ಮ್ಯಾನೇಜರ್ ರಿಂದ ಮೋಸ ಹೋದ ರಶ್ಮಿಕಾ, ಈ ರೂಮರ್ ಗೆ ರಶ್ಮಿಕಾ ರಿಯಾಕ್ಷನ್ ಏನು ಗೊತ್ತಾ?

Follow Us :

ಕಳೆದೆರಡು ದಿನಗಳಿಂದ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ರವರ ಮ್ಯಾನೇಜರ್‍ ಆಕೆಯನ್ನು ಮೋಸ ಮಾಡಿ ಲಕ್ಷಾಂತರ ರೂಪಾಯಿ ತಪ್ಪಿಸಿದ್ದ ಎಂಬ ಸುದ್ದಿಗಳು ಸೋಷಿಯಲ್ ಮಿಡಿಯಾ ಸೇರಿದಂತೆ ಎಲ್ಲಾ ಕಡೆ ಜೋರಾಗಿ ಹರಿದಾಡಿತ್ತು. ಇನ್ನೂ ಈ ರೂಮರ್‍ ಗಳು ಜೋರಾಗಿ ಹರಿದಾಡುತ್ತಾ ರಶ್ಮಿಕಾ ಮಂದಣ್ಣ ವರೆಗೂ ಸೇರಿದೆ. ಇದೀಗ ಆಕೆ ಈ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ಅಷ್ಟಕ್ಕೂ ಈ ಮ್ಯಾನೇಜರ್‍ ಮೋಸದ ಬಗ್ಗೆ ರಶ್ಮಿಕಾ ಹೇಳಿದ್ದಾದರೂ ಏನು ಎಂಬ ವಿಚಾರಕ್ಕೆ ಬಂದರೇ,

ಸ್ಟಾರ್‍ ನಟಿ ರಶ್ಮಿಕಾ ಮಂದಣ್ಣ ಕನ್ನಡದ ಕಿರಿಕ್ ಪಾರ್ಟಿ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ಕಡಿಮೆ ಸಮಯದಲ್ಲೇ ಭಾರಿ ಕ್ರೇಜ್ ಪಡೆದುಕೊಂಡರು. ಸೌತ್ ಅಂಡ್ ನಾರ್ತ್‌ನಲ್ಲೂ ಬಹುಬೇಡಿಕೆ ಹೆಚ್ಚಿಸಿಕೊಂಡು ಸ್ಟಾರ್‍ ನಟರ ಸಿನೆಮಾಗಳಲ್ಲಿ ನಟಿಸುವ ಅವಕಾಶಗಳನ್ನು ಪಡೆದುಕೊಂಡರು. ಇನ್ನೂ ಬಿಗ್ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ರವರ ಬಗ್ಗೆ ಕೆಲವು ದಿನಗಳಿಂದ ದೊಡ್ಡ ರೂಮರ್‍ ಜೋರಾಗಿಯೇ ಹರಿದಾಡಿತ್ತು. ಸಾಮಾನ್ಯವಾಗಿ ಸಿನೆಮಾ ಸೆಲೆಬ್ರೆಟಿಗಳ ಆರ್ಥಿಕ ಲೇವಾದೇವಿಗಳನ್ನು ಅವರ ಮ್ಯಾನೇಜರ್‍ ನೋಡಿಕೊಳ್ಳುತ್ತಾರೆ. ಅದರಂತೆ ರಶ್ಮಿಕಾ ಮ್ಯಾನೇಜರ್‍ ಆಕೆಯನ್ನು ಮೋಸ ಮಾಡಿದ್ದಾರೆ. ಸುಮಾರು 80 ಲಕ್ಷ ರೂಪಾಯಿ ನಷ್ಟ ಮಾಡಿದ್ದಾರೆ ಎಂಬ ಪ್ರಚಾರ ಆಗಿತ್ತು. ಇನ್ನೂ ಈ ಬಗ್ಗೆ ರಶ್ಮಿಕಾ ಮಂದಣ್ಣ ಮ್ಯಾನೇಜರ್‍ ಸಹ ರಿಯಾಕ್ಟ್ ಆಗಿದ್ದರು. ಅದೇ ರೀತಿ ರಶ್ಮಿಕಾ ಸಹ ಸ್ಪಷ್ಟನೆ ಕೊಟ್ಟಿದ್ದಾರೆ.

ಇನ್ನೂ ಈ ಕುರಿತು ರಶ್ಮಿಕಾ ಹಾಗೂ ಆಕೆಯ ಮ್ಯಾನೇಜರ್‍ ಪ್ರೆಸ್ ನೋಟ್ ಒಂದನ್ನು ರಿಲೀಸ್ ಮಾಡಿದ್ದಾರೆ. ಅದರಲ್ಲಿರುವಂತೆ ನಮ್ಮ ಮದ್ಯೆ ಯಾವುದೇ ಗಲಾಟೆಯಿಲ್ಲ. ನಾವು ಸ್ನೇಹಪೂರ್ವಕವಾಗಿ ನಡೆದುಕೊಳ್ಳುವಂತೆ ನಿರ್ಣಯ ತೆಗೆದುಕೊಂಡಿದ್ದೇವೆ. ಇದೀಗ ಹರಿದಾಡುತ್ತಿರುವ ರೂಮರ್‍ ಗಳ ಪ್ರಕಾರ ದೂರವಾಗುತ್ತಿದ್ದೇವೆ ಎಂಬ ವಿಚಾರದಲ್ಲಿ ಯಾವುದೇ ಸತ್ಯಾಂಶವಿಲ್ಲ. ಇನ್ನು ಮುಂದೆ ಸ್ವತಂತ್ರವಾಗಿ ಕೆಲಸ ಮಾಡಬೇಕೆಂದು ತೀರ್ಮಾನಿಸಿದ್ದೇವೆ. ಈ ಬಗ್ಗೆ ನಮ್ಮಿಬ್ಬದ ನಡುವೆ ಯಾವುದೇ ಗಲಾಟೆ ಇಲ್ಲ. ಆರೋಗ್ಯಕರವಾದ ವಾತವಾರಣದಲ್ಲಿ ಕೆಲಸ ಮಾಡಿದ್ದೇವೆ. ಇಬ್ಬರೂ ಪರಸ್ಪರ ಒಪ್ಪಿಗೆಯ ಮೇರೆಗೆ ಬೇರೆ ಬೇರೆಯಾಗಿ ಕೆರಿಯರ್‍ ನಲ್ಲಿ ಮುಂದೆ ಸಾಗಬೇಕೆಂದು ನಿರ್ಧರಿಸಿದ್ದೇವೆ. ನಮ್ಮ ನಡುವೆ ಯಾವುದೇ ವಿಭೇದಗಳಿಲ್ಲ ಎಂದು ಇಬ್ಬರೂ ಈ ರೂಮರ್‍ ಗಳಿಗೆ ಚೆಕ್ ಇಟ್ಟಿದ್ದಾರೆ.

ಸದ್ಯ ರಶ್ಮಿಕಾ ಮಂದಣ್ಣ ಸೌತ್ ಅಂಡ್ ನಾರ್ತ್ ನಲ್ಲೂ ಪುಲ್ ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲೇ ಆಕೆ ಬಾಲಿವುಡ್ ನ ಯಾನಿಮಲ್ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಇದರ ಜೊತೆಗೆ ಆಕೆ ಪುಷ್ಪಾ-2 ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ರೈಂಬೋ ಸಿನೆಮಾದ  ಜೊತೆಗೆ ಮತಷ್ಟು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.