ಕ್ಷುಲ್ಲಕ ಕಾರಣಕ್ಕೆ ನಡೆದೇ ಹೋಯ್ತು ಕೊಲೆ, ಬಿರಿಯಾನಿಗೆ ಎಕ್ಸ್ಟ್ರಾ ಮೊಸರು ಕೇಳಿದ್ದೇ ತಪ್ಪಾಯ್ತಾ?

ಪ್ರಪಂಚದಲ್ಲಿ ಮನೆ, ಹಣ, ಆಸ್ತಿ ಹಾಗೂ ಹೆಣ್ಣು ಸೇರಿದಂತೆ ಕೆಲವೊಂದು ವಿಚಾರಗಳಿಗಾಗಿ ಕೊಲೆ, ಹಲ್ಲೆಯಂತಹ ಪ್ರಕರಣಗಳು ನಡೆಯುತ್ತಿರುತ್ತವೆ. ಆದರೆ ಕ್ಷುಲ್ಲಕ ಕಾರಣಗಳಿಗೂ ಸಹ ಕೊಲೆಗಳು ನಡೆಯುತ್ತಿರುತ್ತವೆ. ಇದೀಗ ಬಿರಿಯಾನಿಗೆ ಹೆಚ್ಚುವರಿ ಮೊಸರು ಕೇಳಿದ್ದಕ್ಕಾಗಿ ಗ್ರಾಹಕನನ್ನು…

ಪ್ರಪಂಚದಲ್ಲಿ ಮನೆ, ಹಣ, ಆಸ್ತಿ ಹಾಗೂ ಹೆಣ್ಣು ಸೇರಿದಂತೆ ಕೆಲವೊಂದು ವಿಚಾರಗಳಿಗಾಗಿ ಕೊಲೆ, ಹಲ್ಲೆಯಂತಹ ಪ್ರಕರಣಗಳು ನಡೆಯುತ್ತಿರುತ್ತವೆ. ಆದರೆ ಕ್ಷುಲ್ಲಕ ಕಾರಣಗಳಿಗೂ ಸಹ ಕೊಲೆಗಳು ನಡೆಯುತ್ತಿರುತ್ತವೆ. ಇದೀಗ ಬಿರಿಯಾನಿಗೆ ಹೆಚ್ಚುವರಿ ಮೊಸರು ಕೇಳಿದ್ದಕ್ಕಾಗಿ ಗ್ರಾಹಕನನ್ನು ಹೋಟೆಲ್ ಸಿಬ್ಬಂದಿ ಕೊಲೆ ಮಾಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

ಹೈದರಾಬಾದ್ ನ ಹೋಟೆಲ್ ಒಂದಕ್ಕೆ ಚಂದ್ರಯ್ಯನಗುಟ್ಟದ ನಿವಾಸಿ ಲಿಯಾಕತ್ ಎಂಬಾತ ಬಿರಿಯಾನಿ ಸೇವಿಸಲು ಹೋಗಿದ್ದಾರೆ. ಈ ವೇಳೆ ಹೋಟೆಲ್ ನಲ್ಲಿ ಬಿರಿಯಾನಿ ಸಹ ಆರ್ಡರ್‍ ಮಾಡಿದ್ದಾನೆ. ಬಿರಿಯಾನಿಗೆ ಹೆಚ್ಚುವರಿ ಮೊಸರು ಕೊಡುವಂತೆ ಸಿಬ್ಬಂದಿಯನ್ನು ಕೇಳಿದ್ದಾರೆ. ಇನ್ನೂ ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ವಾಗ್ವಾದ ಗಂಭೀರ ಸ್ವರೂಪ ಪಡೆದುಕೊಂಡು ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಗ್ರಾಹಕ ಲಿಯಾಕತ್ ಮೇಲೆ ಹೋಟೆಲ್ ಸಿಬ್ಬಂದಿ ಸಹ ಹಲ್ಲೆ ಮಾಡಿದ್ದಾರೆ. ಈ ಸುದ್ದಿ ಪೊಲೀಸರಿಗೆ ತಲುಪಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಿಯಾಕತ್ ಹಾಗೂ ಹೋಟೆಲ್ ಸಿಬ್ಬಂದಿಯನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಇದೇ ಸಮಯದಲ್ಲಿ ಭಾರಿ ಪೆಟ್ಟು ತಿಂದ ಲಿಯಾಕತ್ ಮೂರ್ಚೆ ಹೋಗಿದ್ದಾನೆ. ಕೂಡಲೇ ಪೊಲೀಸರು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಲಿಯಾಕತ್ ಮೃತಪಟ್ಟಿದ್ದಾನೆ. ಇನ್ನೂ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಲಿಯಾಕತ್ ಶವವನ್ನು ಶವಾಗಾರಕ್ಕೆ ರವಾನಿಸಿ ಬಳಿಕ ಆತನ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಇನ್ನೂ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಲ್ಲೆ ಮಾಡಿದ ಹೋಟೆಲ್ ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ಕೈಗೆತ್ತಿಕೊಂಡಿದ್ದಾರೆ.