ಅವಕಾಶ ಕೊಟ್ರೆ ಆ ಸ್ಟಾರ್ ನಟಿಯನ್ನು ಮದುವೆಯಾಗುತ್ತೇನೆ ಎಂದ RX ಬ್ಯೂಟಿ ಪಾಯಲ್, ಆ ನಟಿ ಯಾರು ಗೊತ್ತಾ?

ಮೊದಲನೇ ಸಿನೆಮಾದ ಮೂಲಕವೇ ಭಾರಿ ಕ್ರೇಜ್ ಪಡೆದುಕೊಂಡ ನಟಿ ಪಾಯಲ್ ರಾಜ್ ಪೂತ್ ಸೌಂದರ್ಯ, ನಟನೆ ಇದ್ದರೂ ಸ್ಟಾರ್‍ ಡಂ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾದರು. ಆದರೂ ಸಹ ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. RX100…

ಮೊದಲನೇ ಸಿನೆಮಾದ ಮೂಲಕವೇ ಭಾರಿ ಕ್ರೇಜ್ ಪಡೆದುಕೊಂಡ ನಟಿ ಪಾಯಲ್ ರಾಜ್ ಪೂತ್ ಸೌಂದರ್ಯ, ನಟನೆ ಇದ್ದರೂ ಸ್ಟಾರ್‍ ಡಂ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾದರು. ಆದರೂ ಸಹ ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. RX100 ಸಿನೆಮಾದ ಮೂಲಕ ಭಾರಿ ಕ್ರೇಜ್ ಪಡೆದುಕೊಂಡ ಪಾಯಲ್ ಗೆ ಅವಕಾಶಗಳು ಬಂದರೂ ಸಹ ಆಕೆಗೆ ಬಿಗ್ ಬ್ರೇಕ್ ನೀಡುವಂತಹ ಸಿನೆಮಾ ಸಿಗಲಿಲ್ಲ ಎಂದೇ ಹೇಳಬಹುದು. ಇದೀಗ ಪಾಯಲ್ ಅವಕಾಶ ಸಿಕ್ಕರೇ ಆ ನಟಿಯನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದು, ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

RX100 ಸಿನೆಮಾದ ನಿರ್ದೇಶಕ ಅಜಯ್ ಭೂಪತಿ ರವರ ಜೊತೆಗೆ ಪಾಯಲ್ ಮತ್ತೊಂದು ಸಿನೆಮಾದಲ್ಲಿ ನಟಿಸಿದ್ದಾರೆ. ಮಂಗಳವಾರಂ ಎಂಬ ಸಿನೆಮಾದಲ್ಲಿ ಪಾಯಲ್ ವಿಭಿನ್ನವಾದ ಪಾತ್ರವನ್ನು ಪೋಷಣೆ ಮಾಡಿದ್ದಾರೆ. RX100 ಸಿನೆಮಾದಂತೆ ಬ್ಲಾಕ್ ಬ್ಲಸ್ಟರ್‍ ಹಿಟ್ ಮೂಲಕ ತನ್ನ ಕೆರಿಯರ್‍ ಬದಲಾಗುವಂತಹ ಸಿನೆಮಾ ಬೇಕೆಂದು ಅಜಯ್ ಭೂಪತಿಯವರ ಬಳಿ ಪಾಯಲ್ ಕೇಳಿದ್ದರಂತೆ. ಅದರಂತೆ ಮಂಗಳವಾರಂ ಸಿನೆಮಾದಲ್ಲಿ ನಟಿಸುವ ಅವಕಾಶ ಪಾಯಲ್ ಗೆ ದೊರೆಯಿತು ಎನ್ನಲಾಗಿದೆ. ಈ ಸಿಎನಮಾ ಇತ್ತೀಚಿಗಷ್ಟೆ ಅದ್ದೂರಿಯಾಗಿ ತೆರೆಕಂಡಿದೆ.  ಸಿನೆಮಾ ಬಿಡುಗಡೆಯಾದಾಗಿನಿಂದ ಒಳ್ಳೆಯ ರೆಸ್ಪಾನ್ಸ್ ಸಹ ಪಡೆದುಕೊಂಡಿದೆ. ಪ್ರೀ ರಿಲೀಸ್ ಬ್ಯುಸಿನೆಸ್ ಬರೊಬ್ಬರಿ 13 ಕೋಟಿ ರೂಪಾಯಿಗಳಿಗೆ ನಡೆದಿದೆ ಎನ್ನಲಾಗಿದ್ದು,  ಸದ್ಯ ಮಂಗಳವಾರಂ ಸಿನೆಮಾ ಆರು ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಈ ವಿಕೇಂಡ್ ಗೆ ನಿರೀಕ್ಷಿತ ಕಲೆಕ್ಷನ್ ಮಾಡಲಿದೆ ಎಂದು ಅಂದಾಜಿಸಲಾಗಿದೆ.

