ಆ್ಯಪ್ ಮೂಲಕ ಲೈಂಗಿಕ ದಂದೆ ನಡೆಸುತ್ತಿದ್ದ ಜಾಲವನ್ನು ಭೇದಿಸಿದ ಮುಂಬೈ ಪೊಲೀಸರು…..!

ತಂತ್ರಜ್ಞಾನ ಹೆಚ್ಚಾದಂತೆ ಅದನ್ನು ಬಳಸಿಕೊಂಡು ಅಪರಾಧಗಳೂ ಸಹ ಹೆಚ್ಚಾಗುತ್ತಿರುತ್ತವೆ. ಅದರಲ್ಲೂ ಸೆಕ್ಸ್ ವಿಚಾರಕ್ಕೆ ಅನೇಕರು ತಂತ್ರಜ್ಞಾನದ ಮೂಲಕ ದೊಡ್ಡ ದಂದೆ ನಡೆಸುತ್ತಿರುತ್ತಾರೆ. ಅದೇ ಮಾದರಿಯಲ್ಲಿ ಆ್ಯಪ್ ಮೂಲಕ ಲೈವ್ ಸೆಕ್ಸ್ ವಿಡಿಯೋ ಮಾಡುತ್ತಿದ್ದಂತಹ ಜಾಲವೊಂದನ್ನು…

ತಂತ್ರಜ್ಞಾನ ಹೆಚ್ಚಾದಂತೆ ಅದನ್ನು ಬಳಸಿಕೊಂಡು ಅಪರಾಧಗಳೂ ಸಹ ಹೆಚ್ಚಾಗುತ್ತಿರುತ್ತವೆ. ಅದರಲ್ಲೂ ಸೆಕ್ಸ್ ವಿಚಾರಕ್ಕೆ ಅನೇಕರು ತಂತ್ರಜ್ಞಾನದ ಮೂಲಕ ದೊಡ್ಡ ದಂದೆ ನಡೆಸುತ್ತಿರುತ್ತಾರೆ. ಅದೇ ಮಾದರಿಯಲ್ಲಿ ಆ್ಯಪ್ ಮೂಲಕ ಲೈವ್ ಸೆಕ್ಸ್ ವಿಡಿಯೋ ಮಾಡುತ್ತಿದ್ದಂತಹ ಜಾಲವೊಂದನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಲೈವ್ ಸೆಕ್ಸ್ ವಿಡಿಯೋ ಮಾಡುತ್ತಿದ್ದಂತಹ ಗ್ಯಾಂಗ್ ಒಂದನ್ನು ಮುಂಬೈ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ದಂದೆಯಲ್ಲಿ ಭಾಗಿಯಾಗಿದ್ದಂತಹ ಇಬ್ಬರು ಯುವತಿಯರು ಸೇರಿದಂತೆ ಮೂರು ಮಂದಿಯನ್ನು ಅಂಧೇರಿಯ ವಸತಿ ಫ್ಲಾಟ್ ನಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ತನಿಶಾ ರಾಜೇಶ್ ಕನೋಜಿಯಾ, ರುದ್ರ ನಾರಾಯಣ ರಾವುತ್ ಮತ್ತು ತಮನ್ನಾ ಆರಿಫ್ ಖಾನ್ ಎಂದು ಗುರ್ತಿಸಲಾಗಿದೆ. ಈ ಆರೋಪಿಗಳ ವಿರುದ್ದ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿದೆ. ಅಪರಾಧದಲ್ಲಿ ಭಾಗಿಯಾದ ಆ್ಯಪ್ ಮಾಲೀಕ ಹಾಗೂ ಮತ್ತೊರ್ವ ವ್ಯಕ್ತಿ ತಲೆ ಮರೆಸಿಕೊಂಡು ಅವರನ್ನು ಸೆರೆಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೂ ಲೈವ್ ಸೆಕ್ಸ್ ಆ್ಯಪ್ ಎಂದರೇ ಏನು ಎಂಬ ವಿಚಾರಕ್ಕೆ ಬಂದರೇ, ಅಶ್ಲೀಲ ವಿಡಿಯೋ ಹಾಗೂ ಲೈಂಗಿಕತೆಯಲ್ಲಿ ತೊಡಗಿದ್ದ ಸನ್ನಿವೇಶಗಳನ್ನು ಲೈವ್ ಮಾಡಿ ಪ್ರದರ್ಶನ ಮಾಡಲು ಆ್ಯಪ್ ತಯಾರಿಸಲಾಗಿದ್ದು, ಒಂದು ಸಾವಿರ ನೀಡಿ ಅದರಲ್ಲಿ ಮೆಂಬರ್‍ ಶಿಪ್ ಪಡೆಯಬೇಕು. ಬಳಿಕ ಆ ಆ್ಯಪ್ ನಲ್ಲಿ ಲೈವ್ ಆಗಿ ವಿಡಿಯೋಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಈ ಕುರಿತು ಖಚಿತ ಮಾಹಿತಿ ಪಡೆದ ಮುಂಬೈ ಪೊಲೀಸರು ಕಾರ್ಯಚರಣೆ ನಡೆಸಿ ಅಂಧೇರಿಯ ವಸತಿ ಸಮುಚ್ಚಯದ ಮನೆಯೊಂದರಲ್ಲಿ ಈ ಅಕ್ರಮ ಚಟುವಟಿಕೆ ನಡೆಯುತ್ತಿರುವ ವ್ಯಕ್ತಿಗಳನ್ನು ಬಂಧನ ಮಾಡಿದ್ದಾರೆ ಎಂದು ತಿಳಿದುಬಂದಿದೆ.