ತನ್ನ ಮುದ್ದಿನ ಮಗನೊಂದಿಗೆ ಕ್ಯೂಟ್ ಪೋಸ್ ಕೊಟ್ಟ ಬಿಕಿನಿ ಬ್ಯೂಟಿ ಇಲಿಯಾನಾ, ವೈರಲ್ ಆದ ಪೊಟೋ…..!

ಬಿಕಿನಿ ಬ್ಯೂಟಿ ಎಂತಲೇ ಕರೆಯಲಾಗುವ ಇಲಿಯಾನಾ ಕೆಲವು ತಿಂಗಳುಗಳ ಹಿಂದೆಯಷ್ಟೆ ತಾನು ಗರ್ಭಿಣಿಯೆಂದು ಸೋಷಿಯಲ್ ಮಿಡಿಯಾ ಮೂಲಕ ತಿಳಿಸಿ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದರು. ಅಂದಿನಿಂದ ಆಕೆ ಸದಾ ಒಂದಲ್ಲ ಒಂದು ಪೋಸ್ಟ್ ಮೂಲಕ…

ಬಿಕಿನಿ ಬ್ಯೂಟಿ ಎಂತಲೇ ಕರೆಯಲಾಗುವ ಇಲಿಯಾನಾ ಕೆಲವು ತಿಂಗಳುಗಳ ಹಿಂದೆಯಷ್ಟೆ ತಾನು ಗರ್ಭಿಣಿಯೆಂದು ಸೋಷಿಯಲ್ ಮಿಡಿಯಾ ಮೂಲಕ ತಿಳಿಸಿ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದರು. ಅಂದಿನಿಂದ ಆಕೆ ಸದಾ ಒಂದಲ್ಲ ಒಂದು ಪೋಸ್ಟ್ ಮೂಲಕ ಸದ್ದು ಮಾಡುತ್ತಲೇ ಇದ್ದರು. ಬೇಬಿಬಂಪ್ ಪೊಟೋಸ್ ಹಂಚಿಕೊಳ್ಳುತ್ತಿದ್ದರು. ಇದೀಗ ಆಕೆ ಮುದ್ದಾದ ಗಂಡು ಮಗುವಿಗೆ ಜನ್ಮ ಕೊಟ್ಟರು. ಇದೀಗ ತನ್ನ ಮಗನೊಂದಿಗೆ ಕ್ಯೂಟ್ ಪೊಟೋ ಒಂದನ್ನು ಹಂಚಿಕೊಂಡಿದ್ದು, ಪೊಟೋ ವೈರಲ್ ಆಗುತ್ತಿದೆ.

ಸಿನಿರಂಗದಲ್ಲಿ ಅನೇಕ ನಟಿಯರು ಮದುವೆಗೂ ಮುಂಚೆಯೇ ಗರ್ಭ ಧರಿಸುತ್ತಿದ ಸನ್ನಿವೇಶಗಳು ಇದೆ. ಈ ಸಾಲಿಗೆ ನಟಿ ಇಲಿಯಾನಾ ಸಹ ಸೇರುತ್ತಾರೆ. ಕೆಲ ನಟಿಯರು ಆ ಗರ್ಭಕ್ಕೆ ಕಾರಣ ಯಾರು ಎಂಬುದನ್ನು ತಿಳಿಸಿರುತ್ತಾರೆ. ಆದರೆ ಇಲಿಯಾನಾ ಮಾತ್ರ ತನ್ನ ಮಗುವಿಗೆ ತಂದೆ ಯಾರು ಎಂಬುದನ್ನು ನಿಗೂಢವಾಗಿಟ್ಟುಕೊಂಡು ಗರ್ಭಿಣಿಯಾಗಿದ್ದಾಗಿ ಘೋಷಣೆ ಮಾಡಿದರು. ಜೊತೆಗೆ ತನ್ನ ಗರ್ಭದ ಬಗ್ಗೆ ಬ್ಯಾಕ್ ಟು ಬ್ಯಾಕ್ ಪೋಸ್ಟ್ ಗಳನ್ನು ಸಹ ಹಂಚಿಕೊಂಡು ಸುದ್ದಿಯಾಗುತ್ತಿದ್ದರು. ಆ ಗರ್ಭಕ್ಕೆ ಕಾರಣ ಯಾರು ಎಂಬ ಅನುಮಾನಗಳು ಪ್ರಶ್ನೆಗಳು ಸೋಷಿಯಲ್ ಮಿಡಿಯಾದಲ್ಲಿ ಎದುರಾಗುತ್ತಲೇ ಇತ್ತು. ಕೊನೆಗೆ ಆತನ ಗರ್ಭಕ್ಕೆ ಕಾರಣ ಯಾರು ಎಂಬುದನ್ನೂ ಸಹ ರಿವೀಲ್ ಮಾಡಿದ್ದರು. ಆದರೆ ಆ ವ್ಯಕ್ತಿ ಯಾರು ಎಂಬ ಬಗ್ಗೆ ಯಾವುದೇ ಮಾಹಿತಿ ಮಾತ್ರ ಇಲ್ಲ.

