ಅಂತೂ ಇಂತೂ ಮಕ್ಕಳ ಹೆಸರುಗಳನ್ನು ರಿವೀಲ್ ಮಾಡಿದ ಲೇಡಿ ಸೂಪರ್ ಸ್ಟಾರ್ ನಯನತಾರಾ…….!

ಸೌತ್ ಸಿನಿರಂಗದ ಸ್ಟಾರ್‍ ನಟಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಸುಮಾರು ವರ್ಷಗಳ ಕಾಲ ಪ್ರೇಮ ಪಯಣ ಸಾಗಿಸಿ ಬಳಿಕ ಕಳೆದ ವರ್ಷ ಜೂನ್ 9 ರಂದು ಸಪ್ತಪದಿ ತುಳಿದರು. ಚೆನೈನ ಮಹಾಬಲಿಪುರಂ ನಲ್ಲಿ ಈ ಜೋಡಿಯ ಮದುವೆ ಅದ್ದೂರಿಯಾಗಿ ನೆರವೇರಿತು. ಅಕ್ಟೋಬರ್‍ ಮಾಹೆಯಲ್ಲೇ ಈ ಜೋಡಿ ಸೆರಗೋಸಿ ಪದ್ದತಿಯ ಮೂಲಕ ಅವಳಿ ಮಕ್ಕಳನ್ನು ಪಡೆದುಕೊಂಡರು. ಮಕ್ಕಳನ್ನು ಪಡೆದುಕೊಂಡಾಗಿನಿಂದ ಅವರ ಮುಖ ಸಾರ್ವಜನಿಕವಾಗಿ ತೋರಿಸುತ್ತಿಲ್ಲ. ಇದೀಗ ತಮ್ಮ ಮಕ್ಕಳ ಹೆಸರನ್ನು ರಿವೀಲ್ ಮಾಡಿದ್ದಾರೆ.

ನಯನತಾರಾ ಹಾಗೂ ವಿಘ್ನೇಶ್ ಸುಮಾರು ವರ್ಷಗಳಿಂದ ಪ್ರೀತಿಸಿ ಬಳಿಕ ಅದ್ದೂರಿಯಾಗಿ ಮದುವೆಯಾದರು. ಅವರು ಮದುವೆಯಾದಾಗಿನಿಂದ ಒಂದಲ್ಲ ಒಂದು ಕಾರಣಕ್ಕಾಗಿ ವಿವಾದದಲ್ಲಿ ಸಿಲುಕುತ್ತಿದ್ದರು. ತಿರುಮಲ ದಲ್ಲಿ ಚಪ್ಪಲಿ ಧರಿಸಿದ್ದಾರೆ ಎಂದು ಭಕ್ತರ ಆಕ್ರೋಷಕ್ಕೆ ಕಾರಣವಾಗಿದ್ದರು. ಬಳಿಕ ಈ ಬಗ್ಗೆ ಬಹಿರಂಗ ಕ್ಷಮೆಯನ್ನು ಸಹ ಕೋರಿದ್ದರು. ಬಳಿಕ ಸೆರಗೋಸಿ ಪದ್ದತಿಯ ಮೂಲಕ ಮಕ್ಕಳನ್ನು ಪಡೆದುಕೊಂಡಿರುವುದಾಗಿ ಘೋಷಣೆ ಮಾಡಿದರು. ಈ ಜೋಡಿ ಮಕ್ಕಳನ್ನು ಕಾನೂನಿನ ಪ್ರಕಾರ ಪಡೆದುಕೊಂಡಿಲ್ಲ ಎಂದು ದೊಡ್ಡ ವಿವಾದಕ್ಕೆ ಗುರಿಯಾಗಿತ್ತು. ಬಳಿಕ ತಾವು ಕಾನೂನಿನಡಿಯಲ್ಲಿ ಮಕ್ಕಳನ್ನು ಪಡೆದುಕೊಂಡಿದ್ದಾಗಿ ತಿಳಿಸಿದರು. ಇನ್ನೂ ತಮ್ಮ ಅವಳಿ ಮಕ್ಕಳಿಗೆ ಈ ಹಿಂದೆ ಉಯರ್‍, ಉಲಗ್ ಎಂಬ ಹೆಸರುಗಳನ್ನು ಇಟ್ಟಿರುವುದಾಗಿ ಪ್ರಕಟಿಸಿದ್ದರು. ಆದರೆ ಈ ಹೆಸರುಗಳು ಪೂರ್ಣ ಹೆಸರುಗಳಾಗಿರಲಿಲ್ಲ. ಇದೀಗ ತಮ್ಮ ಮಕ್ಕಳು ಪೂರ್ಣ ಹೆಸರನ್ನು ರಿವೀಲ್ ಮಾಡಿದ್ದಾರೆ.

