Film News

ವೆಕೇಷನ್ ನಲ್ಲಿ ಚಿಲ್ ಆಗುತ್ತಿರುವ ಹ್ಯಾಟ್ರಿಕ್ ಹಿರೋ, ಅಮೇರಿಕಾ ಪ್ರವಾಸದಲ್ಲಿರುವ ಶಿವಣ್ಣನ ಪೊಟೋಸ್ ವೈರಲ್……!

ಕನ್ನಡ ಸಿನಿರಂಗದ ಸ್ಟಾರ್‍ ನಟ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್‍ ಬ್ಯಾಕ್ ಟು ಬ್ಯಾ‌ಕ್ ಸಿನೆಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಸದ್ಯ ಶಿವರಾಜ್ ಕುಮಾರ್‍ ರವರು ಅಮೇರಿಕಾ ಪ್ರವಾಸದಲ್ಲಿದ್ದಾರೆ. ನಾವಿಕ ವಿಶ್ವ ಕನ್ನಡ ಸಮಾವೇಶದಲ್ಲಿ ಭಾಗಿಯಾಗಲು ಅಮೇರಿಕಾ ಪ್ರವಾಸ ಕೈಗೊಂಡ ಅವರು ಅಲ್ಲಿನ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್‍ ರವರ ಹಾಡನ್ನು ಹಾಡುವ ಮೂಲಕ ಎಲ್ಲರನ್ನೂ ಸೆಳೆದಿದ್ದರು. ಇದೀಗ ಅಮೇರಿಕಾದಲ್ಲಿ ಅವರು ಚಿಲ್ ಆಗುತ್ತಿದ್ದು, ಕೆಲವೊಂದು ಪೊಟೋಗಳು ವೈರಲ್ ಆಗಿದೆ.

ಅಮೇರಿಕಾದಲ್ಲಿ ಆಯೋಜಿಸಿದ್ದ ವಿಶ್ವ ಕನ್ನಡ ಸಮಾವೇಶಕ್ಕಾಗಿ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್‍ ರವರು ಅಮೇರಿಕಾಗೆ ಪ್ರವಾಸ ಕೈಗೊಂಡಿದ್ದರು. ಸಮಾವೇಶ ಮುಗಿದ ಬಳಿಕ ಶಿವಣ್ಣ ಜಾಲಿ ಮೂಡ್ ನಲ್ಲಿದ್ದಾರೆ. ಅಮೇರಿಕಾದಲ್ಲಿನ ಕೆಲವೊಂದು ಸುಂದರ ತಾಣಗಳಿಗೆ ಭೇಟಿ ನೀಡಿದ್ದಾಋಎ. ಲಾಸ್ ಏಂಜಲ್ಸ್ ಮೋನಿಕಾ ಎಂಬ ಪ್ರದೇಶದಲ್ಲಿ ಸುತ್ತಾಡಿದ್ದಾರೆ. ಸಮುದ್ರ ತೀರದಲ್ಲಿ ಕುಳಿತು ಕೆಲವೊಂದು ಪೊಟೋಗಳನ್ನು ತೆಗೆಸಿಕೊಂಡಿದ್ದು, ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇನ್ನೂ ಶಿವಣ್ಣ ಈ ಪೊಟೋಗಳಲ್ಲಿ ತುಂಬಾ ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ.

ಇನ್ನೂ ಶಿವರಾಜ್ ಕುಮಾರ್‍ ಎಲ್ಲಿ ಹೋದರೂ ಸಹ ತುಂಬಾ ಸರಳವಾಗಿ ಕಾಣಿಸಿಕೊಳ್ಳುತ್ತಾರೆ. ಅವರ ಸರಳತೆಗೆ ಅನೇಕರು ಮೆಚ್ಚುಗೆ ಸಹ ಸೂಚಿಸುತ್ತಾರೆ. ಎಷ್ಟು ಸಾಧ್ಯವೋ ಅಷ್ಟು ಸರಳವಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನೂ ಅಮೇರಿಕಾ ಪ್ರವಾಸದಲ್ಲಿರುವ ಶಿವಣ್ಣನ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಅಭಿಮಾನಿಗಳು ತಮ್ಮ ಸೋಷಿಯಲ್ ಮಿಡಿಯಾ ಖಾತೆಗಳಲ್ಲೂ ಸಹ ಈ ಪೊಟೋಗಳನ್ನು ಹಂಚಿಕೊಂಡು ಮತಷ್ಟು ವೈರಲ್ ಮಾಡುತ್ತಿದ್ದಾರೆ. ಇನ್ನೂ ಶಿವಣ್ಣ ಕೊನೆಯದಾಗಿ ಸೂಪರ್‍ ಸ್ಟಾರ್‍ ರಜನಿಕಾಂತ್ ರವರ ಜೈಲರ್‍ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ಪಾತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಹ ದೊರೆತಿದೆ ಎನ್ನಲಾಗಿದೆ.

ಸದ್ಯ ಶಿವರಾಜ್ ಕುಮಾರ್‍ ರವರ ಘೋಸ್ಟ್ ಸಿನೆಮಾ ರಿಲೀಸ್ ಗೆ ಸಿದ್ದವಾಗಿದೆ. ಈ ಸಿನೆಮಾ ವಿದೇಶಗಳಲ್ಲೂ ಸಹ ತೆರೆಕಾಣಲಿದೆ ಎಂದು ಹೇಳಲಾಗಿದೆ. ಅ.19 ರಂದು ಈ ಸಿನೆಮಾ ಅದ್ದೂರಿಯಾಗಿ ತೆರೆಕಾಣಲಿದೆ. ಈ ಸಿನೆಮಾದ ಬಗ್ಗೆ ಭಾರಿ ನಿರೀಕ್ಷೆ ಸಹ ಹುಟ್ಟಿದೆ. ಈ ಸಿನೆಮಾದ ಜೊತೆಗೆ ಶಿವಣ್ಣ ಮತಷ್ಟು ಸಿನೆಮಾಗಳಲ್ಲಿ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ.

Most Popular

To Top