ಮದುವೆಗೂ ಮುಂಚೆ ಕಾಜಲ್ ಪತಿ ಗೌತಮ್ ಆ ಕಂಡಿಷನ್ಸ್ ಇಟ್ಟಿದ್ರಂತೆ, ವೈರಲ್ ಆದ ಸುದ್ದಿ, ಅಷ್ಟಕ್ಕೂ ಆ ಕಂಡಿಷನ್ ಏನು?

Follow Us :

ಅನೇಕ ವರ್ಷಗಳ ಕಾಲ ತೆಲುಗು ಸಿನಿರಂಗ ಸೇರಿದಂತೆ ತಮಿಳು ಸಿನೆಮಾಗಳಲ್ಲೂ ಸಹ ಬಹುಬೇಡಿಕೆ ಹೊಂದಿದ್ದ ನಟಿಯರಲ್ಲಿ ಕಾಜಲ್ ಅಗರ್ವಾಲ್ ಸಹ ಒಬ್ಬರಾಗಿದ್ದರು. ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಸಮಯದಲ್ಲೇ ಆಕೆ ಗೌತಮ್ ಕಿಚ್ಲು ಎಂಬ ಉದ್ಯಮಿಯೊಂದಿಗೆ ವಿವಾಹವಾದರು. ಮದುವೆಯಾದ ಬಳಿಕ ಸಿನೆಮಾಗಳಿಂದ ಕೊಂಚ ದೂರವೇ ಉಳಿದರು. ಸದ್ಯ ಕಾಜಲ್ ಅಗರ್ವಾಲ್ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದು ಕ್ರೇಜಿ ಪ್ರಾಜೆಕ್ಟ್ ಗಳ ಮೂಲಕ ಬ್ಯುಸಿಯಾಗಿದ್ದಾರೆ. ಇದೀಗ ಮದುವೆಗೂ ಮುಂಚೆ ಕಾಜಲ್ ಗೆ ಗೌತಮ್ ಕೆಲವು ಕಂಡಿಷನ್ ಇಟ್ಟಿದ್ರಂತೆ ಅದು ಇದೀಗ ಸಖತ್ ವೈರಲ್ ಆಗುತ್ತಿದೆ.

ಸೌತ್ ಸಿನಿರಂಗದಲ್ಲಿ ಅನೇಕ ಸ್ಟಾರ್‍ ಗಳ ಜೊತೆಗೆ ಅನೇಕ ಹಿಟ್ ಸಿನೆಮಾಗಳನ್ನು ನೀಡಿದ ನಟಿ ಕಾಜಲ್ ಅಗರ್ವಾಲ್ ಲಕ್ಷ್ಮೀ ಕಲ್ಯಾಣಂ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ಕಡಿಮೆ ಸಮಯದಲ್ಲೇ ಸ್ಟಾರ್‍ ಡಮ್ ಗಿಟ್ಟಿಸಿಕೊಂಡರು. ಮೊದಲನೇ ಸಿನೆಮಾದ ಮೂಲಕವೇ ಅನೇಕ ಯುವಕರ ಕನಸಿನ ರಾಣಿಯಾದರು. ಕಳೆದ 2020 ರ ಅಕ್ಟೋಬರ್‍ 30 ರಂದು ಮುಂಬೈನಲ್ಲಿ ಕಾಜಲ್ ಅಗರ್ವಾಲ್ ಉದ್ಯಮಿ ಗೌತಮ್ ಕಿಚ್ಲು ಎಂಬಾತನನ್ನು ವಿವಾಹವಾದರು. ಕಳೆದ ವರ್ಷ ಏಪ್ರಿಲ್ 19 ರಂದು ಮುದ್ದಾದ ಗಂಡು ಮಗುವಿಗೂ ಸಹ ಜನ್ಮ ಕೊಟ್ಟರು. ಮದುವೆ, ಮಗು ಕಾರಣದಿಂದ ಆಕೆ ಸಿನೆಮಾಗಳಿಂದ ದೂರವೇ ಇದ್ದರು. ಇದೀಗ ಆಕೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಒಳ್ಳೆಯ ಪ್ರಾಜೆಕ್ಟ್ ಗಳಲ್ಲಿ ನಟಿಸುತ್ತಿದ್ದಾರೆ.

ನಟಿ ಕಾಜಲ್ ಗೆ ಮದುವೆಗೂ ಮುಂಚೆ ಗೌತಮ್ ಕೆಲವೊಂದು ಕಂಡಿಷನ್ಸ್ ಹಾಕಿದ್ದರೆಂಬ ಸುದ್ದಿ ಕೇಳಿಬರುತ್ತಿದೆ. ಮದುವೆ ಬಳಿಕ ಸಿನೆಮಾಗಳಲ್ಲಿ ನಟಿಸುವುದು ತನಗೆ ಏನು ಅಭ್ಯಂತರವಿಲ್ಲ. ಆದರೆ ಪ್ರತಿ ನಿತ್ಯ ಒಂದು ಗಂಟೆ ನನ್ನೊಂದಿಗೆ ಸಮಯ ಕಳೆಯಬೇಕು ಎಂದು ಕಂಡಿಷನ್ ಹಾಕಿದ್ದರಂತೆ. ಇದನ್ನು ಒಪ್ಪಿಕೊಂಡ ಬಳಿಕವಷ್ಟೆ ಕಾಜಲ್ ಜೊತೆಗೆ ಮದುವೆಗೆ ಒಪ್ಪಿಕೊಂಡರಂತೆ. ಈ ಕಾರಣದಿಂದ ಕಾಜಲ್ ಸಿನೆಮಾಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರು. ಪತಿಯೊಂದಿಗೆ ಸಮಯ ಕಳೆಯುತ್ತಿರುತ್ತಾರೆ. ಇನ್ನೂ ಈ ಸುದ್ದಿ ಇದೀಗ ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಅಥವಾ ಸುಳ್ಳು ಎಂಬುದು ಮಾತ್ರ ತಿಳಿದು ಬಂದಿಲ್ಲ. ಆದರೆ ಸುದ್ದಿ ಮಾತ್ರ ಜೋರಾಗಿಯೇ ಹರಿದಾಡುತ್ತಿದೆ.

ಇನ್ನೂ ಕಾಜಲ್ ಅಗರ್ವಾಲ್ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು, ಕ್ರೇಜಿ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಕಾಜಲ್ ನಂದಮೂರಿ ಬಾಲಕೃಷ್ಣ ಜೊತೆಗೆ ಭಗವಂತ್ ಕೇಸರಿ, ಲೋಕನಾಯಕ ಕಮಲ್ ಹಾಸನ್ ಜೊತೆಗೆ ಇಂಡಿಯನ್-2 ಸೇರಿದಂತೆ ಉಮಾ, ಸತ್ಯಭಾಮ ಸೇರಿದಂತೆ ಮತಷ್ಟು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.