ಅರ್ಧರಾತ್ರಿ ನಡುರಸ್ತೆಯಲ್ಲಿ ಮಲಗಿದ ಜನಸೇನ ಮುಖ್ಯಸ್ಥ ಪವನ್ ಕಲ್ಯಾಣ್, ವೈರಲ್ ಆದ ಪೊಟೋಸ್…..!

Follow Us :

ತೆಲುಗು ಸಿನರಿಂಗದ ಸ್ಟಾರ್‍ ನಟ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ರವರು ನಡುರಸ್ತೆಯಲ್ಲಿ ಮಲಗಿದ್ದು ಈ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಹಗರಣವೊಂದಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಮಾಜಿ ಮುಖ್ಯಮಂತ್ರ ಚಂದ್ರಬಾಬು ನಾಯ್ಡು ರವರನ್ನು ಭೇಟಿಯಾಗುವ ಉದ್ದೇಶದಿಂದ ತೆರಳುತ್ತಿದ್ದ ಪವನ್ ಕಲ್ಯಾಣ್ ರವರನ್ನು ಪೊಲೀಸರು ತಡೆದಿದ್ದು, ಅದನ್ನು ಖಂಡಿಸಿದ ಅವರು ರಸ್ತೆಯಲ್ಲೇ ಮಲಗಿ ಪ್ರತಿಭಟನೆ ನಡೆಸಿದ್ದಾರೆ.

ಇನ್ನೇನು ಕೆಲವೇ ತಿಂಗಳುಗಳಲ್ಲಿ ಆಂಧ್ರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈಗಾಗಲೇ ಚುನಾವಣಾ ಕಾವು ಜೋರಾಗಿದೆ. ಜೊತೆಗೆ ಅನೇಕ ರಾಜಕೀಯ ಘಟನೆಗಳು ಸಹ ನಡೆಯುತ್ತಿವೆ. ಸೆ.9 ರಂದು ಆಂಧ್ರ ಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ರವರನ್ನು ಸ್ಕಿಲ್ ಡೆವೆಲೆಪ್ ಮೆಂಟ್ ಯೋಜನೆಯ ಅವ್ಯವಹಾರದ ಪ್ರಕರಣದಲ್ಲಿ ಬಂಧಿಸಿದ್ದು, ಟಿಡಿಪಿ ನಾಯಕರು ಹಾಗೂ ಕಾರ್ಯಕರ್ತರು ಭಾರಿ ವಿರೋಧ ವ್ಯಕ್ತಪಡಿಸಿ ಅನೇಕ ಕಡೆ ಪ್ರತಿಭಟನೆ ಗಳನ್ನು ಸಹ ನಡೆಸುತ್ತಿದ್ದಾರೆ. ಅದರ ಬೆನ್ನಲ್ಲೇ ಪವನ್ ಕಲ್ಯಾಣ್ ರವರೂ ಸಹ ಚಂದ್ರಬಾಬು ರವರನ್ನು ಭೇಟಿಯಾಗಲು ಹೋಗಿದ್ದು, ಅವರನ್ನು ಪೊಲೀಸರು ತಡೆದಿದ್ದಾರೆ.

