ನನಗೆ ಇಷ್ಟವಾಗದೇ ಇದ್ದರೇ ನೇರವಾಗಿಯೇ ಹೇಳುತ್ತೇನೆ ಎಂದ ಮಲ್ಲು ಬ್ಯೂಟಿ ಅನುಪಮ ಪರಮೇಶ್ವರನ್, ವೈರಲ್ ಆದ ಕಾಮೆಂಟ್ಸ್…!

ಸಿನೆಮಾಗಳಲ್ಲಿ ಹೋಮ್ಲಿಯಾಗಿ, ಓವರ್‍ ಗ್ಲಾಮರ್‍ ಶೋ ಮಾಡದೇ ಕ್ರೇಜ್ ಸಂಪಾದಿಸಿಕೊಂಡ ನಟಿ ಅನುಪಮಾ ಪರಮೇಶ್ವರನ್ ಇತ್ತೀಚಿಗೆ ಗ್ಲಾಮರ್‍ ಡೋಸ್ ಏರಿಸುತ್ತಿದ್ದಾರೆ. ದಿನೇ ದಿನೇ ಮತಷ್ಟು ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರೇಮಂ ಎಂಬ ಮಲಯಾಳಂ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಅನುಪಮಾ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಬಹುಬೇಡಿಕೆ ನಟಿಯಾದರು. ಇದೀಗ ಆಕೆ ಸಂದರ್ಶನವೊಂದರಲ್ಲಿ ಕೆಲವೊಂದು ಹೇಳಿಕೆಗಳನ್ನು ನೀಡಿದ್ದು, ಆಕೆಯ ಹೇಳಿಕೆಗಳು ಸಖತ್ ವೈರಲ್ ಆಗುತ್ತಿವೆ.

ಮಲಯಾಳಂ ಮೂಲದ ನಟಿ ಅನುಪಮಾ ಕ್ಯೂಟ್ ನಟಿ ಎಂತಲೇ ಫೇಂ ಸಂಪಾದಿಸಿಕೊಂಡಿದ್ದರು. ಮಲಯಾಳಂ ಮೂಲದ ನಟಿಯಾದರೂ ಸಹ ಅನುಪಮಾ ತೆಲುಗು ಪ್ರೇಕ್ಷರಿಗೆ ತುಂಬಾ ಹತ್ತಿರವಾದರು. ಸೌತ್ ನ ವಿವಿಧ ಭಾಷೆಗಳಲ್ಲಿ ಆಕೆ ವಿವಿಧ ಸಿನೆಮಾಗಳಲ್ಲಿ ನಟಿಸಿದ್ದರು. ಶತಮಾನಂ ಭವತಿ, ಹಲೋ ಗುರು ಪ್ರೇಮ ಕೋಸಮೇ, ಉನ್ನದಿ ಒಕ್ಕಟೆ ಜೀವಿತಂ ಸಿನೆಮಾದಲ್ಲಿ ನಟಿಸಿ ಖ್ಯಾತಿ ಪಡೆದುಕೊಂಡರು. ಇನ್ನೂ ಇತ್ತಿಚಿಗೆ ಆಕೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನೆಮಾಗಳನ್ನು ಮುಡಿಗೇರಿಸಿಕೊಂಡರು. ಕಾರ್ತಿಕೇಯ-2, 18 ಪೇಜಸ್, ಬಟರ್‍ ಪ್ಲೈ ಸಿನೆಮಾದಲ್ಲಿ ನಟಿಸಿದ್ದರು. ಈ ಮೂರು ಸಿನೆಮಾಗಳು ಆಕೆಗೆ ಒಳ್ಳೆಯ ಸಕ್ಸಸ್ ತಂದುಕೊಟ್ಟಿತ್ತು. ಅದರಲ್ಲೂ ಕಾರ್ತಿಕೇಯ-2 ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆಗಿದ್ದು, ಆಕೆ ಈ ಸಿನೆಮಾದ ಮೂಲಕ ತುಂಬಾನೆ ಖ್ಯಾತಿ ಪಡೆದುಕೊಂಡರು.

ಇನ್ನೂ ಅನುಪಮಾ ಪರಮೇಶ್ವರನ್ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಆಕೆ ಕೆಲವೊಂದು ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಎಮೋಷನ್ ವ್ಯಕ್ತಪಡಿಸುವಂತಹ ವಿಚಾರದಲ್ಲಿ ನಾನು ಪ್ರಾಮಾಣಿಕವಾಗಿರುತ್ತೇನೆ. ಯಾವುದೇ ವಿಚಾರವಿರಲಿ ನನಗೆ ಇಷ್ಟವಾಗಿಲ್ಲ ಎಂದರೇ ನೇರವಾಗಿಯೇ ಹೇಳಿಬಿಡುತ್ತೇನೆ. ನಮ್ಮ ಜೀವನ ಅತ್ಯಂತ ಸಣ್ಣದು. ನಮ್ಮ ಸಮಯ ಮುಗಿದ ಕೂಡಲೇ ಇಲ್ಲಿಂದ ನಾವು ಹೊರಡಬೇಕು. ಇರುವಂತಹ ಕಡಿಮೆ ಸಮಯದಲ್ಲಿ ಒತ್ತಡ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ. ಸಿಸಿ ಟಿವಿ ಸ್ಟೋರೆಜ್ ಡಿಲೀಟ್ ಆದಂತೆ ನನ್ನ ಮೆದುಳಿನಲ್ಲಿರುವ ಕೆಟ್ಟದ್ದು ತಾನಾಗಿಯೇ ಡಿಲೀಟ್ ಆಗುತ್ತದೆ ಎಂದು ಅನುಪಮಾ ಹೇಳಿದ್ದಾರೆ.

ಇನ್ನೂ ನಟಿ ಅನುಪಮಾ ಕಾರ್ತಿಕೇಯ-2 ಸಿನೆಮಾದ ಬಳಿಕ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಡೋಸ್ ಏರಿಸಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಸದ್ಯ ಅನುಪಮಾ ಮಲಯಾಳಂ ಹಾಗೂ ತಮಿಳಿನಲ್ಲಿ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಡಿಜೆ ಟಿಲ್ಲು-2 ನಲ್ಲೂ ಅನುಪಮಾ ಬಣ್ಣ ಹಚ್ಚಲಿದ್ದಾರೆ.