ಅಕ್ಕಿನೇನಿ ನಾಗಾರ್ಜುನ್ ಜೊತೆಗೆ ಮಿಸ್ ಇಂಡಿಯಾ ರೊಮ್ಯಾನ್ಸ್, ಸೀನಿಯರ್ ನಟನೊಂದಿಗೆ ಯಂಗ್ ಬ್ಯೂಟಿ?

Follow Us :

ತೆಲುಗು ಸಿನಿರಂಗದ ಸ್ಟಾರ್‍ ನಟ ಅಕ್ಕಿನೇನಿ ನಾಗಾರ್ಜುನ್ ಟಾಲಿವುಡ್ ನಲ್ಲಿ ಗ್ರೀಕುವೀರ, ಮನ್ಮಥ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ವಯಸ್ಸಾದರೂ ಸಹ ಅನೇಕ ಸೂಪರ್‍ ಡೂಪರ್‍ ಹಿಟ್ ಸಿನೆಮಾಗಳಲ್ಲಿ ನಟಿಸಿದ್ದಾರೆ. ಇಂದಿಗೂ ಸಹ ನಾಗಾರ್ಜುನ್ ಸಿನೆಮಾಗಳು ಎಂದರೇ ರೊಮ್ಯಾನ್ಸ್ ಪಕ್ಕಾ ಇರುತ್ತದೆ ಎಂದು ಹೇಳಲಾಗುತ್ತಿದೆ. ನಾಗಾರ್ಜುನ್ ರವರಿಗೆ ಸದ್ಯ 60 ವಯಸ್ಸಾದರೂ ಸಹ ಆತ ಮಾತ್ರ ಇನ್ನೂ ಯಂಗ್ ನಟನಂತೆ ಕಾಣಿಸಿಕೊಳ್ಳುತ್ತಾರೆ. ಆದರೆ ಇತ್ತೀಚಿಗೆ ನಾಗಾರ್ಜುನ್ ರವರ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಸೋತಿವೆ.

ನಟ ನಾಗಾರ್ಜುನ್ ಎಲ್ಲಾ ವಿಧವಾದ ಸಿನೆಮಾಗಳನ್ನು ಮಾಡುತ್ತಾ ಸಕ್ಸಸ್ ಪುಲ್ ಕೆರಿಯರ್‍ ಸಾಗಿಸಿ ಸ್ಟಾರ್‍ ಡಮ್ ಗಿಟ್ಟಿಸಿಕೊಂಡಿದ್ದಾರೆ. ಅಕ್ಕಿನೇನಿ ಕುಟುಂಬದಲ್ಲಿ ನಾಗಾರ್ಜುನ್ ತುಂಬಾನೇ ಕ್ರೇಜ್ ಪಡೆದುಕೊಂಡಿದ್ದಾರೆ ಎಂದರೇ ತಪ್ಪಾಗಲಾರದು. ಆದರೆ ಇತ್ತಿಚಿಗೆ ನಾಗಾರ್ಜುನ್ ಹೆಚ್ಚಾಗಿ ಆಕ್ಷನ್ ಸಿನೆಮಾಗಳಲ್ಲೇ ನಟಿಸುತ್ತಿದ್ದಾರೆ. ಈ ಹಾದಿಯಲ್ಲೇ ಕಳೆದ ವರ್ಷ ಘೋಸ್ಟ್ ಎಂಬ ಆಕ್ಷನ್ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾ ಅಷ್ಟೊಂದು ಸಕ್ಸಸ್ ಕಾಣಲಿಲ್ಲ ಎನ್ನಲಾಗಿದೆ. ಈ ಕಾರಣದಿಂದ ಈ ಬಾರಿ ಒಳ್ಳೆಯ ಸಕ್ಸಸ್ ಪುಲ್ ಸಿನೆಮಾ ಮಾಡಬೇಕೆಂಬ ಉದ್ದೇಶದಿಂದ ರೈಟರ್‍ ಪ್ರಸನ್ನ ಕುಮಾರ್‍ ಸಾರಥ್ಯದಲ್ಲಿ ಹಳೇಯ ಕಾಲದ ಸೆಟಪ್ ನಲ್ಲಿ ಸಿನೆಮಾ ಒಂದನ್ನು ಮಾಡಲಿದ್ದಾರೆ. ಈ ಸಿನೆಮಾ ಪಕ್ಕಾ ಕಮರ್ಷಿಯಲ್ ಆಗಲಿದೆ ಎಂದೂ ಸಹ ಹೇಳಲಾಗುತ್ತಿದೆ.

