೆಂದು ಆರೋಪಿ ಪ್ಲಾನ್ ಮಾಡಿದ್ದನಂತೆ.

ಘಟನೆ ನಡೆದ ದಿನದಂದು ಮೃತ ಮಹಿಳೆ ಸಿಯಾಲಿ ಎಲೆಗಳನ್ನು ಸಂಗ್ರಹಿಸಲು ಸಮೀಪದ ಕಾಡಿಗೆ ತೆರಳಿದ್ದಳಂತೆ. ಆಕೆಯ ಜೊತೆಗೆ ಸಹೋದರನೂ ಸಹ ಹಸುಗಳೊಂದಿಗೆ ತೆರಳಿದ್ದನಂತೆ. ಬಳಿಕ ತನ್ನ ನಾಲ್ವರು ಸ್ನೇಹಿತರನ್ನು ಕಾಡಿಗೆ ಕರೆಸಿ ಮದ್ಯಪಾನ ಮಾಡಿದ್ದಾರೆ. ಕುಡಿದ ಅಮಲಿನಲ್ಲಿ ಆಕೆಯ ಮೇಲೆ ಸರದಿಯಂತೆ ಅತ್ಯಾಚಾರವೆಸಗಿದ್ದಾರೆ. ಬಳಿಕ ಆಕೆ ಕೂಗಾಡುತ್ತಿದ್ದು ಆಕೆಯ ಕತ್ತು ಹಿಸುಕಿ ಬಳಿಕ ಕೊಡಲಿಯಿಂದ ಹಲ್ಲೆ ನಡೆಸಿದ್ದಾರೆ. ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬಳಿಕ ಆರೋಪಿ ಸಹೋದರನೇ ತಂಗಿ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದಾನೆ. ಬಳಿಕ ಮಹಿಳೆಯ ಕೊಳೆತ ಶವ ನ.7 ರಂದು ಕಾಡಿನಲ್ಲಿ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಮೇಲೆ ಗ್ಯಾಂಗ್ ರೇಪ್ ಮಾಡಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕೊನೆಗೆ ಅತ್ಯಾಚಾರವೆಸಗಿದಂತಹ ಪಾಪಿಗಳನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.