ಕ್ಯೂಟ್ ಪೋಸ್ ಗಳ ಮೂಲಕ ಮಸ್ಮರೈಜ್ ಮಾಡಿದ ಜಾನ್ವಿ, ಜಾರುತ್ತಿರುವಂತಹ ಟಾಪ್ ನಲ್ಲಿ ಕಿಲ್ಲಿಂಗ್ ಲುಕ್ಸ್ ಕೊಟ್ಟ ನಟಿ……!

Follow Us :

ಸೋಷಿಯಲ್ ಮಿಡಿಯಾದಲ್ಲಿ ಸದಾ ಹಾಟ್ ಪೊಟೋಗಳ ಮೂಲಕ ಸದಾ ಸದ್ದು ಮಾಡುವ ಬಾಲಿವುಡ್ ನಟಿಯರ ಪೈಕಿ ದಿವಂಗತ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್‍ ಮುಂದೆ ಇರುತ್ತಾರೆ. ನಿರಂತರವಾಗಿ ಟೆಂಪ್ಟಿಂಗ್ ಪೋಸ್ ಗಳನ್ನು ಕೊಡುತ್ತಾ ಯುವಕರ ನಿದ್ದೆಗೆಡಿಸುವಂತಹ ಪೋಸ್ ಕೊಡುತ್ತಿರುತ್ತಾರೆ. ಸದಾ ಆಕೆ ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸುತ್ತಾ ಫ್ಯಾನ್ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿದ್ದಾರೆ. ಇದೀಗ ಆಕೆ ತನ್ನ ಸ್ನೇಹಿತರೊಂದಿಗೆ ವೆಕೇಷನ್ ಗೆ ಹಾರಿದ್ದು, ಅಲ್ಲಿನ ಕೆಲವೊಂದು ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿವೆ.

ದಿವಂಗತ ಶ್ರೀದೇವಿ ಯವರ ಪುತ್ರಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಜಾನ್ವಿ ಕಪೂರ್‍ ಅನೇಕ ಸಿನೆಮಾಗಳಲ್ಲಿ ನಟಿಸಿದ್ದಾರೆ. ಆದರೆ ಆಕೆಯ ಸಿನೆಮಾಗಳು ಅಷ್ಟೊಂದು ಸಕ್ಸಸ್ ಕಾಣಲಿಲ್ಲ ಎಂದೇ ಹೇಳಬಹುದಾಗಿದೆ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಸ್ಟಾರ್‍ ನಟಿಯರಂತೆ ಕ್ರೇಜ್ ಪಡೆದುಕೊಂಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಧಡಕ್ ಎಂಬ ಹಿಂದಿ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದಾರೆ. ಸುಮಾರು ಐದು ವರ್ಷಗಳಿಂದ ಬಾಲಿವುಡ್ ನಲ್ಲೇ ಇದ್ದ ಜಾನ್ವಿ ಇದೀಗ ಜೂನಿಯರ್‍ ಎನ್.ಟಿ.ಆರ್‍ ರವರ ದೇವರ ಸಿನೆಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ. ಟಾಲಿವುಡ್ ನಲ್ಲಿ ಅಪಾರ ಸಂಖ್ಯೆಯ ಶ್ರೀದೇವಿ ಅಭಿಮಾನಿಗಳೂ ಸಹ ಆಕೆಯ ತೆಲುಗು ಸಿನೆಮಾಗಳಲ್ಲಿ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

ಇನ್ನೂ ಜಾನ್ವಿ ಸಿನೆಮಾಗಳ ಶೂಟಿಂಗ್ ನಿಂದ ಬಿಡುವು ಸಿಕ್ಕಾಗ ವೆಕೇಷನ್ ಗಳಿಗೆ ಹಾರುತ್ತಿರುತ್ತಾರೆ. ಜೊತೆಗೆ ತಮ್ಮ ಅಭಿಮಾನಿಗಳಿಗಾಗಿ ವೆಕೇಷನ್ ನಲ್ಲಿ ಎಂಜಾಯ್ ಮಾಡಿದ ಪೊಟೋಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ತನ್ನ ಸ್ನೇಹಿತರೊಡನೆ ವೆಕೇಷನ್ ಗೆ ಹಾರಿದ್ದಾರೆ. ಅಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಸವಿಯುತ್ತಾ ಬ್ಯೂಟಿಪುಲ್ ಆಗಿ ಪೋಸ್ ಗಳನ್ನು ಕೊಟ್ಟಿದ್ದಾರೆ. ಇನ್ನೂ ಜಾರುತ್ತಿರುವಂತಹ ಹೂಡಿ ಧರಿಸಿ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದಾರೆ. ಜೊತೆಗೆ ಗ್ಲಾಮರಸ್ ಲುಕ್ಸ್ ಕೊಟ್ಟಿದ್ದಾರೆ. ಸದ್ಯ ಜಾನ್ವಿ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಸದ್ಯ ಜಾನ್ವಿ ಕಪೂರ್‍ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆಕೆಯ ಕೈಯಲ್ಲಿ ನಾಲ್ಕು ಸಿನೆಮಾಗಳಿವೆ. ಈ ಪೈಕಿ ತೆಲುಗಿನಲ್ಲಿ ದೇವರ, ಹಿಂದಿಯಲ್ಲಿ ಉಲಜ್, ಬವಾಲ್, ಮಿಸ್ಟರ್‍ ಅಂಡ್ ಮಿಸ್ ಮಹಿ ಸಿನೆಮಾಗಳಿವೆ. ಇನ್ನೂ ಬವಾಲ್ ಹಾಗೂ ಮಿಸ್ಟರ್‍ ಅಂಡ್ ಮಿಸ್ ಮಹಿ ಸಿನೆಮಾಗಳು ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.