ಸ್ವತಂತ್ರವಾಗಿ ಬದುಕೋಣ ಅಂದುಕೊಂಡ್ರೆ ಆತ ತುಂಬಾ ಭಯಪಡಿಸಿದ ಎಂದ ಶ್ರುತಿ ಹಾಸನ್, ವೈರಲ್ ಆದ ಕಾಮೆಂಟ್ಸ್…..!

Follow Us :

ಸಿನೆಮಾ ಸೆಲೆಬ್ರೆಟಿಗಳ ಜೀವನದಲ್ಲಿ ಕೆಲವೊಂದು ಕಹಿ ಘಟನೆಗಳು ನಡೆಯುತ್ತಿರುತ್ತವೆ. ಅದರಿಂದ ತುಂಬಾನೆ ಕಿರಿಕಿರಿ, ಸಮಸ್ಯೆಗಳನ್ನು ಅನುಭವಿಸುತ್ತಾರೆ. ಅದೇ ರೀತಿ ಸ್ಟಾರ್‍ ನಟಿ ಶ್ರುತಿ ಹಾಸನ್ ಗೂ ಸಹ ಅಂತಹುದೇ ಘಟನೆ ಎದುರಾಗಿದೆ. ಇತ್ತೀಚಿಗೆ ಶ್ರುತಿ ಹಾಸನ್ ಗೆ ಶಾಕಿಂಗ್ ಸಂಘಟನೆಯೊಂದು ಎದುರಾಗಿದ್ದು, ಅದರಿಂದಾಗಿ ಭದ್ರತಾ ಸಿಬ್ಬಂದಿ ಅತ್ಯವಶ್ಯಕ ಎಂದು ಸೋಷಿಯಲ್ ವೇದಿಕೆಯ ಮೂಲಕ ತಿಳಿಸಿದ್ದಾರೆ. ಅಷ್ಟಕ್ಕೂ ಆ ಘಟನೆ ಏನು ಅಂದರೇ,

ಕಳೆದೆರಡು ದಿನಗಳ ಹಿಂದೆಯಷ್ಟೆ ಶ್ರುತಿ ಹಾಸನ್ ಗೆ ವಿಮಾನ ನಿಲ್ದಾಣದಲ್ಲಿ ಕಹಿ ಘಟನೆಯೊಂದು ಎದುರಾಗಿತ್ತು. ಅಲ್ಲಿ ಓರ್ವ ವ್ಯಕ್ತಿ ಆಕೆಯ ಹಿಂದೆಯೇ ಬಂದಿದ್ದಾನೆ. ಮೊದಲಿಗೆ ಆಕೆ ಆತನನ್ನು ಅಭಿಮಾನಿ ಎಂದುಕೊಂಡಿದ್ದಾಳೆ. ಆದರೆ ಆತ ಕಾರಿನ ವರೆಗೂ ಹಿಂದೆಯೇ ಬಂದಿದ್ದಾನೆ. ಆತನ ವರ್ತನೆ ಆಕೆಗೆ ಭಯಪಡಿಸಿದೆ. ಬಳಿಕ ಧೈರ್ಯ ಮಾಡಿಕೊಂಡು ನೀನು ಯಾರು ಎಂದು ಕೇಳಿದಾಗ ಆತ ಅಲ್ಲಿಂದ ಕಾಲ್ಕಿತ್ತಿದ್ದಾನೆ. ನಾನು ಸ್ವಂತ್ರತವಾಗಿ ಇರಬೇಕು ಅಂದುಕೊಳ್ಳುತ್ತೇನೆ. ಅದಕ್ಕಾಗಿ ನಾನು ಭದ್ರತಾ ಸಿಬ್ಬಂದಿಯನ್ನು ಸಹ ನೇಮಿಸಿಕೊಂಡಿಲ್ಲ. ಆದರೆ ಈ ಸಂಘಟನೆಯ ಬಳಿಕ ಅವರ ಅವಸರ ತುಂಬಾ ಅಗತ್ಯ ಅನ್ನಿಸುತ್ತದೆ ಎಂದು ಶ್ರುತಿ ಹಾಸನ್ ಅಭಿಪ್ರಾಯಪಟ್ಟಿದ್ದಾರೆ. ಆಕೆಯ ಕಾಮೆಂಟ್ ಗಳು ಇದೀಗ ವೈರಲ್ ಆಗುತ್ತಿವೆ.

ಇನ್ನೂ ವರ್ಷದ ಆರಂಭದಲ್ಲೇ ಶ್ರುತಿ ಹಾಸನ್ ಒಳ್ಳೆಯ ಸಕ್ಸಸ್ ಕಂಡುಕೊಂಡಳು. ಕೆಲವು ದಿನಗಳ ಕಾಲ ಸಿನೆಮಾ ರಂಗದಿಂದ ದೂರವೇ ಉಳಿದಿದ್ದರು. ಕಮ್ ಬ್ಯಾಕ್ ಆದ ಬಳಿಕ ಆಕೆಗೆ ಕ್ರಾಕ್, ವಕೀಲ್ ಸಾಭ್ ಸಿನೆಮಾಗಳ ಮೂಲಕ ಒಳ್ಳೆಯ ಸಕ್ಸಸ್ ಕಂಡುಕೊಂಡರು. ಬಳಿಕ 2023 ರ ಸಂಕ್ರಾಂತಿ ಹಬ್ಬದಂದು ತೆರೆಕಂಡ ವಾಲ್ತೇರು ವೀರಯ್ಯ ಹಾಗೂ ವೀರಾಸಿಂಹಾರೆಡ್ಡಿ ಎರಡೂ ಸಿನೆಮಾಗಳೂ ಭಾರಿ ಸಕ್ಸಸ್ ಕಂಡುಕೊಂಡವು. ಈ ಎರಡೂ ಸಿನೆಮಾಗಳಲ್ಲಿ ಆಕೆ ಒಳ್ಳೆಯ ಸಂಭಾವನೆ ಸಹ ಪಡೆದುಕೊಂಡರು ಎನ್ನಲಾಗಿದೆ. ಇದೀಗ ಆಕೆ ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಸಲಾರ್‍ ಸಿನೆಮಾದಲ್ಲಿ ಸಹ ನಟಿಸಿದ್ದು, ಸಿನೆಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಸಿನೆಮಾ ಸಕ್ಸಸ್ ಕಂಡರೇ ಆಕೆ ಭಾರಿ ಫೇಂ ಸಹ ಪಡೆದುಕೊಳ್ಳಲಿದ್ದಾರೆ ಎನ್ನಬಹುದಾಗಿದೆ. ಸಿನೆಮಾಗಳ ಜೊತೆಗೆ ಆಕೆ ಆಗಾಗ ವೈಯುಕ್ತಿಕ ಕಾರಣಗಳಿಂದಲೂ ಸುದ್ದಿಯಾಗುತ್ತಿರುತ್ತಾರೆ.