ಇನ್ನೂ ಈ ಸಿನೆಮಾದಲ್ಲಿ ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡ ಹೈದರಾಬಾದ್ ಮೂಲದ ಮಾನಸ ವಾರಣಾಸಿ ಈ ಸಿನೆಮಾದಲ್ಲಿ ನಾಗಾರ್ಜುನ್ ಜೊತೆಗೆ ನಟಿಸಲಿದ್ದಾರಂತೆ. ಈಗಾಗಲೇ ಈ ಸಿನೆಮಾಗಾಗಿ ಇಬ್ಬರೂ ಪೊಟೋಶೂಟ್ಸ್ ಸಹ ನಡೆದಿದೆಯಂತೆ. ಇನ್ನೂ ಈಗಾಗಲೇ ಮಾನಸ ವಾರಣಾಸಿ ಒಳ್ಳೆಯ ಬ್ರೇಕ್ ನೀಡುವ ಪಾತ್ರದಲ್ಲಿ ನಟಿಸಬೇಕೆಂದು ಎದುರು ನೋಡುತ್ತಿದ್ದರು. ಈ ಹಾದಿಯಲ್ಲೇ ಆಕೆ ನಾಗಾರ್ಜುನ್ ರವರ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೂ ನಾಗಾರ್ಜುನ್ ಜೊತೆಗೆ ನಟಿಸಲು ಮಾನಸ ವಾರಣಾಸಿ ತುಂಬಾನೆ ಉತ್ಸುಕರಾಗಿದ್ದಾರಂತೆ. ಇದೀಗ 60 ವರ್ಷದ ಹಿರಿಯ ನಟ ನಾಗಾರ್ಜುನ್ ಜೊತೆಗೆ ಮಾನಸ ವಾರಣಾಸಿ ನಟಿಸುತ್ತಿರುವುದು ಸಿನೆಮಾದ ಮೇಲಿನ ಹೈಪ್ ಮತಷ್ಟು ಕ್ರಿಯೇಟ್ ಮಾಡಿದೆ ಎನ್ನಲಾಗುತ್ತಿದೆ.

ಇನ್ನೂ ನಾಗಾರ್ಜುನ್ ಜೊತೆಗೆ ಯಂಗ್ ನಟಿ ರಕುಲ್ ಪ್ರೀತ್ ಸಿಂಗ್ ಮನ್ಮಥುಡು-2 ಸಿನೆಮಾದಲ್ಲಿ ನಟಿಸಿದ್ದರು. ಇದೀಗ ನಾಗಾರ್ಜುನ್ ಜತೆಗೆ ಮತ್ತೊರ್ವ ಯಂಗ್ ಬ್ಯೂಟಿ ಮಾನಸ ವಾರಣಾಸಿ ನಟಿಸುತ್ತಿರುವುದು ಕುತೂಹಲ ಮೂಡಿಸಿದ್ದು ಈ ಸಿನೆಮಾ ಯಾವ ಮಟ್ಟದಲ್ಲಿ ಕ್ರೇಜ್ ಪಡೆದುಕೊಳ್ಳಲಿದೆ  ಎಂಬುದನ್ನು ಕಾದು ನೋಡಬೇಕಿದೆ.