ಸಿನೆಮಾಗಳಿಗೆ ಗುಡ್ ಬೈ ಹೇಳಿದ ದಳಪತಿ ವಿಜಯ್, ಚುನಾವಣೆಗೆ ಸಿದ್ದವಾಗ್ತಾ ಇದ್ದಾರೆ ಕಾಲಿವುಡ್ ಸ್ಟಾರ್ ವಿಜಯ್……!

Follow Us :

ಕಾಲಿವುಡ್ ಸೂಪರ್‍ ಸ್ಟಾರ್‍ ದಳಪತಿ ವಿಜಯ್ ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಭಾರಿ ಫೇಂ ಪಡೆದುಕೊಂಡಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದಾರೆ. ಸದ್ಯ ಅವರು ರಾಜಕೀಯ ರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಯಾವುದೇ ಕ್ಷಣದಲ್ಲಿ ಅವರು ತಮ್ಮ ಹೊಸ ಪಕ್ಷವನ್ನು ಘೋಷಣೆ ಮಾಡುವ ಸಾಧ್ಯತೆ ಸಹ ಹೆಚ್ಚಾಗಿಯೇ ಇದೆ. ಚುನಾವಣೆಯ ಕಾರಣದಿಂದ ದಳಪತಿ ವಿಜಯ್ ಸಿನೆಮಾಗಳಿಗೆ ಗುಡ್ ಬೈ ಹೇಳಲಿದ್ದಾರೆ ಎಂಬ ಸುದ್ದಿಯೊಂದು ಸಖತ್ ವೈರಲ್ ಆಗುತ್ತಿದೆ.

ನಟ ದಳಪತಿ ವಿಜಯ್ ಶೀಘ್ರದಲ್ಲೆ ಹೊಸ ಪಕ್ಷವನ್ನು ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಚುನಾವಣೆ ನಿಮಿತ್ತ ದಳಪತಿ ವಿಜಯ್ ರವರು ರಾಜಕೀಯದಲ್ಲಿ ಸಕ್ರೀಯರಾಗಿದ್ದಾರೆ. ಜೊತೆಗೆ ವಿಜಯ್ ಹೆಸರಿನಲ್ಲಿ ಅಭಿಮಾನಿ ಸಂಘಗಳನ್ನು ಕಟ್ಟಿಕೊಂಡು ಅನೇಕ ಸಮಾವೇಶಗಳನ್ನು ಸಹ ನಡೆಸಿದ್ದಾರೆ.ಈ ಸಮಾವೇಶದಲ್ಲಿ ತನ್ನ ಹೊಸ ಪಾರ್ಟಿಯ ಹೆಸರನ್ನು ರಿವೀಲ್ ಮಾಡಲಿದ್ದಾರೆ ಎಂದೂ ಸಹ ಹೇಳಲಾಗಿದೆ. ಈಗಾಗಲೇ ಆ ಹೆಸರನ್ನು ಸಹ ರಿಜಿಸ್ಟರ್‍ ಮಾಡಲಾಗಿದೆ ಎಂದೂ ಸಹ ಕೇಳಿಬಂದಿದೆ. ಇನ್ನೂ ಚುನಾವಣೆಯ ಕಾರಣದಿಂದ ವಿಜಯ್ ಒಪ್ಪಿಕೊಂಡಂತಹ ಸಿನೆಮಾಗಳನ್ನು ಸಹ ಪೂರ್ಣಗೊಳಿಸುತ್ತಿದ್ದಾರಂತೆ. ಬಳಿಕ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡು ಸಕ್ರೀಯವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜಕೀಯವಾಗಿ ಸ್ಥಿರಗೊಂಡ ಬಳಿಕ ಮತ್ತೆ ಸಿನೆಮಾಗಳಲ್ಲಿ ನಟಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. ತನ್ನ ಪಕ್ಷದ ಕೆಲಸಗಳನ್ನು ಸಹ ತ್ವರಿತವಾಗಿ ಪೂರ್ಣಗೊಳಿಸುತ್ತಿದ್ದಾರೆ. ಈ ನಡುವೆ ಮತ್ತೊಂದು ಸುದ್ದಿ ಸಹ ಕೇಳಿಬರುತ್ತಿದೆ. ವಿಜಯ್ ಸ್ಥಾಪನೆ ಮಾಡುವಂತಹ ಪಾರ್ಟಿ ಅಧಿಕಾರಕ್ಕೆ ಬಂದರೇ ವಿಜಯ್ ಸಿನೆಮಾಗಳಿಗೆ ಶಾಶ್ವತವಾಗಿ ಗುಡ್ ಬೈ ಹೇಳಲಿದ್ದಾರೆ ಎಂಬ ವಾದವೊಂದೂ ಸಹ ಕೇಳಿಬರುತ್ತಿದೆ. ಈ ನಡುವೆ ವಿಜಯ್ ಮತ್ತೊಮ್ಮೆ ಅಭಿಮಾನಿಗಳೊಂದಿಗೆ ಸಮಾವೇಶ ಆಯೋಜಿಸಿದ್ದು, ತಮಿಳುನಾಡು ರಾಜಕೀಯದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ. 2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸ್ಫರ್ಧಿಸುವಂತಹ ದೃಢ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ.

ಇನ್ನೂ ದಳಪತಿ ವಿಜಯ್ ಕೈಯಲ್ಲಿ ಎರಡುಮೂರು ದೊಡ್ಡ ಸಿನೆಮಾಗಲಿವೆ. ನಿರ್ಮಾಪಕ ಡಿವಿವಿ ದಾನಯ್ಯ ಜೊತೆಗೂ ಸಹ ವಿಜಯ್ ಸಿನೆಮಾ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನೆಮಾ ರಾಜಕೀಯ ವಲಯಕ್ಕೆ ಸಂಬಂಧಿಸಿದ ಸಿನೆಮಾ ಆಗಲಿದ್ದು, ಈ ಸಿನೆಮಾದ ಬಳಿಕ ವಿಜಯ್ ಸಿನೆಮಾಗಳಿಂದ ದೂರ ಉಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.