Film News

ಬೇಬಿ ಬಂಪ್ ಪೊಟೋಸ್ ಹಂಚಿಕೊಂಡ ಮಂಚು ಮನೋಜ್ ಪತ್ನಿ ಮೋನಿಕಾ, ಪ್ರೀತಿಯಿಂದ ಕಾಮೆಂಟ್ ಮಾಡಿದ ಮನೋಜ್……!

ಟಾಲಿವುಡ್ ನಟ ಮಂಚು ಮನೋಜ್ ಹಾಗೂ ಭೂಮಾ ಮೋನಿಕಾರೆಡ್ಡಿ ಮದುವೆ ಕೆಲವು ತಿಂಗಳ ಹಿಂದೆಯಷ್ಟೆ ನಡೆಯಿತು. ಸುಮಾರು ದಿನಗಳ ಕಾಲ ಈ ಮದುವೆಯ ಸುದ್ದಿ ಜೋರಾಗಿಯೇ ಹರಿದಾಡಿತ್ತು. ಸದ್ಯ ಮನೋಜ್ ಟಿವಿ ರಂಗಕ್ಕೂ ಎಂಟ್ರಿ ಕೊಟ್ಟರು. ಉಸ್ತಾದ್ ಎಂಬ ಟಾಕ್ ಶೋ ಹೋಸ್ಟ್ ಮಾಡುತ್ತಿದ್ದಾರೆ. ಇದೀಗ ಮನೋಜ್ ಪತ್ನಿ ಮೋನಿಕಾ ಗರ್ಭಿಣಿಯಾಗಿದ್ದು, ಬೇಬಿ ಬಂಪ್ ಪೊಟೋಶೂಟ್ಸ್ ಮಾಡಿಸಿದ್ದಾರೆ. ಈ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ಪೊಟೋಗಳಿಗೆ ಪ್ರೀತಿಯಿಂದ ಮನೋಜ್ ಕಾಮೆಂಟ್ ಮಾಡಿದ್ದಾರೆ.

ಟಾಲಿವುಡ್ ನಟ ಮಂಚು ಮನೋಜ್ ಕಳೆದ ವರ್ಷ ಭೂಮಾ ಮೋನಿಕಾ ರೆಡ್ಡಿ ಎಂಬಾಕೆಯನ್ನು ಮದುವೆಯಾದರು. ಸದ್ಯ ಈ ಜೋಡಿ ಸಂತೋಷದಿಂದ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಅನ್ಯೋನ್ಯವಾಗಿ ಹೊಸ ಜೀವನ ಆರಂಭಿಸಿದ್ದಾರೆ. ಈ ಜೋಡಿಯ ಮದುವೆ ನಡೆದಾಗ ಅನೇಕ ರೂಮರ್‍ ಗಳೂ ಸಹ ಕೇಳಿಬಂದವು. ಕುಟುಂಬಸ್ಥರಿಗೆ ಈ ಮದುವೆ ಇಷ್ಟವಿಲ್ಲವಾದರೂ ಮನೋಜ್ ಮೋನಿಕಾರನ್ನು ಮದುವೆಯಾದರು ಎಂಬ ಕಾಮೆಂಟ್ ಕೇಳಿಬಂದಿತ್ತು. ಮಂಚು ಲಕ್ಷ್ಮೀ ಹತ್ತಿರವಿದ್ದು ದೊಡ್ಡಸ್ಥಿಕೆ ವಹಿಸಿ ಮನೋಜ್ ಮದುವೆ ಮಾಡಿದರು. ಸದ್ಯ ಮೋನಿಕಾ ಗರ್ಭಿಣಿಯಾಗಿದ್ದು, ಈ ಸುದ್ದಿಯನ್ನು ಕೆಲವು ದಿನಗಳ ಹಿಂದೆಯಷ್ಟೆ ಅವರು ಘೋಷಣೆ ಮಾಡಿದ್ದರು. ಶೀಘ್ರದಲ್ಲೇ ಮನೋಜ್ ಹಾಗೂ ಮೋನಿಕಾ ತಂದೆ ತಾಯಿ ಆಗಲಿದ್ದಾರೆ.

ಇದೀಗ ಭೂಮಾ ಮೋನಿಕಾ ಬೇಬಿ ಬಂಪ್ ಪೊಟೋಶೂಟ್ಸ್ ಮಾಡಿಸಿದ್ದಾರೆ. ಬ್ಲಾಕ್ ಕಲರ್‍ ಡ್ರೆಸ್ ನಲ್ಲಿ ಆಕೆ ಪೊಟೋಶೂಟ್ಸ್ ಮಾಡಿಸಿದ್ದು ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಪೊಟೋಗಳಿಗೆ ಮೋನಿಕಾ ಎಮೋಷನಲ್ ಕಾಮೆಂಟ್ಸ್ ಸಹ ಮಾಡಿದ್ದಾರೆ. ನನ್ನ ಒಳಗೆ ಮತ್ತೊಂದು ಜೀವನ ವಿದೆ. ನನ್ನ ಬಳಿಕ ಮುಂದುವರೆಯುವ ಜೀವನ ಅದು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಮನೋಜ್ ಸಹ ಪ್ರೀತಿಯಿಂದ ಕ್ಯೂಟ್ ಕಾಮೆಂಟ್ ಮಾಡಿದ್ದಾರೆ. ಪಿಲ್ಲಾ  ಓ ಪಿಲ್ಲಾ ನುವ್ವಂಟೆ ನಾಕು ಪ್ರಾಣಂ ಎಂದು ತೆಲುಗಿನಲ್ಲಿ ಕಾಮೆಂಟ್ ಮಾಡಿದ್ದಾರೆ. ಅದರ ಅರ್ಥ ಹುಡುಗಿ ಓ ಹುಡುಗಿ ನೀನು ಅಂದರೇ ನನಗೆ ಪ್ರಾಣ ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಅವರ ಅಭಿಮಾನಿಗಳೂ ಸಹ ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

Most Popular

To Top