Film News

ಸಿನೆಮಾಗೆ ಸೈನ್ ಮಾಡಿದ ಬಳಿಕ ರಾತ್ರಿಗೆ ಬಂದು ಬಿಡು ಎಂದಿದ್ರಂತೆ, ಕಾಸ್ಟಿಂಗ್ ಕೌಚ್ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಕಿರಣ್ ರಾಥೋಡ್……!

ಸಿನಿರಂಗದಲ್ಲಿ ದೊಡ್ಡ ಹೆಸರು ಗಳಿಸಬೇಕೆಂದು ಮಹದಾಸೆಯಿಂದ ಅನೇಕ ಕಲಾವಿದೆಯರು ಬರುತ್ತಾರೆ. ಅವರಲ್ಲಿ ಅನೇಕರು ಕಾಸ್ಟಿಂಗ್ ಕೌಚ್ ಗೆ ಗುರಿಯಾಗಿರುತ್ತಾರೆ. ಅವಕಾಶಗಳನ್ನು ನೀಡುವ ನೆಪದಲ್ಲಿ ಅನೇಕ ಮಹಿಳಾ ಕಲಾವಿದರು ಲೈಂಗಿಕ ಕಿರುಕುಳ ಎದುರಿಸುತ್ತಿರುತ್ತಾರೆ. ಇದೀಗ ತೆಲುಗು ನಟಿ ಕಿರಣ್ ರಾಥೋಡ್ ಸಹ ಕಾಸ್ಟಿಂಗ್ ಕೌಚ್ ಗೆ ಗುರಿಯಾಗಿದ್ದಾಗಿ ಹೇಳಿದ್ದಾರೆ. ಆಕೆ ಈ ಬಗ್ಗೆ ನೀಡಿದ ಕಾಮೆಂಟ್ ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ.

