Eye bro ಮಾಡಿಸಿಕೊಂಡಿದ್ದಕ್ಕೆಪತ್ನಿಗೆ ತ್ರಿವಳಿ ತಲಾಕ್ ನೀಡಿದ ಪತಿ, ವಿಡಿಯೋ ಕಾಲ್ ನಲ್ಲೇ ತಲಾಕ್ ಎಂದ ಪತ್ನಿ…..!

ಮಹಿಳೆಯೊಬ್ಬರು ಬ್ಯೂಟಿ ಪಾರ್ಲರ್‍ ಗೆ ತೆರಳಿ ಐಬ್ರೋ ಮಾಡಿಸಿಕೊಂಡಿರುವ ಕಾರಣದಿಂದ ಪತಿಯಿಂದ ತಲಾಕ್ ಪಡೆದುಕೊಂಡಿದ್ದಾಳೆ. ಐಬ್ರೋ ಮಾಡಿಸಿಕೊಂಡಿದ್ದರಿಂದ ಪತಿಯೊಬ್ಬ ವಿಡಿಯೋ ಕಾಲ್ ನಲ್ಲೇ ತ್ರಿವಳಿ ತಲಾಖ್ ನೀಡಿದ್ದಾರೆ ಎನ್ನಲಾಗಿದೆ. ಈ ಘಟನೆ ಉತ್ತರ ಪ್ರದೇಶದ…

ಮಹಿಳೆಯೊಬ್ಬರು ಬ್ಯೂಟಿ ಪಾರ್ಲರ್‍ ಗೆ ತೆರಳಿ ಐಬ್ರೋ ಮಾಡಿಸಿಕೊಂಡಿರುವ ಕಾರಣದಿಂದ ಪತಿಯಿಂದ ತಲಾಕ್ ಪಡೆದುಕೊಂಡಿದ್ದಾಳೆ. ಐಬ್ರೋ ಮಾಡಿಸಿಕೊಂಡಿದ್ದರಿಂದ ಪತಿಯೊಬ್ಬ ವಿಡಿಯೋ ಕಾಲ್ ನಲ್ಲೇ ತ್ರಿವಳಿ ತಲಾಖ್ ನೀಡಿದ್ದಾರೆ ಎನ್ನಲಾಗಿದೆ. ಈ ಘಟನೆ ಉತ್ತರ ಪ್ರದೇಶದ ಕಾನ್ಪುರ್‍ ನಲ್ಲಿ ನಡೆದಿದೆ ಎಂದು ಹೇಳಲಾಗಿದೆ.

ಉತ್ತರ ಪ್ರದೇಶದ ಕಾನ್ಪುರ್‍ ನಲ್ಲಿ ಐಬ್ರೋ ಮಾಡಿಸಿಕೊಂಡ ಪತ್ನಿಗೆ ವಿಚ್ಚೇದನ ನೀಡಿದ ವಿಚಿತ್ರ ಘಟನೆಯೊಂದು ನಡೆದಿದೆ. ವಿಡಿಯೋ ಕಾಲ್ ಮೂಲಕವೇ ಪತಿ ತ್ರಿವಳಿ ತಲಾಕ್ ನೀಡಿದ್ದಾರಂತೆ. ಬಳಿಕ ಆ ಮಹಿಳೆ ಅನೇಕ ಬಾರಿ ಪತಿಗೆ ಕರೆ ಮಾಡಿದರೂ ಸಹ ಆತ ಕರೆ ಸ್ವೀಕರಿಸಿಲ್ಲವಂತೆ. ನಾನು ನನ್ನ ಪತಿಗೆ ಅನೇಕ ಬಾರಿ ಕರೆ ಮಾಡಿದೆ. ಆದರೆ ಅವರು ನನ್ನ ಕರೆಯನ್ನು ಸ್ವೀಕರಿಸಲೇ ಇಲ್ಲ. ಬಳಿಕ ನನ್ನ ಅತ್ತೆ ಮಾವನಿಗೆ ಕರೆ ಮಾಡಿದೆ. ಅವರೂ ಸಹ ಮಗನಿಗೆ ಬೆಂಬಲ ನೀಡಿದರು. ಬಳಿಕ ನಾನು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದೆ ಎಂದು ಹೇಳಿದ್ದಾರೆ. ಇನ್ನೂ ಪತಿ, ಮಾವ, ಅತ್ತೆ ಸೇರಿದಂತೆ ಐವರು ಮಂದಿಯ ಮೇಲೆ ದೂರು ದಾಖಲು ಮಾಡಿದ್ದಾಳೆ.

