ಪೊಲೀಸರ ಕಸ್ಟಡಿಯಲ್ಲಿ ಚೈತ್ರಾ ಕುಂದಾಪುರ, ಸೆ.23 ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿದ ಕೊರ್ಟ್….!

ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯೊಬ್ಬರಿಂದ ಐದು ಕೋಟಿ ಹಣ ಪಡೆದು ವಂಚನೆ ಮಾಡಿದ ಆರೋಪದ ಮೇರೆಗೆ ಮುಖಂಡೆ ಚೈತ್ರಾ ಕುಂದಾಪುರ ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಆಕೆಯನ್ನು ಸೆ.23 ಅಂದರೇ ಹತ್ತು ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಈ ವೇಳೆ ಆಕೆ ನನ್ನನ್ನು ಪೊಲೀಸರು ಎಳೆದಾಡಿ ನೋವನ್ನುಂಟು ಮಾಡಿದ್ದಾರೆ ಎಂದು ಬಿಕ್ಕಿ ಬಿಕ್ಕಿ ನ್ಯಾಯಾಧೀಶರ ಮುಂದ ಅತ್ತಿದ್ದಾರೆ ಎಂದು ತಿಳಿದುಬಂದಿದೆ.

ಚೈತ್ರಾ ಕುಂದಾಪುರ ಸೇರಿದಂತೆ ಹಲವರು ಉಡುಪಿ ಮೂಲದ ಉದ್ಯಮಿ ಗೋವಿಂದ ಪೂಜಾರಿ ಎಂಬುವವರಿಂದ ಕಳೆದ 2013ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಐದು ಕೋಟಿ ಹಣ ಪಡೆದಿದ್ದಾರೆ. ಬಳಿಕ ಅವರನ್ನು ವಿವಿಧ ಮಾರ್ಗದಲ್ಲಿ ದಿಕ್ಕು ತಪ್ಪಿಸಿದ್ದಾರೆ. ಇನ್ನೂ ಟಿಕೆಟ್ ಸಿಗದೇ ಮೋಸ ಹೋಗಿದ್ದು ಅರಿವಾದ ಉದ್ಯಮಿ ಗೋವಿಂದ ಪೂಜಾರಿ ದೂರು ನೀಡಿದ್ದು, ಅದರ ಆಧಾರದ ಮೇಲೆ ಚೈತ್ರಾ ಕುಂಡಾಪುರ ಸೇರಿದಂತೆ ಐವರನ್ನು ಸಿನಿಮೀಯ ಶೈಲಿಯಲ್ಲಿ ಚೈತ್ರಾ ಕುಂದಾಪುರ ರವರನ್ನು ಬಂಧಿಸಿದ್ದಾರೆ. ಬಳಿಕ ಆರು ಮಂದಿಯನ್ನು ಸಹ ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಒಪ್ಪಿಸಿದ್ದಾರೆ.

ಇನ್ನೂ ಈ ಸಮಯದಲ್ಲಿ ನ್ಯಾಯಾಧೀಶರ ಮುಂದೆ ಚೈತ್ರಾ ಕುಂದಾಪುರ ಬಿಕ್ಕಿ ಬಿಕ್ಕಿ ಕಣ್ಣೀರಾಕಿದ್ದಾರೆ. ಪೊಲೀಸರು ನನ್ನನ್ನು ಎಳೆದಾಡಿ ನೋವು ನೀಡಿದ್ದಾರೆ. ಉಡುಪಿ ಪೊಲೀಸರಿಂದ ನನಗೆ ತೊಂದರೆಯಾಗಿದೆ ಎಂದು ದೂರಿದ್ದಾರೆ. ಆದರೆ ಪೊಲೀಸರು ನಾವು ಆರೋಪಿಗೆ ಯಾವುದೇ ರೀತಿಯ ತೊಂದರೆ ಕೊಟ್ಟಿಲ್ಲ. ಬಂಧನದ ಬಗ್ಗೆ ಎಲ್ಲಾ ವಿಡಿಯೋ ಮಾಡಲಾಗಿದೆ. ಮೆಡಿಕಲ್ ಚೆಕಪ್ ಸಹ ಮಾಡಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಜೊತೆಗೆ ಮತಷ್ಟು ಆರೋಪಗಳನ್ನು ಸಹ ಚೈತ್ರಾ ಮಾಡಿದ್ದಾರೆ. ನನ್ನನ್ನು ಬಂಧಿಸಿದಾಗ ನಮ್ಮ ಮನೆಯವರಿಗೆ ಹಾಗೂ ಕುಟುಂಬಸ್ಥರಿಗೆ ಯಾವುದೇ ಮಾಹಿತಿ ನೀಡಿಲ್ಲ. ನಾನು ನಂಬರ ಕೊಟ್ಟು ಕರೆ ಮಾಡಿ ಎಂದರೂ ಮಾಡಿಲ್ಲ. ಉಡುಪಿ ಪೊಲೀಸರು ತುಂಬಾ ಕಷ್ಟ ಕೊಟ್ಟರು. ಆದರೆ ಬೆಂಗಳೂಗೆ ಬಂದ ನಂತರ ಬೆಂಗಳೂರಿನ ಪೊಲೀಸರು ನನಗೆ ಯಾವುದೇ ತೊಂದರೆ ಕೊಟ್ಟಿಲ್ಲ. ನನ್ನ ಮೇಲೆ ದೂರು ಕೊಟ್ಟಿದ್ದು ಯಾರು, ದೂರಿನ ವಿವರ ಏನು ಎಂಬ ಬಗ್ಗೆ ಸಹ ಮಾಹಿತಿಯಿಲ್ಲ ಎಂದು ಚೈತ್ರಾ ನ್ಯಾಯಾಧೀಶರ ಮುಂದೆ ಕಣ್ಣೀರಾಕಿದ್ದಾರೆ.