ಸಂಪ್ರದಾಯಬದ್ದವಾಗಿ ಕಾಣಿಸಿಕೊಳ್ಳುತ್ತಿದ್ದ ಸಂಯುಕ್ತ ಮಿನನ್ ಬೋಲ್ಡ್ ವಿಡಿಯೋ ವೈರಲ್…!

Follow Us :

ಮಲಯಾಳಂ ಸಿನೆಮಾಗಳ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸಂಯುಕ್ತಾ ಇದೀಗ ಸೌತ್ ನ ಬಹುಬೇಡಿಕೆ ನಟಿಯಾಗಿದ್ದಾರೆ. ತೆಲುಗಿನಲ್ಲಿ ಈಕೆ ಪವನ್ ಕಲ್ಯಾಣ್ ಅಭಿನಯದ ಭಿಮ್ಲಾ ನಾಯಕ್ ಸಿನೆಮಾದಲ್ಲಿ ನಟಿಸುವ ಮೂಲಕ ತೆಲುಗು ರಂಗಕ್ಕೆ ಎಂಟ್ರಿ ಕೊಟ್ಟರು. ಹಂತ ಹಂತವಾಗಿ ತೆಲುಗಿನಲ್ಲಿ ಬೇರೂರಲು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇತ್ತಿಚಿಗಷ್ಟೆ ಆಕೆ ಕಾಲಿವುಡ್ ಸ್ಟಾರ್‍ ನಟ ಧನುಷ್ ಅಭಿನಯದ ಸಾರ್‍ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಒಳ್ಳೆಯ ಕಲೆಕ್ಷನ್ ಮಾಡುವುದರ ಜೊತೆಗೆ ಸೂಪರ್‍ ಹಿಟ್ ಸಹ ಆಗಿದೆ. ಇದೀಗ ಸಂಯುಕ್ತ ಮೆನನ್ ರವರ ಬೋಲ್ಡ್ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ನಟಿ ಸಂಯುಕ್ತ ಮಿನನ್ ಭೀಮ್ಲಾ ನಾಯಕ್ ಸಿನೆಮಾದ ಮೂಲಕ ಒಳ್ಳೆಯ ಕ್ರೇಜ್ ಪಡೆದುಕೊಂಡರು. ಬಳಿಕ ಬಿಂಬಿಸಾರ ಸಿನೆಮಾದಲ್ಲೂ ಸಹ ನಟಿಸಿ ಸಕ್ಸಸ್ ಪುಲ್ ಸಿನೆಮಾಗಳನ್ನು ತಮ್ಮ ಖಾತೆಯಲ್ಲಿ ಹಾಕಿಕೊಂಡರು. ಈ ಸಿನೆಮಾಗಳಲ್ಲಿ ನಟಿ ಸಂಯುಕ್ತಾ ಸಂಪ್ರದಾಯಬದ್ದವಾಗಿಯೇ ಕಾಣಿಸಿಕೊಂಡಿದ್ದಾರೆ. ಅನೇಕ ಫ್ಯಾಮಿಲಿ ಆಡಿಯೆನ್ಸ್ ಗೂ ಸಹ ಹತ್ತಿರವಾಗಿದ್ದಾರೆ. ಸದ್ಯ ಸಂಯುಕ್ತ ಸಾಯಿ ಧರಮ್ ತೇಜ್ ಅಭಿನಯದ ವಿರೂಪಾಕ್ಷ ಎಂಬ ಸಿನೆಮಾದಲ್ಲಿ ಹಿರೋಯಿನ್ ಆಗಿ ಸಾಯಿ ಧರಮ್ ತೇಜ್ ಜೊತೆ ನಟಿಸಲಿದ್ದಾರೆ. ಈ ಸಿನೆಮಾದಲ್ಲೂ ಸಹ ಸಂಯುಕ್ತರವರದ್ದು ಒಳ್ಳೆಯ ಪಾತ್ರವಂತೆ. ಇನ್ನೂ ಸಾರ್‍ ಸಿನೆಮಾದಲ್ಲಿ ಸೀರೆಯಲ್ಲಿ ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡ ಸಂಯುಕ್ತ ಇದೀಗ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗುತ್ತಿದೆ.

ಇನ್ನೂ ಸಂಯುಕ್ತಾ ಮಿನನ್ ಭೀಮ್ಲಾ ನಾಯಕ್ ಸಿನೆಮಾಗಿಂತಲೂ ಮುಂಚೆ ತಮಿಳಿನ ಎರಿಡಾ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಕ್ರೈಮ್ ಆಧಾರಿತ ಸಿನೆಮಾ ಇದಾಗಿದ್ದು, ಈ ಸಿನೆಮಾದಲ್ಲಿ ಸಂಯುಕ್ತ ಮೆನನ್ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಅನೇಕ ಬೋಲ್ಡ್ ದೃಶ್ಯಗಳಲ್ಲಿ ನಟಿಸಿದ್ದಾರಂತೆ. ಅದರಲ್ಲೂ ಸೀನಿಯರ್‍ ನಟ ನಾಜರ್‍ ಜೊತೆಗೆ ರೊಮ್ಯಾನ್ಸ್ ಮಾಡಿದ್ದಾರಂತೆ. ಸದ್ಯ ಎರಿಡಾ ಸಿನೆಮಾಗೆ ಸಂಬಂಧಿಸಿದ ವಿಡಿಯೋಗಳು, ಪೊಟೋಗಳು ಇದೀಗ ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅಷ್ಟೇಅಲ್ಲದೇ ಸಂಯುಕ್ತ ಮಿನನ್ ಈ ಸಿನೆಮಾದಲ್ಲಿ ಮಾಡಿದ ಇಂಟಿಮೇಟ್ ಸೀನ್ ಸಹ ವೈರಲ್ ಆಗುತ್ತಿದೆ. ಇನ್ನೂ ಸಂಪ್ರದಾಯಬದ್ದವಾಗಿ ಕಾಣಿಸಿಕೊಳ್ಳುತ್ತಿದ್ದ ಸಂಯುಕ್ತ ರನ್ನು ಈ ಮಾದರಿಯಲ್ಲಿ ಕಂಡು ಆಕೆಯ ಅಭಿಮಾನಿಗಳು ಶಾಕ್ ಆಗಿದ್ದಾರೆ.