ಎಮೋಷನಲ್ ನೋಟ್ ಶೇರ್ ಮಾಡಿದ ಜೂನಿಯರ್ ಎನ್.ಟಿ.ಆರ್, ನನಗೆ ಅಭಿಮಾನಿಗಳೇ ದೇವರು ಎಂದ್ರು….!

ತೆಲುಗು ಸಿನಿರಂಗದ ಸ್ಟಾರ್‍ ನಟ ಯಂಗ್ ಟೈಗರ್‍ ಎನ್.ಟಿ.ಆರ್‍ ಭಾರಿ ಅಭಿಮಾನಿ ಬಳಗ ಪಡೆದುಕೊಂಡಿದ್ದಾರೆ. ವಿಶ್ವವಿಖ್ಯಾತ, ನಟ ಸಾರ್ವಭೌಮ ನಂದಮೂರಿ ತಾರಕರಾಮಾರಾವ್ ರವರ ಮೊಮ್ಮಗನಾಗಿ ಅವರ ವಾರಸತ್ವವನ್ನು ಮುಂದುವರೆಸುತ್ತಿದ್ದಾರೆ. RRR ಸಿನೆಮಾದ ಮೂಲಕ ಗ್ಲೋಬಲ್ ಸ್ಟಾರ್‍ ಆದ ಎನ್.ಟಿ.ಆರ್‍ ಅಭಿಮಾನಿಗಳ ಮೇಲೆ ತುಂಬಾ ಪ್ರೀತಿಯನ್ನು ಸಾರುತ್ತಾರೆ. ಇನ್ನೂ ಜೂನಿಯರ್‍ ಎನ್.ಟಿ.ಆರ್‍ ರವರು ತಮ್ಮ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದು, ಇದೀಗ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ಈ ಸಂಬಂಧ ಎಮೋಷನಲ್ ನೋಟ್ ಒಂದನ್ನು ಹಂಚಿಕೊಂಡಿದ್ದಾರೆ.

ಯಂಗ್ ಟೈಗರ್‍ ಎನ್.ಟಿ.ಆರ್‍ ಸುಮಾರು ಎರಡು ದಶಕಗಳಿಂದ ಸೌತ್ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಸುಮಾರು ಕೋಟ್ಯಂತರ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದಾರೆ. ಅವರ ಮೇಲೆ ಅಭಿಮಾನಿಗಳು ಭಾರಿ ಪ್ರೀತಿಯನ್ನು ಸಹ ಇಟ್ಟುಕೊಂಡಿದ್ದಾರೆ. ಅದೇ ರೀತಿ ಎನ್.ಟಿ.ಆರ್‍ ಸಹ ತಮ್ಮ ಅಭಿಮಾನಿಗಳು ಎಂದರೇ ತುಂಬಾ ಪ್ರೀತಿ ತೋರುತ್ತಾರೆ. ಪ್ರತಿಯೊಂದು ಕಾರ್ಯಕ್ರಮದಲ್ಲೂ ಸಹ ತಮ್ಮ ಅಭಿಮಾನಿಗಳ ಯೋಗಕ್ಷೇಮದ ಬಗ್ಗೆ ಮಾತನಾಡುತ್ತಿರುತ್ತಾರೆ. ಇನ್ನೂ ಅವರ ಅಭಿಮಾನಿಗಳೂ ಸಹ ಅವರಿಗೆ ತುಂಬಾ ಬೆಂಬಲವಾಗಿ ನಿಲ್ಲುತ್ತಾರೆ. ಅವರ ಸಿನೆಮಾ ಬಿಡುಗಡೆಯಾದರೇ ಸಾಕು ಎಷ್ಟರ ಮಟ್ಟಿಗೆ ಸದ್ದು ಮಾಡುತ್ತಾರೋ ತಿಳಿದೇ ಇದೆ. ಇತ್ತೀಚಿಗೆ RRR ಸಿನೆಮಾದ ಮೂಲಕ ಗ್ಲೋಬಲ್ ಲೆವೆಲ್ ನಲ್ಲಿ ಆತನಿಗೆ ಅಭಿಮಾನಿಗಳಾಗಿದ್ದಾರೆ.

