ಗೋಲ್ಡ್ ಕಲರ್ ಸೀರೆಯಲ್ಲಿ ಗ್ಲಾಮರಸ್ ಲುಕ್ಸ್ ಕೊಟ್ಟ ಲೇಡಿ ಸೂಪರ್ ಸ್ಟಾರ್ ನಯನತಾರಾ, ವೈರಲ್ ಆದ ಪೊಟೋಸ್….!

ಸೌತ್ ಸಿನಿರಂಗದಲ್ಲಿ ಮದುವೆಯಾದರು ಸ್ಟಾರ್‍ ನಟಿಯಾಗಿ ಮುನ್ನುಗ್ಗುತ್ತಿರುವವರಲ್ಲಿ ನಯನತಾರಾ ಮೊದಲ ಸ್ಥಾನದಲ್ಲಿರುತ್ತಾರೆ. ಮದುವೆಯಾದರು ದುಬಾರಿ ಸಂಭಾವನೆಯನ್ನು ಪಡೆದುಕೊಳ್ಳುತ್ತಾ ಸಾಲು ಸಾಲು ಆಫರ್‍ ಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಸೌತ್ ಸಿನಿರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದುಕೊಳ್ಳುವ ಟಾಪ್ ಸ್ಥಾನದಲ್ಲಿ ನಯನತಾರಾ ಇರುತ್ತಾರೆ. ಸಾಮಾನ್ಯವಾಗಿ ನಟಿ ನಯನತಾರಾ ಗ್ಲಾಮರಸ್ ಪೊಟೋಗಳನ್ನು ಹಂಚಿಕೊಳ್ಳುವುದು ತುಂಬಾನೆ ವಿರಳ ಆದರೆ ಇದೀಗ ಆಕೆ ಗೋಲ್ಡ್ ಕಲರ್‍ ಸೀರೆಯಲ್ಲಿ ಗ್ಲಾಮರಸ್ ಪೋಸ್ ಕೊಟ್ಟಿದ್ದಾರೆ. ಆಕೆಯ ಪೊಟೋಗಳು ಇದೀಗ ವೈರಲ್ ಆಗುತ್ತಿವೆ.

ಸೌತ್ ಸಿನಿರಂಗದಲ್ಲಿ ಲೇಡಿ ಸೂಪರ್‍ ಸ್ಟಾರ್‍ ಎಂದೇ ಕ್ರೇಜ್ ಪಡೆದುಕೊಂಡಿರುವ ನಯನತಾರಾ ಮದುವೆಯಾದರೂ ಸಹ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸ್ಟಾರ್‍ ನಟರಿಗೂ ಕಡಿಮೆಯಿಲ್ಲ ಎಂಬಂತೆ ಆಕೆಯ ಕ್ರೇಜ್ ಇದೆ. ಲೇಡಿ ಒರಿಯೆಂಟೆಡ್ ಸಿನೆಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುತ್ತಾರೆ. ಆಕೆಯ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲೂ ಭಾರಿ ಸಕ್ಸಸ್ ಕಾಣುತ್ತಿದೆ. ಆಕೆ ಕಮರ್ಷಿಯಲ್ ಸಿನೆಮಾಗಳಲ್ಲಿ ನಟಿಸುವ ಸಮಯದಲ್ಲಿ ಗ್ಲಾಮರ್‍ ಟ್ರೀಟ್ ನೀಡಿದ್ದರು. ಬಳಿಕ ಮಧ್ಯೆ ಗ್ಲಾಮರ್‍ ಜೋರು ಕಡಿಮೆ ಮಾಡಿದ್ದರು. ಇದೀಗ ಮದುವೆ ಮಕ್ಕಳಾದ ಬಳಿಕ ತನ್ನ ರೇಂಜ್ ತೋರಿಸುತ್ತಿದ್ದಾರೆ. ಸದ್ಯ ಆಕೆ ಗೋಲ್ಡ್ ಕಲರ್‍ ಸೀರೆಯಲ್ಲಿ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತಿದ್ದಾರೆ.

ಇತ್ತೀಚಿಗೆ ಮುಂಬೈನಲ್ಲಿ ನಡೆದ ದಾದಾ ಸಾಹೆಬ್ ಫಾಲ್ಕೆ ಅವಾರ್ಡ್ ಕಾರ್ಯಕ್ರಮದಲ್ಲಿ ನಟಿ ನಯನತಾರಾ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಆಕೆ ಸ್ಪೇಷಲ್ ಅಟ್ರಾಕ್ಷನ್ ಆಗಿದ್ದರು. ಗೋಲ್ಡ್ ಕಲರ್‍ ಸೀರೆಯಲ್ಲಿ ಮಿಂಚುತ್ತಾ ಎಲ್ಲರನ್ನೂ ತನ್ನ ಕಡೆ ತಿರುಗಿ ನೋಡುವಂತೆ ಮಾಡಿದ್ದಾರೆ. ಈ ರೇಂಜ್ ನಲ್ಲಿ ನಯನತಾರಾ ಗ್ಲಾಮರ್‍ ಶೋ ಮಾಡುವುದು ತುಂಬಾನೆ ವಿರಳ ಎಂದು ಹೇಳಬಹುದು. ಆದರೆ ಇದೀಗ ಆಕೆ ಹಾಟ್ ಆಗಿ ಕಾಣಿಸಿಕೊಂಡಿದ್ದು, ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ. ಆಕೆಯ ದೇಹದ ಮೈಮಾಟಕ್ಕೆ ಫಿದಾ ಆದ ಅಭಿಮಾನಿಗಳು ವಿವಿಧ ರೀತಿಯ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ಮತಷ್ಟು ಕಡೆ ವೈರಲ್ ಮಾಡುತ್ತಿದ್ದಾರೆ. ಮದುವೆಯಾದರೂ ಸಹ ಆಕೆ ಯಂಗ್ ನಟಿಯರನ್ನು ಮೀರಿಸುವಂತೆ ಬ್ಯೂಟಿಪುಲ್ ಆಗಿ ಕಾಣಿಸಿಕೊಂಡಿದ್ದಾರೆ ಎನ್ನಬಹುದಾಗಿದೆ.

ಇನ್ನೂ ಈ ಪೊಟೋಗಳನ್ನು ನಯನತಾರಾ ಪತಿ ವಿಘ್ನೇಶ್ ಶಿವನ್ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಳೆದ ವರ್ಷ ನಯನತಾರಾ ಜವಾನ್ ಎಂಬ ಸಿನೆಮಾದಲ್ಲಿ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಜೊತೆಗೆ ನಟಿಸಿ ಭಾರಿ ಸಕ್ಸಸ್ ಪಡೆದುಕೊಂಡಿದ್ದರು. ಸದ್ಯ ಆಕೆಯ ಕೈಯಲ್ಲಿ ಟೆಸ್ಟ್ ಎಂಬ ತಮಿಳು ಸಿನೆಮಾ ಹಾಗೂ ಮುನ್ನಂಗಟ್ಟಿ ಸೀನ್ಸ್ 1960 ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ.