Film News

ಶೀಘ್ರದಲ್ಲೇ ಮದುವೆಯಾಗಲಿದ್ದಾರಂತೆ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ದೇವಿ ಶ್ರೀ, ಆತನಿಗಿಂತ 17 ವರ್ಷ ಚಿಕ್ಕವಳ ಜೊತೆ ಮದುವೆಯಂತೆ?

ಟಾಲಿವುಡ್ ನ ರಾಕ್ ಸ್ಟಾರ್‍ ದೇವಿ ಶ್ರೀಪ್ರಸಾದ್ ಟಾಪ್ ಮ್ಯೂಸಿಕ್ ಡೈರೆಕ್ಟರ್‍ ಗಳಲ್ಲಿ ಒಬ್ಬರಾಗಿದ್ದಾರೆ. ಅನೇಕ ಸಿನೆಮಾಗಳಿಗೆ ಮ್ಯೂಸಿಕ್ ಕಂಪೋಸ್ ಮಾಡುವ ಮೂಲಕ ಭಾರಿ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ಸ್ಟಾರ್‍ ನಟರ ಸಿನೆಮಾಗಳಿಗೆ ದೇವಿಶ್ರೀ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಒಬ್ಬ ಸ್ಟಾರ್‍ ನಟನಗಿರುವಂತೆ ದೇವಿಶ್ರೀ ಪ್ರಸಾದ್ ಗೂ ಅಪಾರ ಅಭಿಮಾನಿ ಬಳಗವಿದೆ. ಇದೀಗ ದೇವಿಶ್ರೀ ರವರ ಮದುವೆಯ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ರಾಕ್ ಸ್ಟಾರ್‍ ದೇವಿಶ್ರೀ ಪ್ರಸಾದ್ ಸುಮಾರು 20 ವರ್ಷಗಳಿಂದ ಅನೇಕ ಸಿನೆಮಾಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಸುಮಾರು ನೂರಕ್ಕೂ ಹೆಚ್ಚು ಸಿನೆಮಾಗಳಿಗೆ ಸಂಗೀತ ನೀಡಿದ್ದಾರೆ. ತನ್ನದೇ ಆದ ಶೈಲಿಯಲ್ಲಿ ಕ್ರೇಜ್ ಪಡೆದುಕೊಂಡ ದೇವಿಶ್ರೀ ಈ ಹಿಂದೆ ಅನೇಕ ಹುಡುಗಿಯರ ಜೊತೆ ಲವ್ ನಲ್ಲಿದ್ದಾರೆ ಎಂದು ಸುದ್ದಿಗಳು ಕೇಳಿಬಂದವು. ಅವೆಲ್ಲವೂ ಕೇವಲ ರೂಮರ್‍ ಗಳೆಂದು ತಿಳಿಯಿತು. ಬಳಿಕ ಇತ್ತೀಚಿಗೆ ಆಕೆ ನಟಿ ಪೂಜಿತಾ ಪೊನ್ನಾಡ ಜೊತೆಗೆ ಅಫೈರ್‍ ನಡೆಯುತ್ತಿದೆ ಎಂಬ ಸುದ್ದಿ ಸಹ ಕೇಳಿಬಂತು. ಬಳಿಕ ಅದೂ ಸಹ ಕೇವಲ ರೂಮರ್‍ ಎಂದು ಬಯಲಾಯ್ತು. ಸದ್ಯ ನಲವತ್ತರ ಗಡಿ ದಾಟಿದ ದೇವಿಶ್ರೀ ಮದುವೆಯ ಬಗ್ಗೆ ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಇದೀಗ ಅವರ ಮದುವೆಯ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ.

ದೇವಿಶ್ರೀ ಪ್ರಸಾದ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಈಗಾಗಲೇ ಹುಡುಗಿ ಸಹ ಫಿಕ್ಸ್ ಆಗಿದ್ದಾರೆ. ಶೀಘ್ರದಲ್ಲೇ ಮದುವೆಯ ಬಗ್ಗೆ ಸಂಪೂರ್ಣ ಸುದ್ದಿ ಹೊರಬರಲಿದೆ ಎಂಬ ಸುದ್ದಿಯೊಂದು ಸಿನಿವಲಯದಲ್ಲಿ ಕೇಳಿಬರುತ್ತಿದೆ. ಇನ್ನೂ ದೇವಿಶ್ರೀ ಪ್ರಸಾದ್ ಮದುವೆಯಾಗುತ್ತಿರುವ ಸುದ್ದಿಯನ್ನು ಕೇಳಿದ ಅಭಿಮಾನಿಗಳು ಪುಲ್ ಖುಷಿಯಾಗಿದ್ದಾರೆ. ಇನ್ನೂ ದೇವಿ ಶ್ರೀ ಯಾರನ್ನು ಮದುವೆಯಾಗಲಿದ್ದಾರೆ ಎಂಬ ಕುತೂಹಲ ಸಹ ಎಲ್ಲರಲ್ಲೂ ಮೂಡಿದೆ. ಇದೀಗ ಹರಿದಾಡುತ್ತಿರುವ ಸುದ್ದಿಯಂತೆ ದೇವಿಶ್ರೀ ಪ್ರಸಾದ್ ತಮ್ಮ ಸಂಬಂಧಿಕರಲ್ಲೆ ಮದುವೆಯಾಗಲಿದ್ದಾರಂತೆ. ದೂರದ ಸಂಬಂಧಿಯೊಬ್ಬರನ್ನು ದೇವಿ ಶ್ರೀ ಮದುವೆಯಾಗಲಿದ್ದಾರಂತೆ.

ಇನ್ನೂ ಈ ಸುದ್ದಿಯಲ್ಲಿ ಮತ್ತೊಂದು ಶಾಕಿಂಗ್ ವಿಚಾರ ಸಹ ಇದೆ. ಅದು ಏನೆಂದರೇ ದೇವಿ ಶ್ರೀ ಮದುವೆಯಾಗಲಿರುವ ಹುಡುಗಿಗೂ ಹಾಗೂ ದೇವಿಶ್ರೀ ನಡುವೆ ಸುಮಾರು 17 ವರ್ಷ ವಯಸ್ಸಿನ ಅಂತರವಿದೆಯಂತೆ. ಇನ್ನೂ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಂದಿಲ್ಲ. ಆದರೆ ಶೀಘ್ರದಲ್ಲೇ ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಮದುವೆ ನಡೆಯಲಿದೆ ಎನ್ನಲಾಗುತ್ತಿದೆ. ಈ ಸುದ್ದಿ ನಿಜವೋ ಅಥವಾ ಸುಳ್ಳೊ ಎಂಬುದು ಮಾತ್ರ ಇನ್ನೂ ಖಚಿತವಾಗಿಲ್ಲ. ಆದರೆ ಸುದ್ದಿ ಮಾತ್ರ ಸೋಷಿಯಲ್ ಮಿಡಿಯಾ ಹಾಗೂ ಸಿನಿವಲಯದಲ್ಲಿ ಹಾಟ್ ಟಾಪಿಕ್ ಆಗಿದೆ.

Most Popular

To Top