ತಂದೆ ಯಾರೂ ಅಂತ ಹೇಳಿಲ್ಲ, ಆದರೆ ಬೇಬಿ ಬಂಪ್ ವಿಡಿಯೋ ಶೇರ್ ಮಾಡಿದ ಬಿಕಿನಿ ಬ್ಯೂಟಿ ಇಲಿಯಾನಾ…!

ಗೋವಾ ಮೂಲದ ನಟಿ ಇಲಿಯಾನಾ ಇತ್ತೀಚಿಗೆ ಸದಾ ಸುದ್ದಿಯಲ್ಲೇ ಇರುತ್ತಾರೆ. ಅದರಲ್ಲೂ ಕಳೆದ ಏ.18 ರಂದು ಇಲಿಯಾನಾ ಶಾಕಿಂಗ್ ಸುದ್ದಿಯೊಂದನ್ನು ಶೇರ್‍ ಮಾಡಿದ್ದರು. ತಾನು ಗರ್ಭಿಣಿಯಾಗಿದ್ದೇನೆ ಎಂಬ ಪೋಸ್ಟ್ ಮೂಲಕ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದರು. ಆಕೆಗೆ ಮದುವೆಯಾಗಿಲ್ಲ. ಲಿವಿಂಗ್ ರಿಲೇಷನ್ ಶಿಪ್ ನಲ್ಲಿರುವ ಬಗ್ಗೆ ಸ್ಪಷ್ಟನೆ ಸಹ ಇಲ್ಲ ಅಂತಹ ಸಮಯದಲ್ಲಿ ಇಲಿಯಾನಾ ಗರ್ಭಿಣಿಯಾಗಿದ್ದಾಗಿ ಘೋಷಣೆ ಮಾಡಿದ್ದು, ಎಲ್ಲರೂ ಆಕೆಯ ತಂದೆ ಯಾರು ಎಂಬ ಅನುಮಾನಗಳಲ್ಲಿ ಮುಳುಗಿದರು. ಇದೀಗ ಆಕೆ ಮತ್ತೊಂದು ಪೋಸ್ಟ್ ಮೂಲಕ ಸುದ್ದಿಯಾಗಿದ್ದಾರೆ.

ಸುಮಾರು ವರ್ಷಗಳಿಂದ ಕೆಲವೊಂದು ಕಾರಣದಿಂದ ಸಿನೆಮಾಗಳಿಂದ ದೂರವಾದರೂ ಸಹ ಸೋಷಿಯಲ್ ಮಿಡಿಯಾದಲ್ಲಿ ಅಭಿಮಾನಿಗಳೊಂದಿಗೆ ಟಚ್ ನಲ್ಲಿದ್ದರು. ಸದಾ ಬಿಕಿನಿ ಪೊಟೋಗಳ ಮೂಲಕ ಸೋಷಿಯಲ್ ಮಿಡಿಯಾ ಶೇಕ್ ಮಾಡುತ್ತಿದ್ದ ಇಲಿಯಾನಾ ತಾನು ಗರ್ಭಿಣಿಯೆಂದು ಪೋಸ್ಟ್ ಒಂದನ್ನು ಮಾಡಿದ್ದರು. ಎರಡು ಪೊಟೋಗಳನ್ನು ಹಂಚಿಕೊಂಡು ನನ್ನ ಚಿನ್ನಾರಿಗಾಗಿ ಕಾಯುತ್ತಿದ್ದೇನೆ ಎಂದು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಬಳಿಕ ಇಲಿಯಾನಾಗೆ ಮದುವೆಯಾಗಿಲ್ಲ ಗರ್ಭಿಣಿಯೆಂದು ಘೋಷಣೆ ಮಾಡಿದ್ದು ಏಕೆ, ಆ ಮಗುವಿಗೆ ತಂದೆ ಯಾರಿರಬಹುದು ಎಂಬೆಲ್ಲಾ ಅನುಮಾನಗಳು ಅನೇಕರಲ್ಲಿ ಹುಟ್ಟಿಕೊಂಡಿವೆ. ಇದೀಗ ಆಕೆ ಮತ್ತೊಂದು ಪೋಸ್ಟ್ ಹಂಚಿಕೊಂಡು ಮತ್ತೆ ನೆಟ್ಟಿಗರ ತಲೆಯಲ್ಲಿ ಹುಳುಗಳನ್ನು ಬಿಟ್ಟಿದ್ದಾರೆ.

ಇದೀಗ ಇಲಿಯಾನಾ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಆಕೆ ತನ್ನ ಬೇಬಿ ಬಂಪ್ ಶೋ ಮಾಡಿದ್ದಾರೆ. ತನ್ನ ಇನ್ಸ್ಟಾಗ್ರಾಂ ಸ್ಟೇಟಸ್ ನಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಇನ್ನೂ ತಾನು ಗರ್ಭಿಣಿ ಎಂದು ಘೋಷಣೆ ಮಾಡಿದ ಬಳಿಕ ಆಕೆ ತನ್ನ ಬೇಬಿ ಬಂಪ್ ಶೋ ಮಾಡಿದ್ದಾರೆ. ಇನ್ನೂ ಇಲಿಯಾನಾ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಮತ್ತೊಮ್ಮೆ ಆಕೆಯ ತಂದೆ ಯಾರು ಎಂಬ ಪ್ರಶ್ನೆಗಳು ಎದುರಾಗಿದೆ. ಇಲಿಯಾನಾ ಗರ್ಭಕ್ಕೆ ಕಾರಣ ಯಾರು ಎಂಬ ಚರ್ಚೆಗಳು ಜೊರಾಗಿಯೇ ನಡೆಯುತ್ತಿವೆ. ಆದರೆ ಈ ಬಗ್ಗೆ ಇಲಿಯಾನಾ ಮಾತ್ರ ಯಾವುದೇ ಸ್ಪಷ್ಟನೆ ನೀಡಿಲ್ಲ.

ಇನ್ನೂ ಇಲಿಯಾನಾ ಹಾಗೂ ಕತ್ರಿನಾ ಕೈಫ್ ಸಹೋದರ ಸಬಾಸ್ಟಿಯನ್ ಜೊತೆಗೆ ಡೇಟಿಂಗ್ ನಲ್ಲಿದ್ದಾರೆ ಎಂಬ ರೂಮರ್‍ ಕೇಳಿಬಂದಿತ್ತು. ಇದೀಗ ಇಲಿಯಾನಾ ಗರ್ಭಿಣಿಯಾಗಲು ಆತನೇ ಕಾರಣ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ. ಇನ್ನೂ ಈ ಸುದ್ದಿಯನ್ನು ಇಲಿಯಾನಾ ಖಂಡಿಸಲೂ ಸಹ ಇಲ್ಲ. ಸಮರ್ಥನೆ ಸಹ ಮಾಡಿಲ್ಲ. ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಇಲಿಯಾನಾ ಎಲ್ಲರನ್ನೂ ಗೊಂದಲದಲ್ಲಿ ದೂಡಿದ್ದಾರೆ.