Film News

ಮಂಚು ಮನೋಜ್ ಎರಡನೇ ಮದುವೆ ಬಗ್ಗೆ ಮಂಚು ಲಕ್ಷ್ಮಿ ಷಾಕಿಂಗ್ ಕಾಮೆಂಟ್ಸ್, ವೈರಲ್ ಆದ ಹೇಳಿಕೆ…!

ಟಾಲಿವುಡ್ ನಲ್ಲಿ ಮಂಚು ಕುಟುಂಬದ ಖ್ಯಾತ ನಟ ಮಂಚು ಮನೋಜ್ ಕಳೆದೆರಡು ವರ್ಷಗಳ ಹಿಂದೆಯಷ್ಟೆ ಪ್ರಣತಿ ಯೊಂದಿಗೆ ವಿಚ್ಚೇದನ ಪಡೆದುಕೊಂಡರು. ಕೆಲವು ದಿನಗಳಿಂದ ಭೂಮಾ ನಾಗಿರೆಡ್ಡಿ ಎಂಬುವವರ ಎರಡನೇ ಪುತ್ರಿ ಭೂಮಾ ಮೌನಿಕ ರೆಡ್ಡಿ ಯವರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇದೀಗ ಮಂಚು ಮನೋಜ್ ಸಹೋದರಿ ಮಂಚು ಲಕ್ಷ್ಮೀ ಈ ಕುರಿತು ಕೆಲವೊಂದು ಕೆಲವೊಂದು ಶಾಕಿಂಗ್ ಹೇಳಿಕಗಳನ್ನು ನೀಡಿದ್ದಾರೆ.

ಕಳೆದ 2019 ರಲ್ಲಿ ವಿಚ್ಚೇದನ ಪಡೆದುಕೊಂಡ ಮನೋಜ್ ಮೂರು ವರ್ಷಗಳಿಂದ ಸಿಂಗಲ್ ಆಗಿಯೇ ಇದ್ದಾರೆ. ಇದೀಗ ಮೌನಿಕ ರೆಡ್ಡಿಯವರನ್ನು ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡುತ್ತಲೇ ಇದೆ. ಮಂಚು ಮನೋಜ್ ಹೆಂಡತಿಗೆ ವಿಚ್ಚೇದನ ನೀಡಿದ ಬಳಿಕ ಸಿನೆಮಾಗಳಲ್ಲೂ ಸಹ ಕಾಣಿಸಿಕೊಳ್ಳುತ್ತಿಲ್ಲ. ಸುಮಾರು ದಿನಗಳ ಕಾಲ ಆತ ಹೊರಗೆಲ್ಲೂ ಸಹ ಕಾಣಿಸಿಕೊಂಡಿರಲಿಲ್ಲ. ಕಳೆದ ವಿನಾಯಕ ಚವತಿ ದಿನದಂದು ಸ್ನೇಹಿತ ಆಹ್ವಾನದ ಮೇರೆಗೆ ಗಣೇಶನ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮನೋಜ್ ಜೊತೆಗೆ ಮೌನಿಕಾ ರೆಡ್ಡಿ ಸಹ ಬಂದಿದ್ದರು. ಇದಕ್ಕೆ ಸಂಬಂಧಿಸಿದ ಪೊಟೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇನ್ನೂ ಸುಮಾರು ದಿನಗಳಿಂದ ಮನೋಜ್ ಹಾಗೂ ಮೌನಿಕಾ ಇಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಸಹ ಕೇಳಿಬಂದಿತ್ತು.

ಇನ್ನೂ ಈ ರೂಮರ್‍ ಬಗ್ಗೆ ಯಾವುದೇ ಅಧಿಕೃತ ಸಮಾಚಾರ ಸಹ ಇಲ್ಲ. ಅತ್ತ ಮಂಚು ಮನೋಜ್ ಸಹ ಈ ರೂಮರ್‍ ಗಳ ಬಗ್ಗೆ ಯಾವುದೇ ರೀತಿಯಲ್ಲೂ ರಿಯಾಕ್ಟ್ ಆಗಿಲ್ಲ. ಸಮರ್ಥಿಸಲೂ ಇಲ್ಲ, ವಿರೋಧ ಸಹ ವ್ಯಕ್ತಪಡಿಸಿಲ್ಲ. ಈ ಕಾರಣದಿಂದ ಅವರ ರೂಮರ್‍ ಬಗ್ಗೆ ಮತಷ್ಟು ಕುತೂಹಲ ಹೆಚ್ಚಾಗಿದೆ. ಇದೀಗ ಮನೋಜ್ ಸಹೋದರಿ ಮಂಚು ಲಕ್ಷ್ಮೀ ರವರಿಗೆ ಕೆಲವ ಮಿಡಿಯಾದವರು ಈ ಕುರಿತು ಪ್ರಶ್ನೆ ಕೇಳಿದ್ದಾರೆ. ಮಂಚು ಲಕ್ಷ್ಮೀ ಶ್ರೀಕಾಳಹಸ್ತಿ ದೇವಾಲಯಕ್ಕೆ ಹೋಗಿದ್ದರು. ಈ ವೇಳೆ ಕೆಲ ಮಿಡಿಯಾದವರು ಲಕ್ಷ್ಮೀ ರವರಿಗೆ ಮನೋಜ್ ಮದುವೆಯ ಬಗ್ಗೆ ಕೇಳಿದ್ದಾರೆ. ಆದರೆ ಆಕೆ ಕೋಪಗೊಂಡಿದ್ದಾರೆ. ದೇವಾಲಯದಲ್ಲಿ ವೈಯುಕ್ತಿಕ ವಿಚಾರಗಳನ್ನು ಕೇಳುವುದು ಸರಿಯಲ್ಲ. ಇನ್ನೂ ಮನೋಜ್ ಮದುವೆಯ ಬಗ್ಗೆ ನನಗೇನು ತಿಳಿದಿಲ್ಲ. ಅದು ನನ್ನ ಪರದಿಯಲ್ಲಿಲ್ಲ. ನನ್ನ ಪರದಿಯಲ್ಲಿರುವ ವಿಚಾರವನ್ನು ಮಾತ್ರ ನಾನು ಹೇಳಬಲ್ಲೆ ಎಂದು ಹೇಳಿದ್ದಾರೆ.

ಇನ್ನೂ ಮಂಚು ಲಕ್ಷ್ಮೀ ನೀಡಿದ ಹೇಳಿಕೆಗಳ ಕಾರಣದಿಂದ ಮನೋಜ್ ಮೇಲೆ ಆಕೆ ಕೋಪದಲ್ಲಿದ್ದಾರೆ ಎಂಬ ಅನುಮಾನಗಳು ಸಹ ಹುಟ್ಟುತ್ತಿವೆ ಎನ್ನಲಾಗಿದೆ. ಇನ್ನೂ ಮೌನಿಕಾ ರನ್ನು ಮದುವೆಯಾಗುವುದು ಮೋಹನ್ ಬಾಬು ರವರಿಗೂ ಸಹ ಇಷ್ಟವಿಲ್ಲ ಎನ್ನಲಾಗುತ್ತಿದೆ. ಈ ಕಾರಣದಿಂದಲೇ ಮನೋಜ್ ಸಹ ದೂರವಾಗಿದ್ದಾರೆ ಎಂಬ ಕಥನಗಳು ಕೇಳಿಬರುತ್ತಿವೆ.

Most Popular

To Top