ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ನಟಿಸುವ ಅವಕಾಶ ಗಿಟ್ಟಿಸಿಕೊಂಡ ಮೃಣಾಲ್ ಠಾಕೂರ್, ಕ್ರೇಜಿ ರೂಮರ್ ವೈರಲ್……!

ಭಾರತ ಸಿನಿರಂಗದ ಸ್ಟಾರ್‍ ನಟರಲ್ಲಿ ಮೆಗಾಸ್ಟಾರ್‍ ಚಿರಂಜೀವಿಯವರು ಸಹ ಒಬ್ಬರಾಗಿದ್ದಾರೆ. ವಯಸ್ಸಾದರೂ ಸಹ ಯಂಗ್ ನಟರಿಗಿಂತಲೂ ಕಡಿಮೆಯಿಲ್ಲ ಎಂಬಂತೆ ಸಿನೆಮಾಗಳಲ್ಲಿ ನಟಿಸುತ್ತಾ ಸಾಗುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಮೆಗಾಸ್ಟಾರ್‍ ಚಿರಂಜೀವಿಯವರು ಭೋಳಾಶಂಕರ್‍ ಎಂಬ ಸಿನೆಮಾದ…

ಭಾರತ ಸಿನಿರಂಗದ ಸ್ಟಾರ್‍ ನಟರಲ್ಲಿ ಮೆಗಾಸ್ಟಾರ್‍ ಚಿರಂಜೀವಿಯವರು ಸಹ ಒಬ್ಬರಾಗಿದ್ದಾರೆ. ವಯಸ್ಸಾದರೂ ಸಹ ಯಂಗ್ ನಟರಿಗಿಂತಲೂ ಕಡಿಮೆಯಿಲ್ಲ ಎಂಬಂತೆ ಸಿನೆಮಾಗಳಲ್ಲಿ ನಟಿಸುತ್ತಾ ಸಾಗುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಮೆಗಾಸ್ಟಾರ್‍ ಚಿರಂಜೀವಿಯವರು ಭೋಳಾಶಂಕರ್‍ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದು, ಇದೀಗ ಅವರ ಮುಂದಿನ ಸಿನೆಮಾ Mega157 ಘೋಷಣೆಯಾಗಿದೆ. ಇದೀಗ ಈ ಸಿನೆಮಾದಲ್ಲಿ ಸೀತಾರಾಮಂ ಬ್ಯೂಟಿ ಮೃಣಾಲ್ ಠಾಕೂರ್‍ ಚಿರು ಜೊತೆಗೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆಂಬ ಕ್ರೇಜಿ ರೂಮರ್‍ ವೈರಲ್ ಆಗುತ್ತಿದೆ.

ಸಿನಿರಂಗದಲ್ಲಿ ರೂಮರ್‍ ಗಳು ಸರ್ವೆ ಸಾಮಾನ್ಯ. ಕ್ರೇಜಿ ಕಾಂಬಿನೇಷನ್ ಗಳ ಬಗ್ಗೆ ರೂಮರ್‍ ಗಳು ಕೇಳಿಬರುತ್ತಲೇ ಇರುತ್ತದೆ. ಅಂತಹ ರೂಮರ್‍ ಒಂದು ಇದೀಗ ಸೋಷಿಯಲ್ ಮಿಡಿಯಾ ಹಾಗೂ ಟಾಲಿವುಡ್ ಅಂಗಳದಲ್ಲಿ ವೈರಲ್ ಆಗುತ್ತಿದೆ. ಮೆಗಾಸ್ಟಾರ್‍ ಚಿರಂಜೀವಿಯವರ Mega157ಸಿನೆಮಾದಲ್ಲಿ ನಾಯಕಿಯಾಗಿ ಸೀತಾರಾಮಂ ಬ್ಯೂಟಿ ಮೃಣಾಲ್ ಠಾಕೂರ್‍ ಜೋಡಿಯಾಗಲಿದ್ದಾರಂತೆ. ಮೆಗಾಸ್ಟಾರ್‍ ಚಿರಂಜೀವಿಯವರ ಜೊತೆಗೆ ಮರಾಠಿ ಬ್ಯೂಟಿ ಮೃಣಾಲ್ ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗುತ್ತಿದೆ. ಸೀತಾರಾಮಂ ಸಿನೆಮಾದ ಮೂಲಕ ಕ್ರೇಜ್ ಪಡೆದುಕೊಂಡ ಮೃಣಾಲ್ ಠಾಕೂರ್‍ ಇದೀಗ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಇದೀಗ ಸ್ಟಾರ್‍ ನಟ ಚಿರಂಜೀವಿಯವರ ಸಿನೆಮಾದಲ್ಲೂ ಸಹ ನಟಿಸಲಿದ್ದಾಳೆ ಎಂದು ಹೇಳಲಾಗುತ್ತಿದೆ.

