Film News

ಉದ್ದೇಶಪೂರ್ವಕವಾಗಿ ಬಾಲಕನಿಗೆ ಹೊಡೆದಿಲ್ಲ, ವೈರಲ್ ಆದ ವಿಡಿಯೋ ಬಗ್ಗೆ ನಾನಾ ಪಾಟೇಕರ್ ರಿಯಾಕ್ಷನ್, ಕ್ಷಮೆ ಕೇಳಿದ ನಟ…..!

ಕಳೆದೆರಡು ದಿನಗಳ ಹಿಂದೆಯಷ್ಟೆ ಬಾಲಿವುಡ್ ನಟ ನಾನಾ ಪಾಟೇಕರ್‍ ಬಾಲಕನೊಬ್ಬನಿಗೆ ಹೊಡೆದ ಎಂಬ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಈ ಬಗ್ಗೆ ನಟನ ವಿರುದ್ದ ವಿವಿಧ ರೀತಿಯ ವಿಮರ್ಶೆಗಳೂ ಸಹ ಎದುರಿಸಿದ್ದರು. ಇದೀಗ ಈ ಘಟನೆಯ ಬಗ್ಗೆ ನಟ ನಾನಾ ಪಾಟೇಕರ್‍ ರಿಯಾಕ್ಟ್ ಆಗಿದ್ದು, ನಾನು ಉದ್ದೇಶಪೂರ್ವಕವಾಗಿ ಬಾಲಕನನ್ನು ಹೊಡೆದಿಲ್ಲ ಎಂದು, ಈ ಬಗ್ಗೆ ನಿಮಗೆ ತಪ್ಪು ಕಲ್ಪನೆ ಇದ್ದರೇ ಕ್ಷಮೆ ಇರಲಿ ಎಂದು ಟ್ವೀಟ್ ಮಾಡಿದ್ದಾರೆ.

