Film News

ಡಾಕ್ಟರ್ ವೃತ್ತಿ ಆರಂಭದ ಬಳಿಕ ಫ್ರೀ ಸರ್ವಿಸ್ ಮಾಡಲ್ಲವಂತೆ ಸಾಯಿ ಪಲ್ಲವಿ, ಅಂತಹವರಿಂದ ಮಾತ್ರ ಹಣ ಪಡೆಯುತ್ತಾರಂತೆ ನ್ಯಾಚುರಲ್ ಬ್ಯೂಟಿ…!

ಮಲಯಾಳಂ ಮೂಲದ ನಟಿ ಸಾಯಿಪಲ್ಲವಿ ಓವರ್‍ ಗ್ಲಾಮರ್‍ ಶೋ ಮಾಡದೇ ನ್ಯಾಚುರಲ್ ಬ್ಯೂಟಿಯ ಮೂಲಕ ತುಂಬಾನೆ ಕ್ರೇಜ್ ಪಡೆದುಕೊಂಡು ಸ್ಟಾರ್‍ ನಟಿಯಾಗಿದ್ದಾರೆ. ಅನೇಕ ಹಿಟ್ ಸಿನೆಮಾಗಳ ಮೂಲಕ ಕ್ರೇಜ್ ಪಡೆದುಕೊಂಡ ಈಕೆ ವೈದ್ಯಕೀಯ ವಿದ್ಯಾಭ್ಯಾಸವನ್ನು ಸಹ ಮುಗಿಸಿದ್ದಾರೆ. ಅನೇಕ ಭಾರಿ ಆಕೆ ತನ್ನ ವೈದ್ಯ ವೃತ್ತಿಯನ್ನು ಮುಂದುವರೆಸುವುದಾಗಿ ಸಹ ಹೇಳಿದ್ದರು. ಇದೀಗ ಸಾಯಿ ಪಲ್ಲವಿ ಕೆಲವೊಂದು ವಿಚಾರಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ನಟಿ ಸಾಯಿ ಪಲ್ಲವಿ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಟಿ ಸಾಯಿ  ಪಲ್ಲವಿ ಖಾಸಗಿ ಸಂದರ್ಶನದಲ್ಲಿ ಮಾತನಾಡುತ್ತಾ ಲಾಕ್ ಡೌನ್ ಸಮಯದಲ್ಲಿ ಆಕೆ ಪ್ರಕೃತಿ ಮಡಿಲಲ್ಲಿ ಇರುವುದನ್ನು ತುಂಬಾ ಮಿಸ್ ಮಾಡಿಕೊಂಡಿದ್ದಾರಂತೆ. ನಾನು ಸಿನೆಮಾಗಳನ್ನು ಆಯ್ಕೆ ಮಾಡಿಕೊಳ್ಳುವಾಗ ನಾನು ಯೋಚನೆ ಮಾಡುವುದು ಬೇರೆ. ಆದರೆ ಜನರು ಸಲಹೆ ಹಾಗೂ ಏನು ಯೋಚನೆ ಮಾಡುತ್ತಾರೆ ಎಂದು ತಲೆಕಡೆಸಿಕೊಳ್ಳುವುದಿಲ್ಲ. ಬಳಿಕ ನಾನು ಜನರ ನಂಬಿಕೆಗಳ ಬಗ್ಗೆ ತಿಳಿದುಕೊಳ್ಳಲು ಸಹ ಪ್ರಾರಂಭಿಸಿದೆ. ನಾನು ಒಳ್ಳೆಯ ವ್ಯಕ್ತಿಯಾಗಿ ಬೆಳೆದರೇ ಮಾತ್ರ ನನ್ನ ಬಗ್ಗೆ ಸಮಾಜದ ಬಗ್ಗೆ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದಿದ್ದಾರೆ.

ಇನ್ನೂ ನನಗೆ ಪ್ರಕೃತಿಯೊಂದಿಗೆ ಬೆರೆಯಲು ತುಂಬಾನೆ ಇಷ್ಟವಾಗಿದೆ. ನಾನು ಪ್ರಕೃತಿ ಎಂಬ ತಾಯಿಯ ಮಡಿಲಿನಲ್ಲಿ ಇರುಲು ಇಷ್ಟಪಡುತ್ತೇನೆ. ತಾಯಿ ಮಗಳ ನಡುವೆ ಎಂತಹ ಪ್ರೀತಿ ವಾತ್ಸಲ್ಯ ಇರುತ್ತದೆಯೋ ಅದೇ ರೀತಿ ನನಗೂ ಹಾಗೂ ಪ್ರಕೃತಿಗೂ ಪ್ರೀತಿ ವಾತ್ಸಲ್ಯ ಇರುತ್ತದೆ. ಸಿಟಿ ಲೈಫ್ ಕಂಪರ್ಟ ಆಗಿರುವ ಕಾರಣ ಎಲ್ಲಿಯೂ ಹೊರಗೆ ಹೋಗಲು ಆಗುವುದಿಲ್ಲ. ಇನ್ನೂ ಲಾಕ್ ಡೌನ್ ಸಮಯದಲ್ಲಿ ನಾನು ಮನೆಯಲ್ಲಿಯೇ ಇದ್ದೆ. ಪ್ರಕೃತಿ ಹಾಗೂ ಜಲಮೂಲಗಳ ನಡುವೆ ಇದಿದ್ದರೇ ನಾನು ಮತಷ್ಟು ಖುಷಿಯಾಗುತ್ತಿದೆ. ನಾನು ಸಂಭಾವನೆ ನೋಡಿ ಸಿನೆಮಾಗಳನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ. ಸಿನೆಮಾ ಕಥೆ ಚೆನ್ನಾಗಿರಬೇಕು ಜನರು ನೋಡಬೇಕು ಅಷ್ಟೆ ಆದರೆ ನಾನು ಹೊರೆ ಆಗಬಾರದು ಎಂಬ ಅನಿಸಿಕೆ ನನ್ನದು. ಜನರಿಗೆ ಇಷ್ಟವಾಗುವ ಸಿನೆಮಾ ಮಾಡಿದರೇ ಅದೇ ನನಗೆ ಖುಷಿ ಎಂದಿದ್ದಾರೆ.

ಅಷ್ಟೇಅಲ್ಲದೇ ಸಾಯಿ ಪಲ್ಲವಿ ಎಂ.ಬಿ.ಬಿ.ಎಸ್ ಪದವಿಯನ್ನು ಸಹ ಪಡೆದಿದ್ದು, ಈ ಬಗ್ಗೆ ಸಹ ಮಾತನಾಡಿದ್ದಾರೆ.  ಒಂದು ವೇಳೆ ನಾನು ಡಾಕ್ಟರ್‍ ಆದರೇ ಉಚಿತ ಸೇವೆ ಮಾಡಲ್ಲ, ಆದರೆ ಯಾರಿಂದ ಹಣ ಪಡೆದುಕೊಳ್ಳಬೇಕು ಯಾರಿಗೆ ಉಚಿತವಾಗಿ ಚಿಕಿತ್ಸೆ ನೀಡಬೇಕು ಎಂದು ಸಹ ನನಗೆ ತಿಳಿದಿದೆ ಎಂದಿದ್ದಾರೆ. ಇನ್ನೂ ಸಾಯಿ ಪಲ್ಲವಿ ಈ ಸಂದರ್ಶನದ ಹೇಳಿಕೆಗಳು ವೈರಲ್ ಆಗುತ್ತಿವೆ.

Most Popular

To Top