ಟಾಲಿವುಡ್ ನಿರ್ದೇಶಕರ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಇಲಿಯಾನಾ, ಅವರ ಪೋಕಸ್ ಎಲ್ಲಾ ಅದರ ಮೇಲೆ ಎಂದ ನಟಿ…..!

ಗೋವಾ ಬ್ಯೂಟಿ ಇಲಿಯಾನಾ ಸಿನೆಮಾಗಳಿಂದ ದೂರವಾಗಿ ಅನೇಕ  ವರ್ಷಗಳು ಕಳೆದರೂ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳಿಗೆ ಟಚ್ ನಲ್ಲೆ ಇದ್ದರು. ಸದಾ ಬಿಕಿನಿಯಲ್ಲಿ ಕಾಣಿಸಿಕೊಳ್ಳುತ್ತಾ ಅಭಿಮಾನಿಗಳಿಗೆ ಹಾಟ್ ಟ್ರೀಟ್ ನೀಡುತ್ತಿದ್ದರು. ಆದರೆ ಕೆಲವು ದಿನಗಳ ಹಿಂದೆಯಷ್ಟೆ ಆಕೆ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದರು. ಇದೀಗ ಆಕೆ ತೆಲುಗು ನಿರ್ದೇಶಕರ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದು, ಕಾಮೆಂಟ್ ಗಳು ವೈರಲ್ ಆಗುತ್ತಿದೆ.

ತೆಲುಗಿನ ದೇವದಾಸು ಸಿನೆಮಾದ ಮೂಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಇಲಿಯಾನ ಮೊದಲನೇ ಸಿನೆಮಾದ ಮೂಲಕ ಒಳ್ಳೆಯ ಕ್ರೇಜ್ ಪಡೆದುಕೊಂಡರು. ಬಳಿಕ ಮಹೇಶ್ ಬಾಬು ರವರ ಪೋಕಿರಿ ಸಿನೆಮಾದ ಮೂಲಕ ಓವರ್‍ ನೈಟ್ ಸ್ಟಾರ್‍ ಆದರು. ಬಳಿಕ ಸ್ಟಾರ್‍ ನಟಿಯಾಗಿ ಅನೇಕ ಸೂಪರ್‍ ಹಿಟ್ ಸಿನೆಮಾಗಳಲ್ಲಿ ನಟಿಸಿ ಫೇಂ ಪಡೆದುಕೊಂಡರು. ಸ್ಟಾರ್‍ ನಟರಿಂದ ಯಂಗ್ ಹಿರೋಗಳ ಜೊತೆಗೆ ನಟಿಸಿದ್ದ ಈಕೆ ತೆಗೆದುಕೊಂಡ ಕೆಲವೊಂದು ತಪ್ಪು ನಿರ್ಣಯಗಳ ಕಾರಣದಿಂದ ಆಕೆ ಸಿನಿರಂಗದಿಂದ ದೂರ ಉಳಿಯಬೇಕಾಯಿತು. ಬಾಲಿವುಡ್ ಸಿನೆಮಾಗಳ ಮೇಲಿನ ಮೋಜಿನಿಂದ ಆಕೆ ಟಾಲಿವುಡ್ ಬಿಟ್ಟು ಬಾಲಿವುಡ್ ಗೆ ಹಾರಿದರು. ಆದರೆ ಬಾಲಿವುಡ್ ನಲ್ಲಿ ಆಕೆ ಅಂದುಕೊಂಡಷ್ಟು ಸಕ್ಸಸ್ ಕಾಣಲಿಲ್ಲ. ಆಕೆ ಕೆಲವೊಂದು ವೈಯುಕ್ತಿಕ ಕಾರಣಗಳಿಂದ ಸಿನೆಮಾಗಳಿಂದ ದೂರವೇ ಉಳಿದರು.

ಈ ಹಿಂದೆ ಇಲಿಯಾನಾ ಟಾಲಿವುಡ್ ನಿರ್ದೇಶಕರ ಬಗ್ಗೆ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆಗಳು ವೈರಲ್ ಆಗಿದೆ. ಹಳೇಯ ಸಂದರ್ಶದನಲ್ಲಿ ಆಂಕರ್‍ ಇಲಿಯಾನಾ ಗೆ ತೆಲುಗು ಸಿನಿರಂಗದಲ್ಲಿ ಸ್ಟಾರ್‍ ಹಿರೋ ಹಾಗೂ ನಿರ್ದೇಶಕರ ಜೊತೆಗೆ ನಟಿಸಿದ್ದಾರೆ. ಆದರೆ ಯಾವುದೇ ನಿರ್ದೇಶಕ ನಿಮಗೆ ಸರಿಯಾದ ಐಡೆಂಟಿಟಿ ನೀಡುವ ಪಾತ್ರ ನೀಡಿಲಿಲ್ಲ ಏಕೆ ಎಂದು ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ಇಲಿಯಾನಾ ಎಂತಹ ಪಾತ್ರವಾದರೂ ನಾನು ಅದ್ಬುತವಾಗಿ ನಟಿಸುತ್ತೇನೆ. ಆದರೆ ತೆಲುಗು ಸಿನೆಮಾ ನಿರ್ದೇಶಕರು ನನ್ನ ನಟನೆಗಿಂತ ನನ್ನ ಸೊಂಟ ಎಷ್ಟು ಆಂಗಲ್ ನಲ್ಲಿ ಪ್ರದರ್ಶನ ಮಾಡಬೇಕು ಎಂಬುದರ ಬಗ್ಗೆ ಹೆಚ್ಚು ಪೋಕಸ್ ಇಡುತ್ತಾರೆ. ಅವರಿಗೆ ಸದಾ ನನ್ನ ಸೊಂಟದ ಮೇಲೆ ಕಣ್ಣು ಎಂದು ಹೇಳಿದ್ದರು. ಇದೀಗ ಇಲಿಯಾನಾ ನೀಡಿದ ಈ ಹಳೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಇನ್ನೂ ಕೆಲವು ದಿನಗಳಿಂದ ಇಲಿಯಾನಾ ವೈಯುಕ್ತಿಕ ಕಾರಣಗಳಿಂದ ಭಾರಿ ಸುದ್ದಿಯಾಗಿದ್ದಾರೆ. ಮದುವೆಗೂ ಮುಂಚೆಯೇ ಆಕೆ ಗರ್ಭಿಣಿಯಾಗಿ ಮಗುವಿಗೆ ಜನ್ಮ ಸಹ ನೀಡಿ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದಾರೆ. ಇಂದಿಗೂ ಸಹ ಆಕೆ ತನ್ನ ಮಗುವಿಗೆ ತಂದೆ ಯಾರು ಎಂಬ ವಿಚಾರವನ್ನು ಗೌಪ್ಯವಾಗಿಯೇ ಇಟ್ಟಿದ್ದಾರೆ. ತನ್ನ ಪ್ರಿಯಕರನ ಪೊಟೋ ತೋರಿಸದರೂ ಸಹ ಆತ ಯಾರು ಎಂಬ ಬಗ್ಗೆ ಮಾತ್ರ ಕ್ಲಾರಿಟಿ ಕೊಟ್ಟಿಲ್ಲ. ಸದ್ಯ ಇಲಿಯಾನಾ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದು, ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದಾರೆ.