ಲಾವಣ್ಯ ತ್ರಿಪಾಠಿಗೆ ವಿಚಿತ್ರ ವ್ಯಾಧಿಯಿದೆಯಂತೆ, ಈ ವಿಚಾರ ತಿಳಿದು ವರುಣ್ ಮದುವೆಯಾಗುತ್ತಿದ್ದಾರೆ, ವೈರಲ್ ಆದ ಸುದ್ದಿ…..!

ದೊಡ್ಡಪರದೆಯ ಮೇಲೆ ಸಿನೆಮಾ ಪ್ರೇಕ್ಷಕರನ್ನು ರಂಜಿಸುವಂತಹ ಅನೇಕ ನಟಿಯರು ತಮ್ಮ ನಿಜ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಹೊಂದಿರುತ್ತಾರೆ. ಅದರಲ್ಲೂ ಕೆಲ ನಟ ನಟಿಯರು ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕೆಲವರು ತಮ್ಮ ವ್ಯಾಧಿಯ…

ದೊಡ್ಡಪರದೆಯ ಮೇಲೆ ಸಿನೆಮಾ ಪ್ರೇಕ್ಷಕರನ್ನು ರಂಜಿಸುವಂತಹ ಅನೇಕ ನಟಿಯರು ತಮ್ಮ ನಿಜ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಹೊಂದಿರುತ್ತಾರೆ. ಅದರಲ್ಲೂ ಕೆಲ ನಟ ನಟಿಯರು ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕೆಲವರು ತಮ್ಮ ವ್ಯಾಧಿಯ ಬಗ್ಗೆ ಒಪೆನ್ ಆಗಿ ಹೇಳಿದರೇ ಮತ್ತೆ ಕೆಲವರು ಅದನ್ನು ನಿಗೂಢವಾಗಿಡುತ್ತಾರೆ. ಇದೀಗ ಮೆಗಾ ಕುಟುಂಬದ ಸೊಸೆಯಾಗಲಿರುವ ಲಾವಣ್ಯ ತ್ರಿಪಾಠಿ ಸಹ ಒಂದು ವಿಚಿತ್ರ ವ್ಯಾಧಿಯಿಂದ ಬಳಲುತ್ತಿದ್ದಾರಂತೆ. ಅಷ್ಟಕ್ಕೂ ಲಾವಣ್ಯಗೆ ಬಂದಿರುವ ಆ ವ್ಯಾಧಿ ಏನು ಎಂಬ ವಿಚಾರಕ್ಕೆ ಬಂದರೇ,

ಸೌತ್ ಸಿನಿರಂಗದ ಅನೇಕ ನಟಿಯರು ವಿವಿಧ ರೀತಿಯ ವ್ಯಾಧಿಗಳಿಗೆ ತುತ್ತಾಗಿರುವ ಬಗ್ಗೆ ತಿಳಿದೇ ಇದೆ. ಕೆಲವು ತಿಂಗಳುಗಳ ಹಿಂದೆಯಷ್ಟೆ ಸ್ಟಾರ್‍ ನಟಿ ಸಮಂತಾ ಮಯೋಸೈಟೀಸ್ ಎಂಬ ವ್ಯಾಧಿಗೆ ಗುರಿಯಾಗಿ ಇದೀಗ ಆಕೆ ಗುಣಮುಖರಾಗಿ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಲಾವಣ್ಯ ತ್ರಿಪಾಠಿ ಸಹ ಒಂದು ವಿಚಿತ್ರ ವ್ಯಾಧಿಯಿಂದ ಬಳಲುತ್ತಿದ್ದಾರಂತೆ. ಕೆಲವು ದಿನಗಳ ಹಿಂದೆಯಷ್ಟೆ ಲಾವಣ್ಯ ತ್ರಿಪಾಠಿ ಹಾಗೂ ಮೆಗಾ ಪ್ರಿನ್ಸ್ ವರುಣ್ ತೇಜ್ ಎಂಗೇಜ್ ಮೆಂಟ್ ಅದ್ದೂರಿಯಾಗಿ ನೆರವೇರಿತು. 2008 ರಲ್ಲಿ ಅಂದಾಲ ರಾಕ್ಷಸಿ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ಲಾವಣ್ಯ ಕಡಿಮೆ ಸಮಯದಲ್ಲೇ ಒಳ್ಳೆಯ ಕ್ರೇಜ್ ಪಡೆದುಕೊಂಡರು. ಬಳಿಕ ತೆಲುಗು ಸೇರಿದಂತೆ ತಮಿಳು ಹಾಗೂ ಹಿಂದಿ ಭಾಷೆಯಲ್ಲೂ ಸಹ ನಟಿಸಿದರು. ಆದರೆ ಇತ್ತಿಚಿಗೆ ಆಕೆ ಬ್ಯಾಕ್ ಟು ಬ್ಯಾಕ್ ಸೋಲುಗಳು ಸಹ ಬಂದವು.

ಇನ್ನೂ ನಟಿ ಲಾವಣ್ಯ ತ್ರಿಪಾಠಿ ಒಂದು ವಿಚಿತ್ರವಾದ ವ್ಯಾಧಿಯಿಂದ ಬಳಲುತ್ತಿದ್ದಾರಂತೆ. ಈ ವಿಚಾರವನ್ನು ಆಕೆಯೇ ಹೇಳಿದ್ದಾರೆ ಎನ್ನಲಾಗಿದೆ. ಸಾಮಾನ್ಯವಾಗಿ ಲಾವಣ್ಯ ತುಂಭಾ ಧೈರ್ಯಶಾಲಿಯಂತೆ. ಆದರೆ ಇತ್ತೀಚಿಗೆ ಆಕೆ ಕೆಲವೊಂದು ವಸ್ತುಗಳು, ಕೆಲವೊಂದು ಆಕಾರಗಳನ್ನು ನೋಡಿದರೇ ಸಾಕು ತುಂಭಾ ಭಯಪಡುತ್ತಾರಂತೆ. ಈ ವಿಚಾರವನ್ನು ವೈದ್ಯರ ಬಳಿ ತಿಳಿಸಿದಾಗ ಅವರು ಆಕೆಗೆ ಟ್ರಪೋಫೋಬಿಯಾ ವ್ಯಾದಿ ಎಂದು ತಿಳಿಸಿದ್ದಾರಂತೆ. ಇನ್ನೂ ಈ ಸುದ್ದಿ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ಅನೇಕರು ಟ್ರೋಲ್ ಸಹ ಮಾಡುತ್ತಿದ್ದಾರೆ. ಮೆಗಾ ಕುಟುಂಬದ ಸೊಸೆಗೆ ವಿಚಿತ್ರವಾದ ಕಾಯಿಲೆಯಂತೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ವರುಣ್ ಗೆ ಮುಂದೆ ತುಂಬಾ ಕಷ್ಟಗಳು ಎಂದು ಅನೇಕರು ಅನುಮಾನ ಪಡುತ್ತಿದ್ದಾರೆ. ಇನ್ನೂ ಈ ಬಗ್ಗೆ ವರುಣ್ ಅಥವಾ ಲಾವಣ್ಯ ಯಾವ ರೀತಿ ರಿಯಾಕ್ಟ್ ಆಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.