ಮಿಂಚಿನಂತೆ ಹೊಳೆಯುತ್ತಿರುವ ಮಿಲ್ಕಿ ಬ್ಯೂಟಿ ತಮನ್ನಾ, ಸಿಂಗಪೂರ್ ನಲ್ಲಿ ತಮನ್ನಾ ಗ್ಲಾಮರ್ ಶೋ…!

ಕೆಲವು ದಿನಗಳಿಂದ ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುವ ಮಿಲ್ಕಿ ಬ್ಯೂಟಿ ತಮನ್ನಾ ಸದ್ಯ ಸಿಂಗಪೂರ್‍ ಟ್ರಿಪ್ ನಲ್ಲಿದ್ದಾರೆ. ಗ್ಲಾಮರಸ್ ಡ್ಯಾನ್ಸ್ ಮೂಲಕ ಟಾಲಿವುಡ್ ಸಿನಿರಂಗವನ್ನು ಆಳಿದಂತಹ ನಟಿ ತಮನ್ನಾ ಸಾಲು ಸಾಲು ಸಿನೆಮಾಗಳ ಮೂಲಕ ರಂಜಿಸುತ್ತಿದ್ದಾರೆ. ಸೀನಿಯರ್‍ ನಟಿಯಾಗಿ ಅನೇಕ ಸಿನೆಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಸೌತ್ ಅಂಡ್ ನಾರ್ತ್‌‌ನಲ್ಲೂ ಬಂದಂತಹ ಅವಕಾಶಗಳನ್ನು ಪಡೆದುಕೊಂಡು ಸ್ಟಾರ್‍ ಸಿನೆಮಾಗಳ ಜೊತೆಗೆ ಹಾಗೂ ಲೇಡಿ ಓರಿಯೆಂಟೆಡ್ ಸಿನೆಮಾಗಳಲ್ಲೂ ಸಹ ನಟಿಸುತ್ತಿದ್ದಾರೆ.

ಸದ್ಯ ನಟಿ ತಮನ್ನಾ ಸಿನೆಮಾಗಳಿಂದ ರಿಲ್ಯಾಕ್ಸ್ ಆಗಲು ವೆಕೇಷನ್ ಗಾಗಿ ಸಿಂಗಪೂರ್‍ ಗೆ ಹಾರಿದ್ದಾರೆ. ಸಿಂಗಪೂರ್‍ ನ ಸುಂದರವಾದ ತಾಣಗಳಲ್ಲಿ ತಮನ್ನಾ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿನ ಬ್ಯೂಟಿಪುಲ್ ಲೊಕೇಷನ್ ಗಳಲ್ಲಿ ಎಂಜಾಯ್ ಮಾಡುತ್ತಾ ಸ್ಟನ್ನಿಂಗ್ ಪೋಸ್ ಗಳ ಮೂಲಕ ಎಲ್ಲರನ್ನೂ ಆಕರ್ಷಣೆ ಮಾಡುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಆಕೆ ಹಂಚಿಕೊಂಡ ಪೊಟೋಗಳಲ್ಲಿ  ಸೇಮ್ ಅಮೃತ ಶಿಲೆಯಂತೆ ಕಾಣಿಸಿಕೊಂಡಿದ್ದಾರೆ. ಮುಟ್ಟಿದರೇ ಕೊಳೆಯಾಗುವಂತ ಸೌಂದರ್ಯದ ಮೂಲಕ ನೆಟ್ಟಿಗರ ಹೃದಯ ಗಾಯಗೊಳಿಸಿದ್ದಾರೆ. ಸ್ಲೀವ್ ಲೆಸ್ ಟಾಪ್ ನಲ್ಲಿ ಮಾದಕ ನೋಟ ಬೀರಿದ್ದಾರೆ. ಸೂರ್ಯನ ಕಿರಣಗಳಿಗೆ ಪೈಪೋಟಿ ನೀಡುವಂತೆ ಆಕೆ ಸ್ಕಿನ್ ಗ್ಲೋ ಆಗುತ್ತಿದೆ.

ಸದ್ಯ ತಮನ್ನಾ ಸಿಂಗಪೂರ್‍ ವೆಕೇಷನ್ ಎಂಜಾಯ್ ಮಾಡುತ್ತಿದ್ದು, ಅಲ್ಲಿನ ಹೋಟೆಲ್ ನಲ್ಲಿ ಸ್ಟೇ ಆಗಿದ್ದಾರೆ. ಬೆಳಿಗ್ಗೆ ಬ್ರೇಕ್ ಫಾಸ್ಟ್ ಮಾಡುತ್ತಾ, ಆರೋಗ್ಯಕರವಾದ ಹಾಗೂ ತನಗಿಷ್ಟವಾದ ಫೈನಾಪಿಲ್ ತಿನ್ನುತ್ತಾ ಕೆಲವೊಂದು ಪೊಟೋಗಳನ್ನು ಶೇರ್‍ ಮಾಡಿದ್ದಾರೆ. ಜೊತೆಗೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಸ್ವಿಮ್ ಮಾಡುತ್ತಾ ಯುವಕರ ಹೃದಯ ಕದಿಯುತ್ತಿದ್ದಾಳೆ. ಇನ್ನೂ ಆಕೆ ಹಂಚಿಕೊಂಡ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಆಕೆಯ ಅಭಿಮಾನಿಗಳು ಸೇರಿದಂತೆ ನೆಟ್ಟಿಗರೂ ಸಹ ಹಾಟ್ ಕಾಮೆಂಟ್ ಗಳು, ಲೈಕ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇನ್ನೂ ತಮನ್ನಾ ಬಗ್ಗೆ ಕೆಲವು ದಿನಗಳಿಂದ ಅವರ ವೈಯುಕ್ತಿಕ ಜೀವನದ ಬಗ್ಗೆ ಕೆಲವೊಂದು ಸುದ್ದಿಗಳು ಹರಿದಾಡುತ್ತಿವೆ. ಬಾಲಿವುಡ್ ನಟ ವಿಜಯ್ ವರ್ಮಾ ಜೊತೆಗೆ ಆಕೆ ಡೇಟಿಂಗ್ ನಡೆಸುತ್ತಿದ್ದು ಶೀಘ್ರದಲ್ಲೇ ಮದುವೆ ಸಹ ಆಗಲಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಅವೆಲ್ಲಾ ಕೇವಲ ರೂಮರ್‍ ಎಂದು ತಮನ್ನಾ ಹೇಳಿದರೂ ಸಹ ರೂಮರ್‍ ಗಳು ಮಾತ್ರ ನಿಂತಿಲ್ಲ. ಇನ್ನೂ ತಮನ್ನಾ ಭೋಳಾಶಂಕರ್‍, ಜೈಲರ್‍ ಸೇರಿದಂತೆ ಮತಷ್ಟು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ.