News

ರಾಹುಲ್ ಗಾಂಧಿಗೆ ಸವಾಲಾಕಿದ ಓವೈಸಿ, ವಯನಾಡ್ ಅಲ್ಲ, ಹೈದರಾಬಾದ್ ಗೆ ಬಂದು ನನ್ನ ವಿರುದ್ದ ಸ್ಪರ್ಧಿಸಿ ಎಂದು ಸವಾಲು….!

ಸದಾ ಒಂದಲ್ಲ ಒಂದು ರೀತಿಯ ಕಾಮೆಂಟ್ ಗಳನ್ನು ಮಾಡಿ ಸುದ್ದಿಯಾಗುವಂತಹ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಇದೀಗ ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿಗೆ ಸವಾಲೆಸೆದಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ವಯನಾಡಿನಿಂದ ಅಲ್ಲ ಹೈದರಾಬಾದ್ ಗೆ ಬಂದು ನನ್ನ ವಿರುದ್ದ ಸ್ಪರ್ಧಿಸಿ ನೋಡು ಎಂದು ಸವಾಲೆಸೆದಿದ್ದಾರೆ.

ಇತ್ತಿಚಿಗಷ್ಟೆ ಹೈದರಾಬಾದ್ ನಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಓವೈಸಿ ರಾಹುಲ್ ಗಾಂಧಿಯವರಿಗೆ ಸವಾಲೊಂದನ್ನು ಹಾಕಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನೀವು ಹೈದರಾಬಾದ್ ನಿಂದ ಸ್ಪರ್ಧೆ ಮಾಡಬೇಕೆ ವಿನಃ ವಯನಾಡು ಲೋಕಸಭಾ ಕ್ಷೇತ್ರದಿಂದಲ್ಲ ಎಂದು ನಾನು ನಿಮ್ಮ ನಾಯಕನಿಗೆ ಅಂದರೇ ರಾಹುಲ್ ಗಾಂಧಿಯವರಿಗೆ ಹೈದರಾಬಾದ್ ನಿಂದ ಚುನಾವಣೆಗೆ ಸ್ಪರ್ಧಿಸುವಂತೆ ಸವಾಲು ಹಾಕುತ್ತೇನೆ. ಅದಕ್ಕೆ ನಾನು ಸಿದ್ದವಾಗಿದ್ದೇನೆ ಎಂದು ಒವೈಸಿ ಹೇಳಿದ್ದಾರೆ. ಇದೇ ವೇಳೆ ಕಾಂಗ್ರೇಸ್ ಪಕ್ಷದ ವಿರುದ್ದ ಹರಿಹಾಯ್ದಿದ್ದಾರೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಿದ್ದು ಕಾಂಗ್ರೇಸ್ ಆಡಳಿತದ ಅವಧಿಯಲ್ಲಿ. ಕಾಂಗ್ರೇಸ್, ಸಮಾಜವಾದಿ ಹಾಗೂ ಆರ್‍.ಜೆ.ಡಿ ನಾಯಕರು ಸಂಸತ್ತಿನಲ್ಲಿ ಮುಸ್ಲೀಂರ ಹೆಸರುಗಳನ್ನು ತೆಗೆದುಕೊಳ್ಳಲು ಹೆದರಿಕೊಳ್ಳುತ್ತಾರೆ. ನಾನು ಎದ್ದು ನಿಂತು ಮುಸ್ಲೀಂ ಹಾಗೂ ಒಬಿಸಿ ಮಹಿಳೆಯರಿಗೂ ಮೀಸಲಾತಿತ ಸಿಗಬೇಕು ಎಂದು ಹೇಳಿದ್ದೇನೆ. ನಾನು ಮಹಿಳೆಯರ ವಿರುದ್ದ ಎಂದು ಹೇಳುತ್ತಿದ್ದಾರೆ. ಆದರೆ ನೀವು ಅವರ ವಿರುದ್ದ ಇದ್ದೀರಿ ಎಂಬುದು ಸತ್ಯ ಎಂದು ಆಕ್ರೋಷ ವ್ಯಕ್ತಪಡಿಸಿದರು.

ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ತೆಲಂಗಾಣದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ರಾಹುಲ್ ಗಾಂಧಿ ತೆಲಂಗಾಣದಲ್ಲಿ ಬಿಜೆಪಿ, ಬಿ.ಆರ್‍.ಎಸ್ ಹಾಗೂ ಎಐಎಂಐಎಂ ಪಕ್ಷಗಳು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿವೆ. ನಮ್ಮ ಕಾಂಗ್ರೇಸ್ ಪಕ್ಷ ಈ ತ್ರಿಕೂಟದ ವಿರುದ್ದ ಹೋರಾಡುತ್ತಿದೆ. ತೆಲಂಗಾಣದಲ್ಲಿ ಬಿ.ಆರ್‍.ಎಸ್ ಪಕ್ಷದ ವಿರುದ್ದ ಹೋರಾಡುತ್ತಿಲ್ಲ. ಬಿಜೆಪಿ ಹಾಗೂ ಎಐಎಂಐಎಂ ಜೊತೆಗೂ ಸಹ ಹೋರಾಟ ಮಾಡುತ್ತಿದ್ದೇವೆ. ಆದರೆ ಅವರು ಮಾತ್ರ ತಮ್ಮನ್ನು ಬೇರೆ ಬೇರೆ ಪಕ್ಷಗಳೆಂದು ಹೇಳಿಕೊಳ್ಳುತ್ತಾರೆ. ಆದರೆ ಆ ಮೂರು ಪಕ್ಷಗಳು ಒಂದೆಯಾಗಿದ್ದು, ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಟೀಕೆ ಮಾಡಿದ್ದರು.

Most Popular

To Top