News

ಯುವನಿಧಿ ಯೋಜನೆ ಜಾರಿಗೆ ಮುಹೂರ್ತ ಫಿಕ್ಸ್, ಕಾಂಗ್ರೇಸ್ ನ ಐದನೇ ಗ್ಯಾರಂಟಿ 5 ಲಕ್ಷ ಪದವೀಧರರ ಖಾತೆಗೆ ಯುವನಿಧಿ…!

ಕರ್ನಾಟಕದ ವಿಧಾನಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೇಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ತಮ್ಮ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಅದರಂತೆ ನಾಲ್ಕು ಗ್ಯಾರಂಟಿಗಳನ್ನು ಈಡೇರಿಸಿದೆ. ಇದೀಗ ಐದನೇ ಗ್ಯಾರಂಟಿಯಾದ ಯುವನಿಧಿ ಯೋಜನೆಯನ್ನು ಜಾರಿ ಮಾಡಲು ಮುಹೂರ್ತ ಫಿಕ್ಸ್ ಆಗಿದೆಯಂತೆ. ಡಿ.21 ರಿಂದ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಈ ಯೋಜನೆಯ ಬಗ್ಗೆ ಮಾಹಿತಿ ನೀಡಿರುವ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಜನವರಿಯಿಂದ ಈ ಯೋಜನೆಗೆ ಚಾಲನೆ ನೀಡಲಾಗುತ್ತದೆ ಎಂದು ಹೇಳುವ ಮೂಲಕ ಕಾಂಗ್ರೇಸ್ ಸರ್ಕಾರದ ಮಹತ್ವಾಕಾಂಕ್ಷಿ ಐದನೇ ಗ್ಯಾರಂಟಿ ಜಾರಿ ಫಿಕ್ಸ್ ಎಂದು ಹೇಳಲಾಗಿದೆ. ಯುವನಿಧಿ ಯೋಜನೆಯಡಿ 2023 ರಲ್ಲಿ ತೇರ್ಗಡೆಯಾದ ಪದವೀಧರರಿಗೆ 180 ದಿನಗಳ ಕಳೆದರೂ ಉದ್ಯೋಗ ಸಿಗದಂತಹ ನಿರುದ್ಯೋಗಿಗಳಲಿಗೆ ಪ್ರತಿ ತಿಂಗಳು ನಿರುದ್ಯೋಗ ಭತ್ಯೆಯನ್ನು ನೀಡಲಾಗುತ್ತದೆ. ಈ ಯೋಜನೆಯಡಿ 5 ಲಕ್ಷ ಪದವೀಧರರು ಫಲಾನುಭವಿಗಳಾಗಲಿದ್ದಾರೆ ಎನ್ನಲಾಗಿದೆ.

2022-23 ನೇ ಸಾಲಿನಲ್ಲಿ ಉತ್ತೀರ್ಣರಾಗಿ ಆರು ತಿಂಗಳ ಕಾಲ ಉದ್ಯೋಗ ಸಿಗದಂತಹ ಪದವಿಧರರು ಹಾಗೂ ಡಿಪ್ಲೋಮೊ ಅಂದರೇ ವೃತ್ತಿಪರ ಕೋರ್ಸ್ ಮಾಡಿರುವಂತಹ ಯುವಕರಿಗೆ ಪದವೀಧರರಿಗೆ ಪ್ರತಿ ಮಾಹೆ 3 ಸಾವಿರ, ಡಿಪ್ಲೋಮಾ ಪದವೀಧರರಿಗೆ ಒಂದೂವರೆ ಸಾವಿರ ನಿರುದ್ಯೋಗ ಭತ್ಯೆ ಸಿಗಲಿದೆ. ಪದವಿ/ಡಿಪ್ಲೋಮೋ ಪಾಸ್ ಆದ 6 ತಿಂಗಳು ಉದ್ಯೋಗ ಸಿಗದೇ ಇದ್ದರೇ ಮಾತ್ರ ನಿರುದ್ಯೋಗ ಭತ್ಯೆ ಪಡೆಯಲು ಅರ್ಹರಾಗುತ್ತಾರೆ. ಫಲಾನುಭವಿಗಳು ಉದ್ಯೋಗ ಪಡೆಯುವವರೆಗೂ ಅಥವಾ 2 ವರ್ಷಗಳ ಅವಧಿಗೆ ಮಾತ್ರ ಈ ಭತ್ಯೆ ಸಿಗಲಿದೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೇ ಉನ್ನತ ವ್ಯಾಸಂಗಕ್ಕೆ ಹೋಗುವ ಅಭ್ಯರ್ಥಿಗಳು ಹಾಗೂ ಸರ್ಕಾರದ ಸಹಾಯಧನ ಪಡೆದು ಸ್ವಯಂ ಉದ್ಯೋಗ ಆರಂಭಿಸುವವರು ಈ ಯೋಜನೆಗೆ ಅರ್ಹತೆ ಪಡೆದುಕೊಳ್ಳುವುದಿಲ್ಲ. ಅರ್ಜಿ ಸಲ್ಲಿಸಿ ಅರ್ಹರಾದ ಫಲಾನುಭವಿಗಳ ಖಾತೆಗೆ ಪ್ರತಿ ಮಾಹೆ ನಿರುದ್ಯೋಗ ಭತ್ಯೆ ಜಮೆ ಆಗಲಿದೆ ಎಂದು ಹೇಳಲಾಗಿದೆ.

Most Popular

To Top