ಕಳೆದೆರಡು ದಿನಗಳ ಹಿಂದೆ ನಯನತಾರಾ ಅವಾರ್ಡ್ ಕಾರ್ಯಕ್ರಮ ವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಆಕೆ ತನ್ನ ಮಕ್ಕಳ ಪೂರ್ಣ ಹೆಸರುಗಳನ್ನು ರಿವೀಲ್ ಮಾಡಿದ್ದಾರೆ. ಮೊದಲನೇ ಮಗನ ಹೆಸರು ಉಯಿರ್‍ ರುದ್ರೋನಿಲ್ ಎನ್.ಶಿವನ್ ಹಾಗೂ  ಎರಡನೇ ಮಗನ ಹೆಸರು ಉಲಗ್ ಧೈವಾಗ್ ಎನ್.ಶಿವನ್ ಎಂದು ಹೇಳುವ ಮೂಲಕ ತಮ್ಮ ಮಕ್ಕಳ ಪೂರ್ಣ ಹೆಸರನ್ನು ರಿವೀಲ್ ಮಾಡಿದ್ದಾರೆ. ಇನ್ನೂ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅಭಿಮಾನಿಗಳೂ ಸಹ ಮಕ್ಕಳ ಪೂರ್ಣ ಹೆಸರನ್ನು ಕೇಳಿ ಖುಷಿಯಾಗಿದ್ದಾರೆ. ಜೊತೆಗೆ ಶೀಘ್ರವಾಗಿ ತಮ್ಮ ಮಕ್ಕಳ ಮುದ್ದಿನ ಮುಖವನ್ನು ತೋರಿಸುವಂತೆ ಮನವಿ ಸಹ ಕಾಮೆಂಟ್ ಮೂಲಕ ತಿಳಿಸುತ್ತಿದ್ದಾರೆ.

ಇನ್ನೂ ನಯನತಾರಾ ಹಾಗೂ ವಿಘ್ನೇಶ್ ಮದುವೆ ಅದ್ದೂರಿಯಾಗಿ ಸ್ಟಾರ್‍ ಸೆಲೆಬ್ರೆಟಿಗಳೂ ಸೇರಿದಂತೆ ಅನೇಕ ಗಣ್ಯರ ಸಮ್ಮುಖದಲ್ಲಿ ನಡೆಯಿತು. ಇನ್ನೂ ಮದುವೆಯಾದ ಬಳಿಕ ನಯನತಾರಾ ಹಾಗೂ ವಿಘ್ನೇಶ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ವಿಮಾನ ನಿಲ್ದಾಣದಲ್ಲಿ ಮಕ್ಕಳೊಂದಿಗೆ ಕಾಣಿಸಿಕೊಂಡಿದ್ದರು. ಸದ್ಯ ನಯನತಾರಾ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ರವರ ಜವಾನ್ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾಗಾಗಿ ಆಕೆ ಭಾರಿ ಮೊತ್ತದ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಸುದ್ದಿಗಳು ಕೇಳಿಬರುತ್ತಿವೆ.