ಸೆ.9 ರಂದು ಆಂಧ್ರಪ್ರದೇಶದ ಸಿಐಡಿ ತಂಡ ಚಂದ್ರಬಾಬು ನಾಯ್ಡು ರವರನ್ನು ಬಂಧಿಸಿದೆ. ವಿಜಯವಾಡದಲ್ಲಿ ಚಂದ್ರಬಾಬು ನಾಯ್ಡುವರನ್ನು ಇರಿಸಲಾಗಿತ್ತು. ಅವರನ್ನು ಭೇಟಿಯಾಗಲು ಪವನ್ ಕಲ್ಯಾಣ್ ರವರು ಸಹ ಬಂದಿದ್ದರು. ಆದರೆ ಅವರ ಭೇಟಿಗೆ ಪೊಲೀಸರು ಅವಕಾಶ ನೀಡಿರಲಿಲ್ಲ. ಬಳಿಕ ಹೈದರಾಬಾದ್ ನಿಂದ ವಿಶೇಷ ವಿಮಾನದ ಮೂಲಕ ವಿಜಯವಾಡಕ್ಕೆ ಬರಲು ಪವನ್ ಕಲ್ಯಾಣ್ ಮುಂದಾಗಿದ್ದಾರೆ. ಆದರೆ ಪೊಲೀಸರು ವಿಶೇಷ ವಿಮಾನ ಹಾರಾಟವನ್ನು ಸಹ ರದ್ದು ಮಾಡಿದ್ದರು. ಬಳಿಕ ರಸ್ತೆ ಮಾರ್ಗವಾಗಿ ಹೈದರಾಬಾದ್ ನಿಂದ ವಿಜಯವಾಡಕ್ಕೆ ಸಾವಿರಾರು ಸಂಖ್ಯೆಯ ಬೆಂಬಲಿಗರೊಂದಿಗೆ ವಿಜಯವಾಡ ಕಡೆಗೆ ಆಗಮಿಸುತ್ತಿದ್ದರು.  ಮತ್ತೆ ಪವನ್ ಕಲ್ಯಾಣ್ ರವರನ್ನು ಎನ್.ಟಿ.ಆರ್‍ ಜಿಲ್ಲೆಯ ಚೆಕ್ ಪೋಸ್ಟ್ ಬಳಿ ಪವನ್ ಕಲ್ಯಾಣ್ ಹಾಗೂ ಅವರ ವಾಹನಗಳನ್ನು ತಡೆದರು. ಬಳಿಕ ವಾಹನದಿಂದ ಇಳಿದು ನಡೆದುಕೊಂಡು ವಿಜಯವಾಡ ತಲುಪುವುದಾಗಿ ಪಾದಯಾತ್ರೆ ಆರಂಭಿಸಿದರು. ಅದಕ್ಕೂ ಸಹ ಪೊಲೀಸರು ಅಡ್ಡಿಪಡಿಸಿದ್ದಾರೆ. ಈ ವೇಳೆ ಪವನ್ ಕಲ್ಯಾಣ್ ಹೈ ವೇ ರಸ್ತೆಯಲ್ಲೇ ಮಲಗಿಬಿಟ್ಟರು. ಈ ವೇಳೆ ಪವನ್ ಕಲ್ಯಾಣ್ ರವರ ಮನವೊಲಿಸಲು ಪೊಲೀಸರು ತುಂಬಾನೆ ಪ್ರಯತ್ನಗಳನ್ನು ಮಾಡಿದರು. ಪವನ್ ಕಲ್ಯಾಣ್ ರವರು ಪಟ್ಟು ಬಿಡದ ಕಾರಣದ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ಇನ್ನೂ ಈ ಬಗ್ಗೆ ಪೊಲಿಸರು ಮಾಹಿತಿ ನೀಡಿದ್ದು, ಪವನ್ ಕಲ್ಯಾಣ್ ಹಾಗೂ ಮನೋಹರ್‍ ರವರನ್ನು ನಾವು ವಶಕ್ಕೆ ಪಡೆದಿದ್ದೇವೆ. ಇದೊಂದು ಪ್ರವೆಂಟಿವ್ ಬಂಧವಾಗಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸುವುದಿಲ್ಲ ಎಂದು ತಿಳಿಸಿದ್ದಾರೆ. ಇನ್ನೂ ಸೆ.9 ರಂದು ಹಗರಣವೊಂದರಲ್ಲಿ ಭಾಗಿಯಾದ ಆರೋಪದ ಮೇರೆಗೆ ಬಂಧನವಾದ ಮಾಜಿ ಸಿಎಂ ಚಂದ್ರಬಾಬುನಾಯ್ಡು ರವರನ್ನು ಇಂದು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ ಎಂದು ತಿಳಿದುಬಂದಿದೆ.