ಮೊದಲಿಗೆ ನನ್ನ ತಂದೆ ತಾಯಿಯವರೇ ವಿರೋಧಿಸಿದರು ಎಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ ನಟಿ ಐಶ್ವರ್ಯ ಲಕ್ಷ್ಮೀ…..!

ಸೌತ್ ಸಿನಿರಂಗದ ನಟ ಐಶ್ವರ್ಯ ಲಕ್ಷ್ಮೀ ಬಹುಬೇಡಿಕೆ ನಟಿಯಾಗಿದ್ದು, ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಆಕೆ ಮಟ್ಟಿ ಕುಸ್ತಿ, ಪೊನ್ನಿಯನ್ ಸೆಲ್ವನ್, ಅಮ್ಮು ಸಿನೆಮಾಗಳ ಮೂಲಕ ಸೌತ್ ಪ್ರೇಕ್ಷಕರನ್ನು ರಂಜಿಸಿದ್ದರು. ಈ ಸಿನೆಮಾಗಳು ಆಕೆಗೆ ತುಂಬಾನೆ ಕ್ರೇಜ್ ತಂದುಕೊಟ್ಟಿದ್ದು, ಮತಷ್ಟು ಸಿನೆಮಾಗಳ ಅವಕಾಶಗಳು ಹರಸಿ ಬರುತ್ತಿವೆ. ಇನ್ನೂ ಇತ್ತಿಚಿಗೆ ಆಕೆ ಕೆಲವೊಂದು ವೈಯುಕ್ತಿಕ ವಿಚಾರಗಳ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದು, ಆಕೆಯ ಕಾಮೆಂಟ್ ಗಳು ವೈರಲ್ ಆಗಿದೆ.

ನಟಿ ಐಶ್ವರ್ಯ ಲಕ್ಷ್ಮೀ ಸೌತ್ ಸಿನಿರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಅವಕಾಶಗಳನ್ನು ಪಡೆದುಕೊಂಡು ಸಕ್ಸಸ್ ಪುಲ್ ಆಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಗಾಡ್ಸ್ ಎಂಬ ಸಿನೆಮಾದ ಮೂಲಕ ತೆಲುಗು ಪ್ರೇಕ್ಷಕರಿಗೆ ಹತ್ತಿರವಾದರು. ಇತ್ತಿಚಿಗೆ ಆಕೆ ಅಮ್ಮು ವೆಬ್ ಸಿರೀಸ್, ಪೊನ್ನಿಯನ್ ಸೆಲ್ವನ್, ಮಟ್ಟಿ ಕುಸ್ತಿ ಮೊದಲಾದ ಸಿನೆಮಾಗಳ ಮೂಲಕ ಸಖತ್ ಫೇಂ ಪಡೆದುಕೊಂಡರು. ಇನ್ನೂ ಕೆರಿಯರ್‍ ಆರಂಭದಲ್ಲಿ ನಿರ್ಮಾಪಕಿಯಾಗಿ ಸಹ ಕೆಲವೊಂದು ಸಿನೆಮಾಗಳನ್ನು  ನಿರ್ಮಾಣ ಮಾಡಿದ್ದಾರೆ. ಸೌತ್ ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಐಶ್ವರ್ಯ ಲಕ್ಷ್ಮೀ ಇದೀಗ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ಸಂದರ್ಶನದಲ್ಲಿ ಆಕೆ ಕೆಲವೊಂದು ವೈಯುಕ್ತಿಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಇತ್ತಿಚಿಗೆ ನಡೆದ ಸಂದರ್ಶನವೊಂದರಲ್ಲಿ ನಟಿ ಐಶ್ವರ್ಯ ಲಕ್ಷ್ಮೀ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ತಮ್ಮ ತಂದೆ ತಾಯಿಯ ಬಗ್ಗೆ ನಟಿ ಐಶ್ವರ್ಯ ಕೆಲವೊಂದು ಹೇಳಿಕೆಗಳನ್ನು ಕೊಟ್ಟಿದ್ದಾರೆ. ಮೊದಲಿಗೆ ತಾನು ನಟಿಯಾಗುತ್ತೇನೆ ಎಂದಾಗ ನಮ್ಮ ಪೋಷಕರು ಒಪ್ಪಿಕೊಳ್ಳದೇ ವಿರೋಧ ವ್ಯಕ್ತಪಡಿಸಿದ್ದರು. ನಾನು MBBS ಒದಿದ್ದು, ವೈದ್ಯಳಾಗುತ್ತೇನೆ ಎಂದು ಕೊಂಡಿದ್ದೆ. ಆದರೆ ನಟಿಯಾಗಿದ್ದೇನೆ. ನನ್ನ ತಂದೆ ತಾಯಿಯವರಿಗೆ ಸಿನೆಮಾಗಳ ಬಗ್ಗೆ ನೆಗೆಟೀವ್ ಅಭಿಪ್ರಾಯಗಳಿವೆ. ಹೊರಗೆ ನೋಡುವಂತಹವು, ಕೇಳುವಂತಹವುಗಳ ಮೇಲೆ ಸಿನೆಮಾಗಳ ಮೇಲೆ ಕೆಟ್ಟ ಅಭಿಪ್ರಾಯ ಏರ್ಪಟ್ಟಿದೆ. ಆ ಕಾರಣದಿಂದ ನಟನೆಯನ್ನು ಗೌರವದಿಂದ ಅವರು ಭಾವಿಸುತ್ತಿಲ್ಲ. ಸಿನೆಮಾ ಪರಿಶ್ರಮ ಅಷ್ಟೊಂದು ಸುಲಭವಲ್ಲ. ಪ್ರತಿನಿತ್ಯ ಹೋರಾಟ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.

ಇನ್ನೂ ಲೇಡಿ ಓರಿಯೆಂಟೆಡ್ ಸಿನೆಮಾಗಳ ಬಗ್ಗೆ ಸಹ ಐಶ್ವರ್ಯ ಮಾತನಾಡಿದ್ದಾರೆ. ಮಹಿಳೆಯರು ಮಾತ್ರ ಪ್ರಧಾನ ಪಾತ್ರ ಪೋಷಣೆ ಮಾಡುವಂತಹ ಸಿನೆಮಾಗಳನ್ನು ನಾನು ನಂಬಲ್ಲ. ಜೀವನದಲ್ಲಿ ಸ್ತ್ರೀ ಪುರುಷ ಸಮಾನರು. ಇಬ್ಬರೂ ಪ್ರಮುಖವಾದ ಪಾತ್ರಗಳನ್ನು ಪೋಷಣೆ ಮಾಡುತ್ತಾರೆ. ನನ್ನ ದೃಷ್ಟಿಯಲ್ಲಿ ಸಿನೆಮಾ ಎಂದರೇ ಬ್ಯಾಲೆನ್ಸಿಂಗ್ ಆಗಿ ಇರಬೇಕೆಂದು ಹೇಳಿದ್ದಾರೆ. ಇನ್ನೂ ಆಕೆಯ ಈ ಹೇಳಿಕೆಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಸದ್ಯ ಐಶ್ವರ್ಯ ಮಲಯಾಳಂ ನಲ್ಲಿ ದುಲ್ಕರ್‍ ಸಲ್ಮಾನ್ ಜೊತೆಗೆ ಕಿಂಗ್ ಆಫ್ ಕೋತ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.