ಇನ್ನೂ ಜೂನಿಯರ್‍ ಎನ್.ಟಿ.ಆರ್‍ ತಮ್ಮ 40 ವರ್ಷದ ಹುಟ್ಟುಹಬ್ಬವನ್ನು ಕಳೆದೆರಡು ದಿನಗಳ ಹಿಂದೆ ಆಚರಿಸಿಕೊಂಡರು. ಅವರ ಹುಟ್ಟುಹಬ್ಬಕ್ಕೆ ಸ್ಟಾರ್‍ ನಟರಾದ ಅಲ್ಲು ಅರ್ಜುನ್, ರಾಮ್ ಚರಣ್ ಸೇರಿದಂತೆ ಅನೇಕ ಸೆಲೆಬ್ರೆಟಿಗಳು ಹಾಗೂ ಅಭಿಮಾನಿಗಳು ಶುಭಾಷಯಗಳ ಸುರಿಮಳೆಗೈದಿದ್ದರು. ಅವರ ಅಭಿಮಾನಿಗಳಂತೂ ಈ ಹುಟ್ಟುಹಬ್ಬವನ್ನು ಹಬ್ಬದಂತೆ ಆಚರಿಸಿಕೊಂಡರು. ಇನ್ನೂ ಎನ್.ಟಿ.ಆರ್‍ ಅಭಿಮಾನಿಗಳು ತೋರಿಸಿದ ಪ್ರೀತಿಗೆ ಎಮೋಷನಲ್ ಆಗಿದ್ದಾರೆ. ಈ ಸಂಬಂಧ ಸೋಷಿಯಲ್ ಮಿಡಿಯಾದಲ್ಲಿ ಎಮೋಷನಲ್ ನೋಟ್ ಸಹ ಹಂಚಿಕೊಂಡಿದ್ದಾರೆ.  ಕೆಲವು ದಶಕಗಳ ಕಾಲದಿಂದ ನನ್ನನ್ನು ಅಭಿಮಾನಿಗಳೇ ನಡಿಸುತ್ತಿದ್ದಾರೆ. ಬೆಂಬಲ ನೀಡು‌ತ್ತಿದ್ದಾರೆ. ನಾನು ನಟಿಸುವ ಪಾತ್ರ, ಕಥೆ ಅಭಿಮಾನಿಗಳಿಗಾಗಿ. ಅಷ್ಟೊಂದು ಪ್ರೀತಿಯನ್ನು ನನ್ನ ಮೇಲೆ ತೋರಿಸುವ ಪ್ರತಿಯೊಬ್ಬ ಅಭಿಮಾನಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು. ಇನ್ನೂ ದೇವರ ಟೈಟಲ್ ಗೆ ನೀವು ನೀಡಿದ ಪ್ರತಿಕ್ರಿಯೆಗೆ ತುಂಬಾ ಚಿರ ಋಣಿಯಾಗಿರುತ್ತೇನೆ. ನನ್ನ ಹುಟ್ಟುಹಬ್ಬವನ್ನು ಮತಷ್ಟು ವಿಶೇಷವಾಗಿ ಮಾಡಿದ ಸ್ನೇಹಿತರು, ಕುಟುಂಬಸ್ಥರು ಹಾಗೂ ಸಿನೆಮಾ ಪ್ರಮುಖರಿಗೆ ಧನ್ಯವಾದಗಳು ಎಂದು ಎಮೋಷನಲ್ ನೋಟ್ ಹಂಚಿಕೊಂಡಿದ್ದಾರೆ.

ಇನ್ನೂ ಜೂನಿಯರ್‍ ಎನ್.ಟಿ.ಆರ್‍ ಹುಟ್ಟುಹಬ್ಬದ ದಿನವೇ ಸೀನಿಯರ್‍ ಎನ್.ಟಿ.ಆರ್‍ ಶತಮಾನೋತ್ಸವ ಜಯಂತಿ ಉತ್ಸವವನ್ನು ಸಹ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಿನಿರಂಗದ ದೊಡ್ಡ ದೊಡ್ಡ ಸ್ಟಾರ್‍ ಗಳು ಹಾಜರಾಗಿದ್ದರು. ಇನ್ನೂ ಜೂನಿಯರ್‍ ಎನ್.ಟಿ.ಆರ್‍ ರವರ ದೇವರ ಎಂಬ ಸಿನೆಮಾದ ಟೈಟಲ್ ಸಹ ರಿಲೀಸ್ ಆಗಿದ್ದು, ಭಾರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಇದರ ಜೊತೆಗೆ NTR31 ಹಾಗೂ ಬಾಲಿವುಡ್ ನಲ್ಲಿ ವಾರ್‍-2 ಸಿನೆಮಾದಲ್ಲೂ ಸಹ ನಟಿಸಲಿದ್ದಾರೆ.