News

ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ವಿರುದ್ದ ಅವಹೇಳನ: ಹಿಂದು ಮುಖಂಡನ ಬಂಧನ…..!

ಕೆಲವು ದಿನಗಳಿಂದ ತಮಿಳುನಾಡಿನ ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ರವರು ತುಂಬಾನೆ ಸುದ್ದಿಯಾಗುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ದೇಶದಾದ್ಯಂತ ಆಕ್ರೋಷಕ್ಕೆ ಕಾರಣರಾಗಿದ್ದರು. ಇದೀಗ ಉದಯನಿಧಿ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಹಿಂದೂ ಮುಖಂಡನನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

ಕಳೆದ ಸೆ.22 ರಂದು ಹಮ್ಮಿಕೊಳ್ಳಲಾಗಿದ್ದ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಉದಯನಿಧಿ ಸ್ಟಾಲಿನ್ ವಿರುದ್ದ ಹಿಂದೂ ಮುಖಂಡ ಮಹೇಶ ಎಂಬಾತನ ಆಕ್ಷೇಪಾರ್ಹ ಮಾತುಗಳನ್ನಾಡಿದ್ದರು ಎಂದು ಆರೋಪದ ಮೇರೆಗೆ ಮಹೇಶ್ ವಿರುದ್ದ ಡಿಎಂಕೆ ಜಿಲ್ಲಾ ಮುಖ್ಯಸ್ಥ ಎ.ಸಿ.ಮಣಿ ಎಂಬುವವರು ಅರಾನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಳೆ ಹಿಂದೂ ಮುಖಂಡ ಮಹೇಶ್ ರವರನ್ನು ತಮಿಳುನಾಡಿನ ಪೊಲೀಸರು ಬಂಧಿಸಿದ್ದಾರೆ. ಇಂದು ಬೆಳಗ್ಗೆ ಮಹೇಶ್ ರವರ ನಿವಾಸದಿಂದ ಅವರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಸನಾತನ ಧರ್ಮಸ ಕುರಿತು ಹೇಳಿಕೆ ನೀಡಿರುವ ಉದಯನಿಧಿ ಸ್ಟಾಲಿನ್ ಕೂಡಲೇ ಕ್ಷಮೆಯಾಚಿಸಬೇಕು ಎಂದು ಮಾತ್ರ ಹೇಳಿದ್ದೇನೆ ವಿನಃ ಅವರ ವಿರುದ್ದ ಯಾವುದೇ ಕೆಟ್ಟ ಪದ ಬಳಸಿಲ್ಲ ಎಂದು ಮಹೇಶ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ ಎನ್ನಲಾಗಿದೆ.

ನಾನು ವೇದಿಕೆಯಲ್ಲಿ ಭಾಷಣ ಮಾಡುವಾಗ ಸನಾತನ ಧರ್ಮದ ವಿರುದ್ದ ಹೇಳಿಕೆ ನೀಡಿದ್ದ ಉದಯನಿಧಿ ಕ್ಷಮೆಯಾಚಿಸುವ ಬಗ್ಗೆ ನಾನು ಒತ್ತಾಯ ಮಾಡಿದೆ. ಅವರು ಹೇಳಿಕೆಯಲ್ಲಿ ನಿರ್ಮೂಲನೆ ಎಂಬ ಪದವನ್ನು ಬಳಸಿದ್ದು, ಸೆಕ್ಷನ್ 302 ಅಡಿಯಲ್ಲಿ ಅವರ ವಿರುದ್ದ ಕಾನೂನು ಕ್ರಮಕ್ಕೆ ಒತ್ತಾಯ ಮಾಡಿದ್ದೆ ಎಂದು ಮಹೇಶ್ ತಿಳಿಸಿದ್ದಾರೆ. ಇನ್ನೂ ಮಹೇರ್ಶ ವಿರುದ್ದ ದ್ಚೇಷ ಉತ್ತೇಜಿಸುವ, ಧಾಮಿರ್ಕ ಭಾವನೆಗಳಿಗೆ ಧಕ್ಕೆ ಹಾಗೂ ಪ್ರಚೋದನಕಾರಿ ಭಾಷಣ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Most Popular

To Top