ಇನ್ನೂ ಮೃಣಾಲ್ ಠಾಕೂರ್‍ ಗೆ ಸೀತಾರಾಮಂ ಸಿನೆಮಾದ ಬಳಿಕ ಬ್ಯಾಕ್ ಟು ಬ್ಯಾಕ್ ಆಫರ್‍ ಗಳು ಬರುತ್ತಿವೆ. ಆದರೆ ಆಕೆ ಎಲ್ಲಾ ಆಫರ್‍ ಗಳನ್ನು ಒಪ್ಪುತ್ತಿಲ್ಲ ಒಳ್ಳೆಯ ಪ್ರಾಜೆಕ್ಟ್ ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಆಕೆ ನ್ಯಾಚುರಲ್ ಸ್ಟಾರ್‍ ನಾನಿ ಜೊತೆಗೆ ಹಾಯ್ ನಾನ್ನ ಹಾಗೂ ವಿಜಯ್ ದೇವರಕೊಂಡ ಜೊತೆಗೆ VD13 ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ಮೆಗಾಸ್ಟಾರ್‍ ಚಿರಂಜೀವಿಯವರ ಸಿನೆಮಾದಲ್ಲೂ ಸಹ ನಟಿಸಲಿದ್ದಾರೆ ಎಂಬ ಸುದ್ದಿ ಸಹ ಕೇಳಿಬರುತ್ತಿದೆ. ವರ್ಷದ ಆರಂಭದಲ್ಲಿ ಮೆಗಾಸ್ಟಾರ್‍ ಚಿರಂಜೀವಿ ವಾಲ್ತೇರು ವೀರಯ್ಯ ಸಿನೆಮಾದ ಮೂಲಕ ಒ‌ಳ್ಳೆಯ ಸಕ್ಸಸ್ ಕಂಡುಕೊಂಡರು. ಬಳಿಕ ಭೋಳಾಶಂಕರ್‍ ಸಿನೆಮಾ ಕೆಲವು ದಿನಗಳ ಹಿಂದೆಯಷ್ಟೆ ರಿಲೀಸ್ ಆಗಿತ್ತು. ಆದರೆ ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಇದೀಗ ಸಾಲಿಡ್ ಹಿಟ್ ಗಾಗಿ ಕಾಯುತ್ತಿರುವ ಮೆಗಾಸ್ಟಾರ್‍ Mega157ಸಿನೆಮಾ ಸಹ ಘೋಷಣೆಯಾಗಿದೆ.

ಇದೀಗ ಬಿಂಬಿಸಾರ ಸಿನೆಮಾದ ಮೂಲಕ ಫೇಂ ನಿರ್ದೇಶಕ ವಶಿಷ್ಟ ಜೊತೆಗೆ ಮೆಗಾಸ್ಟಾರ್‍ ಚಿರಂಜೀವಿ ಸಿನೆಮಾ ಘೋಷಣೆಯಾಗಿದೆ. ಈ ಸಿನೆಮಾಗಾಗಿ ಮೃಣಾಲ್ ಠಾಕೂರ್‍ ರವರನ್ನು ಸಂಪರ್ಕ ಮಾಡಿದ್ದು, ಆಕೆ ಸಹ ಪಾಸಿಟೀವ್ ಆಗಿ ರಿಯಾಕ್ಟ್ ಆಗಿದ್ದಾರಂತೆ. ಈ ಬಗ್ಗೆ ಅಧಿಕೃತ ಘೋಷಣೆಯಷ್ಟೆ ಮಾಡಬೇಕಿದೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಮೇಗಾಸ್ಟಾರ್‍ Mega156 ಸಿನೆಮಾವನ್ನು ಮೆಗಾಸ್ಟಾರ್‍ ಪುತ್ರಿ ಸುಸ್ಮಿತಾ ಕೊಣಿದೆಲಾ ನಿರ್ಮಾಣ ಮಾಡುತ್ತಾರೆ ಎನ್ನಲಾಗಿದೆ.