ನಟ ನಾನಾ ಪಾಟೇಕರ್‍ ವಾರಣಾಸಿಯಲ್ಲಿ ಶೂಟಿಂಗ್ ನಿಮಿತ್ತ ಹೋಗಿದ್ದರು. ಈ ವೇಳೆ ಹುಡುಗನೊಬ್ಬ ನಾನಾ ಪಾಟೇಕರ್‍ ಬಳಿ ಬಂದು ಪೊಟೋ ತೆಗೆದುಕೊಳ್ಳಲು ಮುಂದಾಗಿದ್ದ, ಬಳಿಕ ನಾನಾ ಪಾಟೇಕರ್‍ ಆ ಹುಡುಗನನ್ನು ತಳ್ಳಿದ್ದರು. ಅಲ್ಲಿನ ಸಿಬ್ಬಂದಿ ಹುಡುಗನ ಕತ್ತು ಹಿಡಿದು ಶೂಟಿಂಗ್ ಸೆಟ್ ನಿಂದ ಹೊರದಬ್ಬಿದ್ದರು. ನಾನಾ ಪಾಟೇಕರ್‍ ಆ ಹುಡುಗನ ತಲೆಗೆ ಹೊಡೆದಿದ್ದರು. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೋಗೆ ವಿವಿಧ ರೀತಿಯ ವಿಮರ್ಶೆಗಳು ಕೇಳಿಬಂದವು. ನಟನ ವರ್ತನೆಗೆ ಆಕ್ರೋಷ ಸಹ ವ್ಯಕ್ತವಾಗಿತ್ತು. ಇದೀಗ ನಾನಾ ಪಾಟೇಕರ್‍ ಟ್ವಿಟರ್‍ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಟ್ವಿಟರ್‍ ನಲ್ಲಿ ಶೇರ್‍ ಮಾಡಿದ ನಾನಾ ಪಾಟೇಕರ್‍ ಈ ಘಟನೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಈ ಘಟನೆಯ ವೇಳೆ ಏನಾಗಿದೆ ಎಂಬುದು ಜರ್ನಿ ಸಿನೆಮಾ ಬಿಡುಗಡೆಯಾದ ಬಳಿಕ ನಿಮಗೆ ಗೊತ್ತಾಗುತ್ತದೆ. ಈ ಸಿನೆಮಾದಲ್ಲಿ ಬಾಲಕನೊಬ್ಬನಿಗೆ ಹೊಡೆಯುವಂತಹ ದೃಶ್ಯವಿದೆ. ಅದಕ್ಕಾಗಿ ನಾವು ಅಭ್ಯಾಸ ಮಾಡಿಕೊಳ್ಳಬೇಕು. ಶೂಟಿಂಗ್ ಸೆಟ್ ಗೆ ಬಂದಂತಹ ಹುಡುಗ ನಮ್ಮ ಸಿಬ್ಬಂದಿ ಎಂದು ತಿಳಿದು ನಾನು ಅಭ್ಯಾಸಕ್ಕಾಗಿ ಆ ಹುಡುಗನ ತಲೆಗೆ ಹೊಡೆದೆ. ಬಳಿಕ ಆ ಹುಡುಗ ನನ್ನ ಜೊತೆಗೆ ಪೊಟೋಗಾಗಿ ಬಂದಿದ್ದ ಎಂದು ತಿಳಿಯಿತು. ಮತ್ತೆ ಆ ಬಾಲಕನನ್ನು ಕರೆದೆ. ಆದರೆ ಬಾಲಕ ಅಲ್ಲಿ ಇರಲಿಲ್ಲ. ಬಾಲಕನಿಗಾಗಿ ಸಾಕಷ್ಟು ಹುಡುಕಲಾಯಿತು. ಆದರೆ ಆತ ಪತ್ತೇಯಾಗಲಿಲ್ಲ. ನಾನು ಆತನೊಂದಿಗೆ ಅನುಚಿತವಾಗಿ ವರ್ತನೆ ಮಾಡಿಲ್ಲ. ಅನೇಕ ಅಭಿಮಾನಿಗಳು ಬಂದು ನನ್ನೊಂದಿಗೆ ಪೊಟೋ ತೆಗೆದುಕೊಂಡಿದ್ದಾರೆ. ಇದೊಂದು ತಪ್ಪು ತಿಳುವಳಿಕೆಯಿಂದ ನಡೆದಂತ ಘಟನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನೂ ಜರ್ನಿ ಸಿನೆಮಾದ ಈ ದೃಶ್ಯವನ್ನು ವಾರಣಾಸಿಯ ಮಾರುಕಟ್ಟೆಯಲ್ಲಿ ಶೂಟಿಂಗ್ ಮಾಡಲಾಗುತ್ತಿತ್ತು. ಅಲ್ಲಿ ತುಂಬಾ ಮಂದಿಯಿದ್ದು, ಅವರಲ್ಲಿ ಸಿಬ್ಬಂದಿ ಯಾರು, ಸಾಮಾನ್ಯರು ಯಾರು ಎಂಬ ಗೊಂದಲ ಇತ್ತು. ಆದ್ದರಿಂದ ಈ ಘಟನೆ ನಡೆದಿದೆ. ಈ ದೃಶ್ಯಕ್ಕೆ ಸಂಬಂಧಿಸಿದ ತಪ್ಪು ಭಾವನೆ ನಿಮ್ಮಲ್ಲಿ ಇದ್ದರೇ ನನ್ನನ್ನು ಕ್ಷಮಿಸಿ ಎಂದು, ವಾರಣಾಸಿ ಜನತೆ ಸೇರಿದಂತೆ ಎಲ್ಲರೂ ನನಗೆ ತುಂಬಾ ಪ್ರೀತಿಯನ್ನು ನೀಡಿದ್ದಾರೆ. ಮುಂದೆ ಈ ರೀತಿಯ ಘಟನೆ ನಡೆಯದಂತೆ ಎಚ್ಚರ ವಹಿಸುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

Most Popular

To Top