Film News

ಕೋಳಿಗೆ ಇಲ್ಲದ ನೋವು ನಿನಗೇಕೆ ಎಂದ ನೆಟ್ಟಿಗನಿಗೆ ಸ್ಟ್ರಾಂಗ್ ಕೌಂಟರ್ ಕೊಟ್ಟ ಹಾಟ್ ಆಂಕರ್ ರಶ್ಮಿ ಗೌತಮ್….!

ತೆಲುಗು ಕಿರುತೆರೆಯಲ್ಲಿ ಅನೇಕ ನಿರೂಪಕಿಯರು ಕಾಣಿಸಿಕೊಂಡಿದ್ದಾರೆ. ಆದರೆ ಅವರಲ್ಲೂ ಕೆಲವೊಬ್ಬರು ತುಂಬಾನೆ ಪ್ಯಾಪುಲರ್‍ ಆಗಿದೆ. ಅತ್ತ ಸಿನೆಮಾಗಳಲ್ಲೂ ಸಹ ಸದ್ದು ಮಾಡುತ್ತಾ, ಇತ್ತ ಕಿರುತೆರೆಯಲ್ಲೂ ಸದ್ದು ಮಾಡುತ್ತಾ ತಮ್ಮದೇ ಆದ ಕ್ರೇಜ್ ಸಂಪಾದಿಸಿಕೊಂಡಿದ್ದಾರೆ. ಅವರ ಪೈಕಿ ನಟಿ ಹಾಗೂ ಆಂಕರ್‍ ರಶ್ಮಿ ಗೌತಮ್ ಸಹ ಒಬ್ಬರಾಗಿದ್ದಾರೆ. ಕಿರುತೆರೆ, ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಈಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿರುತ್ತಾರೆ. ಇದೀಗ ನೆಟ್ಟಿಗನೊಬ್ಬನಿಗೆ ಸ್ಟ್ರಾಂಗ್ ಕೌಂಟರ್‍ ನೀಡಿದ್ದಾರೆ. ಆಕೆ ಆ ರೀತಿಯ ಕೌಂಟರ್‍ ಕೊಡಲು ಕಾರಣವಾದರೂ ಏನು ಎಂಬ ವಿಚಾರಕ್ಕೆ ಬಂದರೇ..

ನಟಿ ಕಂ ಆಂಕರ್‍ ರಷ್ಮಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ.  ಆಗಾಗ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುವ ಈಕೆ ಆಗಾಗ ಮೂಕ ಜೀವಿಗಳ ಮೇಲೆ ಯಾರಾದರೂ ಹಲ್ಲೆ ಅಥವಾ ಅವುಗಳನ್ನು ಹಿಂಸೆ ಮಾಡಿದರೇ ಖಾರವಾಗಿಯೇ ಪ್ರತಿಕ್ರಿಯೆ ನೀಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಅನೇಕ ಬಾರಿ ಪ್ರಾಣಿಗಳನ್ನು ಹಿಂಸೆ ಮಾಡುವವರಿಗೆ ಶಿಕ್ಷೆ ಕೊಡಿಸಲು ಸಹ ಹೋರಾಟ ಮಾಡುತ್ತಿರುತ್ತಾರೆ. ಇದೀಗ ಆಕೆ ಮತ್ತೊಮ್ಮೆ ಸೋಷಿಯಲ್ ಮಿಡಿಯಾ ವೇದಿಕೆಯಾಗಿ ಖಾರವಾಗಿ ಸ್ಪಂಧಿಸಿದ್ದಾರೆ. ಸಂಕ್ರಾಂತಿ ಹಬ್ಬದ ಸಮಯದಲ್ಲಿ ಕೆಲವೊಂದು ಪ್ರದೇಶಗಳಲ್ಲಿ ಕೋಳಿ ಪಂದ್ಯಗಳನ್ನು ನೆರವೇರಿಸುತ್ತಿರುತ್ತಾರೆ. ಈ ವೇಳೆ ವೈದ್ಯರೊಬ್ಬರು ಸಂಕ್ರಾಂತಿ ಹಬ್ಬದ ಸಂದರ್ಭವಾಗಿ ಎರಡು ಬಾರಿ ಕೋಳಿಪಂದ್ಯದಲ್ಲಿ ಗೆದ್ದಿರುವುದಾಗಿ, ಈ ಹಬ್ಬವನ್ನು ತುಂಬಾ ಎಂಜಾಯ್ ಮಾಡಿದ್ದೇನೆ ಎಂದು ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದರು.

