ಪ್ರೈವೇಟ್ ಪಾರ್ಟಿಯಲ್ಲಿ ಸಖತ್ ಎಂಜಾಯ್ ಮಾಡಿದ ಲಾವಣ್ಯ ಅಂಡ್ ನಿಹಾರಿಕಾ, ವೈರಲ್ ಆದ ಪೊಟೋಸ್…..!

Follow Us :

ಶೀಘ್ರದಲ್ಲೇ ಮೆಗಾ ಕುಟುಂಬದ ಸೊಸೆಯಾಗಿ ಹೋಗಲಿರುವ ನಟಿ ಲಾವಣ್ಯ ತ್ರಿಪಾಠಿ ಹಾಗೂ ಮೆಗಾ ಹಿರೋ ನಾಗಬಾಬು ರವರ ಪುತ್ರಿ ನಿಹಾರಿಕಾ ಪ್ರೈವೇಟ್ ಪಾರ್ಟಿಯಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಲಾವಣ್ಯ ತ್ರಿಪಾಠಿ ಹಾಗೂ ಮೆಗಾ ಪ್ರಿನ್ಸ್ ವರುಣ್ ತೇಜ್ ಎಂಗೇಜ್ ಮೆಂಟ್ ನಡೆಯಿತು. ಸುಮಾರು ದಿನಗಳ ಪ್ರೀತಿಸುತ್ತಿದ್ದ ಈ ಜೋಡಿ ಶೀಘ್ರದಲ್ಲೇ ಸಪ್ತಪದಿ ತುಳಿಯಲಿದ್ದಾರೆ. ಕೆಲವು ದಿನಗಳಿಂದ ಮೆಗಾ ಕುಟುಂಬದ ಸುದ್ದಿಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಸುಮಾರು ವರ್ಷಗಳ ಕಾಲ ಪ್ರೀತಿಸಿದ ವರುಣ್ ಹಾಗೂ ಲಾವಣ್ಯ ಕೊನೆಗೂ ಹಸೆಮಣೆ ಏರಲಿದ್ದಾರೆ. ಇನ್ನೂ ಲಾವಣ್ಯ ಹಾಗೂ ವರುಣ್ ತೇಜ್ ಪ್ರೇಮಾಯಣ ಶುರುವಾದಾಗಿನಿಂದ ಲಾವಣ್ಯ ಮೆಗಾ ಕುಟುಂಬದ ಜೊತೆಗೆ ಸಲುಗೆಯಿಂದಲೇ ಇದ್ದಾರೆ. ನಿಹಾರಿಕಾ ಮದುವೆಯಲ್ಲೂ ಸಹ ಲಾವಣ್ಯ ಅವರ ಕುಟುಂಬದೊಂದಿಗೆ ಬೆರತಿದ್ದರು. ಲಾವಣ್ಯ ತ್ರಿಪಾಠಿ ನಿಹಾರಿಕಾ ಮದುವೆಯಲ್ಲಿ ಕಾಣಿಸಿಕೊಂಡಾಗಿನಿಂದ ವರುಣ್ ಜೊತೆಗೆ ಪ್ರೀತಿಯಲ್ಲಿದ್ದಾರೆಂಬ ಸುದ್ದಿ ವೈರಲ್ ಆಗಲು ಶುರುವಾಯ್ತು. ಅಂದಿನಿಂದಲೇ ಲಾವಣ್ಯ ಹಾಗೂ ನಿಹಾರಿಕಾ ಇಬ್ಬರೂ ಒಳ್ಳೇಯ ಸ್ನೇಹಿತರಾದರು. ಅನೇಕ ಪಾರ್ಟಿಗಳು, ಕಾರ್ಯಕ್ರಮಗಳಿಗೆ ಜೊತೆಯಾಗಿ ಹೋಗುತ್ತಿದ್ದರು. ಇದೀಗ ಮತ್ತೊಂದು ಪಾರ್ಟಿಯಲ್ಲಿ ಇಬ್ಬರೂ ಸಖತ್ ಎಂಜಾಯ್ ಮಾಡಿದ್ದಾರೆ. ಈ ಸಂಬಂಧ ಪೊಟೋಗಳು ವೈರಲ್ ಆಗಿದೆ.

ಇತ್ತೀಚಿಗೆ ಲಾವಣ್ಯ ಹಾಗೂ ನಿಹಾರಿಕಾ ಪಾರ್ಟಿಯೊಂದರಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. ಇಬ್ಬರೂ ಸ್ಪೇಷಲ್ ಸೆಲ್ಫಿಗಳನ್ನು ಸಹ ತೆಗೆದುಕೊಂಡಿದ್ದಾರೆ. ಇನ್ನೂ ಈ ಪೊಟೋಗಳನ್ನು ಲಾವಣ್ಯ ತ್ರಿಪಾಠಿ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಇಂಟ್ರಸ್ಟಿಂಗ್ ಕ್ಯಾಪ್ಷನ್ ಸಹ ಹಾಕಿದ್ದಾರೆ. ಫೇವರಿಟ್ ಪೀಪಲ್ಸ್ ಜೊತೆಗೆ ಒಳ್ಳೆಯ ಸಂಜೆಯನ್ನು ಎಂಜಾಯ್ ಮಾಡುತ್ತಿದ್ದೇನೆ ಎಂದು ಕ್ಯಾಪ್ಷನ್ ಹಾಕಿದ್ದಾರೆ. ಇನ್ನೂ ನಿಹಾರಿಕಾ ಈ ಪೋಸ್ಟ್ ಮತ್ತೆ ಪೋಸ್ಟ್ ಮಾಡಿ ಲವ್ ಯು ಲವ್ಸ್ ಎಂದು ಪೋಸ್ಟ್ ಮಾಡಿದ್ದಾರೆ. ಇನ್ನೂ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ನೆಟ್ಟಿಗರು ಹಾಗೂ ಮೆಗಾ ಫ್ಯಾನ್ಸ್ ವಿವಿಧ ರೀತಿಯಲ್ಲಿ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ನಿಹಾರಿಕಾ ಬಗ್ಗೆ ಕೆಲವರು ವಿಮರ್ಶೆ ಮಾಡುತ್ತಿದ್ದಾರೆ. ನಿಹಾರಿಕಾ ವಿಚ್ಚೇದನದ ಬಗ್ಗೆ ಕಾಮೆಂಟ್ ಗಳನ್ನು ಮಾಡುತ್ತಾ ಕೌಂಟರ್‍ ಸಹ ನೀಡುತ್ತಿದ್ದಾರೆ. ಇನ್ನೂ ಮದುವೆಯಾದ ಎರಡೇ ವರ್ಷಗಳಲ್ಲಿ ನಿಹಾರಿಕಾ ಚೈತನ್ಯ ಜೊನ್ನಲಗಡ್ಡ ಜೊತೆಗೆ ವಿಚ್ಚೇದನ ಪಡೆದುಕೊಂಡರು. ಶೀಘ್ರದಲ್ಲೇ ಮೆಗಾ ಕುಟುಂಬದಲ್ಲಿ ಗಟ್ಟಿಮೇಳದ ಸದ್ದು ಮೊಳಗಲಿದೆ.