WWE ರಿಂಗ್ ನಲ್ಲಿ ನಾಟು ನಾಟು ಹಾಡಿನ ಸದ್ದು, ರಿಂಗ್ ನಲ್ಲಿ ನಾಟು ನಾಟು ಹಾಡಿಗೆ ಕುಣಿದ WWE ಸ್ಪರ್ಧಿಗಳು…..!

Follow Us :

ಆಸ್ಕರ್‍ ಅವಾಡ್ ಪಡೆದುಕೊಂಡ RRR ಸಿನೆಮಾದ ನಾಟು ನಾಟು ಹಾಡು ವಿಶ್ವದಾದ್ಯಂತ ಭಾರಿ ಸದ್ದು ಮಾಡಿದೆ. ಈ ಹಾಡಿಗೆ ಸಾಮಾನ್ಯರಿಂದ ಹಿಡಿದು ದೊಡ್ಡ ದೊಡ್ಡ ಸ್ಟಾರ್‍ ಗಳೂ ಸಹ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇದೀಗ WWE ಕುಸ್ತಿ ಪಟುಗಳೂ ಸಹ ನಾಟು ನಾಟು ಹಾಡಿಗೆ ರಿಂಗ್ ನಲ್ಲಿ ಕುಣಿದಿದ್ದಾರೆ. ಹೈದರಾಬಾದ್ ನಲ್ಲಿ ನಡೆದ ರೆಸ್ಲಿಂಗ್ ಶೋ ನಲ್ಲಿ ಕುಸ್ತಿಪಟುಗಳು ನಾಟು ನಾಟು ಹಾಡಿಗೆ ನೃತ್ಯವಾಡಿದ್ದಾರೆ. ಇನ್ನೂ ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ವಿಶ್ವದಾದ್ಯಂತ WWE ರೆಸ್ಲಿಂಗ್ ಗೇಂ ತುಂಬಾನೆ ಫೇಂ ಪಡೆದುಕೊಂಡಿದೆ. ಅನೇಕ ದೇಶಗಳಲ್ಲಿ ಈ ಶೋ ನಡೆಯುತ್ತಿರುತ್ತದೆ. ಸುಮಾರು ಆರು ವರ್ಷಗಳ ಬಳಿಕ WWE ರೆಸ್ಲಿಂಗ್ ಟೀಂ ಭಾರತಕ್ಕೆ ಬಂದಿದೆ. ಈ ಶೋ ನಲ್ಲಿ ಹೊಡೆದಾಟ, ಡ್ರಾಮಾ ಹಾಗೂ ತಮ್ಮ ಅಭಿಮಾನದ ಕುಸ್ತಿಪಟುಗಳ ಪ್ರದರ್ಶನ ಎಲ್ಲರಿಗೂ ಮನರಂಜನೆ ನೀಡಿತ್ತು. ಆದರೆ ಹೈದರಾಬಾದ್ ನಲ್ಲಿ ನಡೆದ ರೆಸ್ಲಿಂಗ್ ಶೋ ನಲ್ಲಿ ಮಾತ್ರ ನಾಟು ನಾಟು ಹಾಡಿಗೆ ರೆಸ್ಲರ್‍ ಗಳು ಸ್ಟೆಪ್ಸ್ ಹಾಕಿದ್ದಾರೆ. ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಕಳೆದ ಒಂದು ವಾರದಿಂದ ಸಕತ್ ವೈರಲ್ ಆಗುತ್ತಿದೆ. epicwrestlingmoments ಎಂಬ ಇನ್ಸ್ಟಾ ಖಾತೆಯಿಂದ ಈ ವಿಡಿಯೋ ಹಂಚಿಕೊಂಡಿದ್ದು, ಸೂಪರ್‍ ಕ್ಷಣ ಎಂದು ಕ್ಯಾಪ್ಷನ್ ಹಾಕಲಾಗಿದೆ.  ಈ ವಿಡಿಯೋದಲ್ಲಿ ಜಿಂದರ್‍ ಮಹಲ್, ಮ್ಯಾಕ್ ಇಂಟೈರ್‍, ಜಿಂದರ್‍ ಮಹಲ್, ಸಾಮಿ ಝೈನ್ ಮತ್ತು ಕೆವಿನ್ ಓವೆನ್ಸ್ ರವರುಗಳು ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಇನ್ನೂ ಏಳು ದಿನಗಳ ಹಿಂದೆ ಈ ವಿಡಿಯೋ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದು, ಮಿಲಿಯನ್ ಗಟ್ಟಲೇ ಜನರು ವೀಕ್ಷಣೆ ಮಾಡಿದ್ದಾರೆ. ಜೊತೆಗೆ ಈ ವಿಡಿಯೋಗೆ ವಿವಿಧ ರೀತಿಯ ಕಾಮೆಂಟ್ ಗಳೂ ಸಹ ಹರಿದುಬರುತ್ತಿದೆ. ದಿಸ್ ಈಸ್ ಪವರ್‍ ಆಫ್ RRR ಎಂದರೇ, ಭಾರತೀಯ ಹಾಡುಗಳು ಎಲ್ಲರಿಗೂ ಇಷ್ಟವಾಗುತ್ತದೆ ಎಂದಲೂ, ಆಸ್ಕರ್‍ ಪ್ರಶಸ್ತಿ ಪಡೆದ ಹಾಡು ಎಂದರೇ ಕಡಿಮೆನಾ ಎಂದು ಕಾಮೆಂಟ್ ಮಾಡಿದ್ದಾರೆ. RRR ಸಿನೆಮಾ ದೇಶ ಮಾತ್ರವಲ್ಲದೇ ವಿದೇಶದಲ್ಲೂ ಸಹ ಭಾರಿ ಸದ್ದು ಮಾಡಿತ್ತು. ಅನೇಕ ಸಿನೆಮಾಗಳ ರೆಕಾರ್ಡ್ ಸಹ ಬ್ರೇಕ್ ಮಾಡಿದೆ.