ಕಾನ್ಪುರ್‍ ದ ಕುಲಿ ಬಜಾರ್‍ ಪ್ರದೇಶದ ಲಾಲಿ ಗುಲ್ಸಾಬ ಎನ್ನುಬ ಮಹಿಳೆ 2022 ರ ಜನವರಿ 17 ರಂದು ಪ್ರಯಾಗ್ ರಾಜ್ ನಿವಾಸಿ ಸಲೀಂ ಎಂಬಾತನನ್ನು ಮದುವೆಯಾದರು. ಮದುವೆಯಾದ ಬಳಿಕ ಈ ಜೋಡಿ ಪ್ರಯಾಗ್ ರಾಜ್ ನ ಪುಲ್ ಪುರದಲ್ಲಿ ವಾಸ ಮಾಡುತ್ತಿದ್ದರು. ಸಲೀಂ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಮಹಿಳೆ ನೀಡಿದ ದೂರಿನಂತೆ, ಕಳೆದ ಆ.23, 2023 ರಂದು ಕೆಲಸಕ್ಕಾಗಿ ದುಬೈಗೆ ಹೋದರು. ಮದುವೆಯಾದಾಗಿನಿಂದಲೂ ಅತ್ತೆ ಮಾವ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಲೇ ಇದ್ದಾರೆ. ನಾನು ನನ್ನ ತವರು ಮನೆಗೆ ಹೋಗಿದ್ದೆ. ಅಲ್ಲಿಂದ ಸಲೀಂ ಜೊತೆಗೆ ವಿಡಿಯೋ ಕಾಲ್ ಮೂಲಕ ಮಾತನಾಡುತ್ತಿದ್ದೆ. ಅ.4 ರಂದು ಸಲೀಂ ಕರೆ ಮಾಡಿದ್ದ ಈ ವೇಳೆ ಐಬ್ರೋ ಮಾಡಿಸಿಕೊಂಡಿದ್ದನ್ನು ನೋಡಿ ಐಬ್ರೋ ಮಾಡಿಸಿಕೊಂಡಿದ್ದೀಯಾ ಎಂದು ಪ್ರಶ್ನೆ ಮಾಡಿದ್ದಾರೆ. ಹೌದು ಬ್ಯೂಟಿ ಪಾರ್ಲರ್‍ ನಲ್ಲಿ ಐಬ್ರೋ ಮಾಡಿಸಿಕೊಂಡಿದ್ದೇನೆ ಎಂದು ಹೇಳಿದ್ದೆ. ಆಗ ನನ್ನ ಗಂಡ ಕೋಪಗೊಂಡಿದ್ದಾನೆ.

ನನ್ನ ಪತಿ ಹಳೆ ಕಾಲದ ವ್ಯಕ್ತಿಯಾಗಿದ್ದಾರೆ. ನಾನು ಮೇಕಪ್ ಮಾಡುವುದು, ಬ್ಯೂಟಿ ಪಾರ್ಲರ್‍ ಗೆ ಹೋಗುವುದು ಇಷ್ಟವಿಲ್ಲ. ನಾನು ಐಬ್ರೋ ಮಾಡಿಸಿಕೊಂಡಿದ್ದರಿಂದ ಕೆಲಸ ಸಮಯ ಸಿಟ್ಟಾಗಿರಬಹುದು, ಮತ್ತೆ ಸರಿಯಾಗುತ್ತಾರೆ ಅಂದುಕೊಂಡಿದ್ದೆ. ಆದರೆ ಅದು ಆಗಲಿಲ್ಲ. ಈ ವಿಚಾರದಿಂದಲೇ ಗಲಾಟೆಯಾಗಿ ತ್ರಿವಳಿ ತಲಾಖ್ ನೀಡುತ್ತಿದ್ದಾನೆ. ನನಗೆ ನ್ಯಾಯ ನೀಡಿ ಎಂದು ದೂರ ನೀಡಿದ್ದಾರೆ.