ಇನ್ನೂ ಇತ್ತೀಚಿಗಷ್ಟೆ ಸಂದರ್ಶನವೊಂದರಲ್ಲಿ ಕೆಲವೊಂದು ಬೋಲ್ಡ್ ಕಾಮೆಂಟ್ ಗಳನ್ನು ಮಾಡಿದ್ದಾರೆ. ಆಕೆಯ ಈ ಕಾಮೆಂಟ್ ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿವೆ. ಸಂದರ್ಶನದಲ್ಲಿ ಆಕೆ ಮಾತನಾಡುತ್ಥಾ ನನಗೆ ಕರೀನಾ ಕಪೂರ್‍ ಎಂದರೇ ತುಂಬಾನೆ ಇಷ್ಟ. ಆಕೆಯೊಂದಿಗೆ ಒಂದು ಸೆಲ್ಫಿ ತೆಗೆಸಿಕೊಳ್ಳಬೇಕೆಂದು ತುಂಬಾ ಇಷ್ಟವಿತ್ತು. ಸೆಲ್ಫಿಗಾಗಿ ತುಂಬಾನೆ ಕಷ್ಟಪಟ್ಟಿದ್ದೆ. ಆಕೆ ಅಂದರೇ ನನಗೆ ಅಷ್ಟೊಂದು ಇಷ್ಟ. ಒಂದು ವೇಳೆ ಅವಕಾಶ ದೊರೆತರೇ ಆಕೆಯನ್ನು ನಾನು ಮದುವೆಯಾಗೋಕೂ ಸಿದ್ದ, ಆಕೆ ಅಂದರೇ ನನಗೆ ಅಷ್ಟೊಂದು ಇಷ್ಟ ಎಂದು ಬೋಲ್ಡ್ ಕಾಮೆಂಟ್ಸ್ ಮಾಡಿದ್ದಾರೆ.

ಇನ್ನೂ ಪಾಯಲ್ ನೀಡಿದ ಈ ಹೇಳಿಕೆಗಳು ಇದೀಗ ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಒಬ್ಬ ಹುಡುಗಿಯಾಗಿ ಮತ್ತೊರ್ವ ಹುಡುಗಿಯನ್ನು ಮದುವೆಯಾಗುತ್ತೀನಿ ಎಂದು ಹೇಳುತ್ತೀಯಾ ನಿನಗೆ ಹುಚ್ಚು ಹಿಡಿದಿದೇಯಾ ಎಂದೂ ಅನೇಕರು ಕಾಮೆಂಟ್ ಗಳನ್ನು ಮಾಡಿದ್ದಾರೆ. ಮತ್ತೆ ಕೆಲವು ಪಾಯಲ್ ಗೆ ಕರೀನಾ ಕಪೂರ್‍ ಮೇಲಿನ ಪ್ರೀತಿಯನ್ನು ಆಕೆ ಆ ರೀತಿ ವ್ಯಕ್ತಪಡಿಸಿದ್ದಾರೆ ಅದರಲ್ಲಿ ತಪ್ಪೇನು ಎಂದು ಕೆಲವರು ಆಕೆಯನ್ನು ಬೆಂಬಲಿಸುತ್ತಿದ್ದಾರೆ.