Film News

ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಭರ್ಜರಿ ಸ್ಟೆಪ್ಸ್, ವೈರಲ್ ಆದ ವಿಡಿಯೋ, ಹೊಸ ಹಿರೋಯಿನ್ ಫಿಕ್ಸ್ ಎಂಬ ಫ್ಯಾನ್ಸ್……!

ವಿಶ್ವದಾದ್ಯಂತ ಅಭಿಮಾನಿ ಬಳಗ ಹೊಂದಿರುವ ಕಿಚ್ಚ ಸುದೀಪ್ ರವರ ಬಗ್ಗೆ ಹೆಚ್ಚಿನ ಪರಿಚಯದ ಅಗತ್ಯವಿಲ್ಲ. ಅನೇಕ ಸಿನೆಮಾಗಳ ಮೂಲಕ ದೇಶದ ಸಿನಿರಸಿಕರನ್ನು ರಂಜಿಸಿದ್ದಾರೆ. ಕನ್ನಡ ಸಿನೆಮಾಗಳಲ್ಲಿ ಮಾತ್ರವಲ್ಲದೇ ಬೇರೆ ಭಾಷೆಯ ಸಿನೆಮಾಗಳಲ್ಲೂ ಸಹ ನಟಿಸಿ ಅಲ್ಲೂ ತನ್ನ ಪ್ರಾಬಲ್ಯ ಮೆರೆದಿದ್ದಾರೆ. ಇನ್ನೂ ಕಿಚ್ಚ ಸುದೀಪ್ ರವರಿಗೆ 19 ವರ್ಷದ ಮಗಳಿದ್ದಾರೆ. ಸುದೀಪ್ ರವರ ಪುತ್ರಿ ಸಾನ್ವಿಸುದೀಪ್ ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟಿವ್ ಆಗಿದ್ದಾರೆ. ಇದೀಗ ಸಾನ್ವಿ ಸುದೀಪ್ ರವರ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸಿನಿರಂಗದ ಸ್ಟಾರ್‍ ನಟರ ಮಕ್ಕಳು ವಯಸ್ಸಿಗೆ ಬಂದ ಕೂಡಲೇ ಅವರು ಯಾವಾಗ ಸಿನಿಮಾಗಳ ಮೂಲಕ ರಂಜಿಸುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿರುತ್ತಾರೆ. ಅದೇ ಮಾದರಿಯಲ್ಲಿ ಕಿಚ್ಚ ಸುದೀಪ್ ರವರ ಪುತ್ರಿ ಸಾನ್ವಿ ರವರನ್ನು ಸಹ ಸಿನೆಮಾಗಳಲ್ಲಿ ನೋಡಲು ಕಿಚ್ಚನ ಅಭಿಮಾನಿಗಳು ಕಾತುರರಾಗಿದ್ದಾರೆ ಎನ್ನಲಾಗಿದೆ. ಈಗಾಗಲೇ ಸುದೀಪ್ ರವರ ಪುತ್ರಿ ಸಾನ್ವಿ ಗಾಯಕಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಾಗಿದೆ. ಜಿಮ್ಮಿ ಎಂಬ ಸಿನೆಮಾದಲ್ಲಿ ಸಾನ್ವಿ ಹಾಡನ್ನು ಹಾಡುವ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇನ್ನೂ ಸುಮಧುರ ಕಂಠ ಹೊಂದಿರುವ ಸಾನ್ವಿ ಹಾಡಿದ ಹಾಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಜಿಮ್ಮಿ ಸಿನೆಮಾದಲ್ಲಿ ಸುದೀಪ್ ರವರ ಅಕ್ಕನ ಮಗ ಸಂಚಿತ್ ಸಂಜೀವ್ ನಟಿಸಿದ್ದಾರೆ.

ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿದ್ದಾರೆ. ಈಗಾಗಲೇ ವಿವಿಧ ರೀತಿಯ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಜೊತೆಗೆ ಆಕೆ ಕೆಲವೊಂದು ರೀಲ್ಸ್ ಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ. ಈ ಕಾರಣದಿಂದ ಸಾನ್ವಿ ಸ್ಯಾಂಡಲ್ ವುಡ್ ನಲ್ಲಿ ನಟಿಯಾಗಿ ಎಂಟ್ರಿ ಕೊಡುವುದು ಪಕ್ಕಾ ಎಂದು ಅಭಿಮಾನಿಗಳು ಊಹಿಸಿಕೊಳ್ಳುತ್ತಿದ್ದಾರೆ. ಇನ್ನೂ ಇದೀಗ ಸಾನ್ವಿ ಮತ್ತೊಂದು ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿದೆ. ಅಭಿಮಾನಿಗಳು ಸಹ ವಿವಿಧ ರೀತಿಯಲ್ಲಿ ರಿಯಾಕ್ಟ್ ಆಗುತ್ತಿದ್ದಾರೆ. ನಿಮ್ಮ ಡ್ಯಾನ್ಸ್ ಸೂಪರ್‍ ಅಕ್ಕಾ ಎಂದರೇ ಮತ್ತೆ ಕೆಲವರು ಕನ್ನಡ ಹಾಡಿಗೆ ರೀಲ್ಸ್ ಮಾಡಿ ಎಂತಲೂ, ಮತ್ತೆ ಕೆಲವರು ಸಿನೆಮಾಗಳಲ್ಲಿ ನಾಯಕಿಯಾಗಿ ಎಂಟ್ರಿ ಯಾವಾಗ ಎಂದು ಸಹ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Most Popular

To Top