ಇನ್ನೂ ವೈದ್ಯರೊಬ್ಬರು ತಾನು ಸಂಕ್ರಾಂತಿ ಹಬ್ಬದ ನಿಮಿತ್ತ ನಡೆದ ಕೋಳಿಪಂದ್ಯದಲ್ಲಿ ಎರಡು ಬಾರಿ ಜಯಗಳಿಸಿದ್ದಾಗಿ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ಅನ್ನು ಆಂಕರ್‍ ರಶ್ಮಿ ಸ್ಟ್ರೀನ್ ಶಾಟ್ ತೆಗೆದುಕೊಂಡು ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡು, ನಿನ್ನ ಡಾಕ್ಟರ್‍ ಸರ್ಟಿಫಿಕೇಟ್ ಅನ್ನು ಚರಂಡಿಯಲ್ಲಿ ಬಿಸಾಡಿ, ಇಂತಹ ಹಿಂಸೆಯನ್ನು ಪ್ರೋತ್ಸಾಹಿಸುತ್ತೀರಾ ಇದು ಸರಿಯಲ್ಲ ಎಂದು ಟ್ವೀಟ್ ಮಾಡಿದ್ದರು. ಇನ್ನೂ ಈ ಟ್ವೀಟ್ ಮೇಲೆ ಅನೇಕ ಚರ್ಚೆಗಳು ನಡೆದವು. ಈ ಹಾದಿಯಲ್ಲೇ ಒಬ್ಬ ನೆಟ್ಟಿಗ ಈ ಬಗ್ಗೆ ಕಾಮೆಂಟ್ ಸಹ ಮಾಡಿದ್ದರು. ಆ ಕಾಮೆಂಟ್ ಗೆ ರಶ್ಮಿ ಸ್ಟ್ರಾಂಗ್ ಕೌಂಟರ್‍ ನೀಡಿದ್ದಾರೆ.

ಆ ನೆಟ್ಟಿಗ ಕೋಳಿಗೆ ಇಲ್ಲದ ದುಃಖ ನಿಮಗೇಕೆ ಮೇಡಂ, ಇದು ಹೆಮ್ಮೆಯಲ್ಲ, ನಮ್ಮ ಸಂಪ್ರದಾಯ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗೆ ಕೌಂಟರ್‍ ನೀಡಿದ ರಶ್ಮಿ, ಕೋಳಿಗೆ ದುಃಖ ಇಲ್ಲ ಎಂದು ನಿನಗೆ ಗೊತ್ತಾ, ಆದರೂ ನೀವು ಮನುಷ್ಯರ ಮಧ್ಯೆ ಪಂದ್ಯಗಳನ್ನು ಏಕೆ ಇಡುತ್ತಿಲ್ಲ. ಗ್ಲಾಡಿಯೇಟರ್‍ ಹೋರಾಟಗಳು ಸಂಪ್ರದಾಯದ ಭಾಗವೇ ಆಗಿದ್ದು, ಅದನ್ನು ಸ್ವೀಕರಿಸಿ ಸಾಯುವವರೆಗೂ ಮನುಷ್ಯರನ್ನು ಕಳುಸಹಿಬೇಕು ಎಂದು ರಶ್ಮಿ ಖಾರವಾಗಿ ರಿಯಾಕ್ಟ್ ಆಗಿದ್ದಾರೆ.

Most Popular

To Top