ಆ.1 ರಂದು ಇಲಿಯಾನ ಮುದ್ದಾದ ಗಂಡು ಮಗುವಿಗೆ ಜನ್ಮ ಕೊಟ್ಟರು. ಈ ಸುದ್ದಿಯನ್ನು ತಮ್ಮ ಅಭಿಮಾನಿಗಳಿಗಾಗಿ ಆಕೆ ಮಗನ ಪೊಟೋ ಜೊತೆಗೆ ಆಕೆ ಮಗನಿಗೆ ಹೆಸರನ್ನು ಸಹ ಇಟ್ಟಿದ್ದಾರೆ. ಇಲಿಯಾನಾ ತನ್ನ ಮಗನಿಗೆ ಕೋವಾ ಫಿನಿಕ್ಸ್ ಡೊಲಾನ್ ಎಂದು ಹೆಸರಿಟ್ಟಿದ್ದಾರೆ. ಇದೀಗ ಆಕೆ ಮತ್ತೊಮ್ಮೆ ತನ್ನ ಮಗನೊಂದಿಗೆ ಕಾಣಿಸಿಕೊಂಡಿದ್ದಾರೆ. ಮಗ ಜನಿಸಿ ಎರಡು ತಿಂಗಳಾದ ಹಿನ್ನೆಲೆಯಲ್ಲಿ ಆಕೆ ಈ ಪೊಟೋ ಹಂಚಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಈ ಪೊಟೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಭಿಮಾನಿಗಳು ಸಹ ಇಬ್ಬರೂ ತುಂಬಾ ಕ್ಯೂಟ್ ಆಗಿದ್ದೀರಾ ಎಂದು ಕಾಮೆಂಟ್ ಗಳ ಮೂಲಕ ಪೊಟೋ ಅನ್ನು ಮತಷ್ಟು ಕಡೆ ವೈರಲ್ ಮಾಡುತ್ತಿದ್ದಾರೆ.

ಇನ್ನೂ ಸ್ಟಾರ್‍ ನಟಿ ಇಲಿಯಾನಾ ಕಡಿಮೆ ಸಮಯದಲ್ಲೇ ಟಾಲಿವುಡ್ ನಲ್ಲಿ ಸ್ಟಾರ್‍ ನಟಿಯಾದರು. ಆಕೆಯ ಕೆರಿಯರ್‍ ಪೀಕ್ಸ್ ನಲ್ಲಿರುವಾಗಲೇ ಆಕೆ ತೆಗೆದುಕೊಂಡ ಕೆಲವೊಂದು ತಪ್ಪಾದ ನಿರ್ಣಯಗಳಿಂದ ಆಕೆಯ ಕೆರಿಯರ್‍ ಫೇಡ್ ಔಟ್ ಆಯ್ತು ಎಂದು ಹೇಳಬಹುದಾಗಿದೆ. ಜೊತೆಗೆ ಆಕೆಯ ವೈಯುಕ್ತಿಕ ಕಾರಣದಿಂದಲೂ ಸಹ ಆಕೆ ಸಿನೆಮಾಗಳಿಂದ ದೂರವುಳಿಯಬೇಕಾಯಿತು ಎನ್ನಲಾಗಿದೆ. ಇದೀಗ ಆಕೆ ತಾಯ್ತನದ ಅನುಭೂತಿಯನ್ನು ಅನುಭವಿಸುತ್ತಾ ಜೀವನ ಸಾಗಿಸುತ್ತಿದ್ದಾರೆ.