ಬೋಲ್ಡ್ ಬ್ಯೂಟಿ ಕಿರಣ್ ರಾಥೋಡ್ ಅನೇಕ ಸಿನೆಮಾಗಳಲ್ಲಿ ಬೋಲ್ಡ್ ಪಾತ್ರಗಳ ಮೂಲಕ ಒಳ್ಳೆಯ ಫೇಂ ಪಡೆದುಕೊಂಡರು. ತೆಲುಗಿನ ನುವ್ವುಲೇಕ ನೇನು ಲೇನು, ಕೆವ್ವು ಕೇಕ, ಜೆಮಿನಿ ಸೇರಿಂದತೆ ಕೆಲವೊಂದು ಸಿನೆಮಾಗಳಲ್ಲಿ ಗ್ಲಾಮರ್‍ ಪಾತ್ರದಲ್ಲಿ ನಟಿಸಿದ್ದರು. ಇದೀಗ ಆಕೆ ಸೋಷಿಯಲ್ ಮಿಡಿಯಾದಲ್ಲಿ ಜೋರನ್ನು ಏರಿಸಿದ್ದು, ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇನ್ನೂ ಆಕೆ ಬಿಗ್ ಬಾಸ್ ಸೀಜನ್-7 ರಲ್ಲಿ ಕಿರಣ್ ರಾಥೋಡ್ ಸಹ ಆಯ್ಕೆ ಯಾಗಿದ್ದರು. ಈ ಶೋನಿಂದ ಆಕೆ ಎಲಿಮಿನೇಟ್ ಆದ ಮೊದಲ ಸ್ಪರ್ಧಿಯಾದರು. ಇನ್ನೂ ಸಿನೆಮಾಗಳಲ್ಲಿ ಅವಕಾಶಗಳಿಗಾಗಿ ಆಕೆ ಮುಂಬೈಗೆ ಹೋದಾಗ ಕಾಸ್ಟಿಂಗ್ ಕೌಚ್ ಗೆ ಗುರಿಯಾಗಿದ್ದಾಗಿ ಆಕೆ ಇತ್ತಿಚಿಗೆ ನಡೆದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಸಂದರ್ಶನದಲ್ಲಿ ಕಿರಣ್ ರಾಥೋಡ್ ಕಾಸ್ಟಿಂಗ್ ಕೌಚ್ ಬಗ್ಗೆ ಶಾಕಿಂಗ್ ಕಾಮೆಂಟ್ ಮಾಡಿದ್ದಾರೆ. ಸಿನೆಮಾಗಳಲ್ಲಿ ಅವಕಾಶಗಳಿಗಾಗಿ ಹೋದಾಗ ಅವಕಾಶ ನೀಡುತ್ತೇವೆ ಬನ್ನಿ ಕರೆದು, ಕಾಂಟ್ರಾಕ್ಟ್ ಮೇಲೆ ಸಹಿ ಹಾಕಿಸಿಕೊಂಡ ಬಳಿಕ ಅವರು ತಮ್ಮ ನೀಚ ಬುದ್ದಿಯನ್ನು ತೋರುತ್ತಿದ್ದರು. ಸಹಿ ಹಾಕಿದ ಬಳಿಕ ರಾತ್ರಿಗೆ ಬಂದು ಬಿಡು ಎಂದು ಅಸಭ್ಯಕರವಾಗಿ ಕೇಳುತ್ತಿದ್ದರು. ಆ ಸಮಯದಲ್ಲಿ ನನ್ನ ಬಳಿ ಯಾವುದೇ ಸಿನೆಮಾ ಇಲ್ಲದೇ ಇದ್ದರೂ ಸಹ ನಾನು ಅದಕ್ಕೆ ಒಪ್ಪುತ್ತಿರಲಿಲ್ಲ. ಆ ಪ್ರಾಜೆಕ್ಟ್ ನಿಂದಲೇ ಹೊರಬರುತ್ತಿದ್ದೆ. ಹೀಗೆ ಕಾಂಪ್ರಮೈಸ್ ಆಗೋಕ್ಕಿಂತಾ ಬೇರೆ ಏನಾದರೂ ಕೆಲಸ ಮಾಡಿಕೊಳ್ಳುವುದು ಬೆಟರ್‍ ಎಂದು ಅನ್ನಿಸುತ್ತಿತ್ತು. ಆದರೆ ಇದೀಗ ಅಂತಹ ಸಮಸ್ಯೆಗಳಿಲ್ಲ. ಒಳ್ಳೆಯ ಅವಕಾಶಗಳು ಬರುತ್ತಿವೆ ಎಂದು ಹೇಳಿದ್ದಾರೆ.

ಜೊತೆಗೆ ಆಕೆ ತನ್ನ ವೈಯುಕ್ತಿಕ ವಿಚಾರಗಳನ್ನು ಸಹ ಹೇಳಿದ್ದಾರೆ. ಒಬ್ಬ ವ್ಯಕ್ತಿಯೊಂದಿಗೆ ನಾಲ್ಕು ವರ್ಷ ಸಹಜೀವನ ಮಾಡಿದ್ದೆ. ಆದರೆ ಆತ ಸರಿಯಾದ ವ್ಯಕ್ತಿಯಲ್ಲ ಎಂದು ತಡವಾಗಿ ತಿಳಿಯಿತು. ಒಂದು ವೇಳೆ ಅವನನ್ನು ಮದುವೆಯಾಗಿದ್ದರೇ ನನ್ನನ್ನು ಕೊಂದುಬಿಡುತ್ತಿದ್ದ. ಆತನನ್ನು ದೂರ ಮಾಡಿ ಮತ್ತೋರ್ವ ವ್ಯಕ್ತಿಯನ್ನು ಪ್ರೀತಿಸಿದೆ. ಆತ ಸಹ ಒಳ್ಳೆಯವನಲ್ಲ. ಸದ್ಯ ಏಳು ವರ್ಷಗಳಿಂದ ನಾನು ಒಂಟಿಯಾಗಿಯೇ ಇದ್ದೇನೆ ಎಂದು ಸದ್ಯ ನನಗೆ ಮದುವೆಯಾಗುವ ಉದ್ದೇಶ ಸಹ ಇಲ್ಲ ಎಂದಿದ್ದಾರೆ.

Most Popular

To Top